ಮಡಿಕೇರಿ ಡಿ.17 NEWS DESK : ಭಾರತದ ‘ಮೇಕಿಂಗ್ ಇಂಡಿಯಾ’ ಎನ್ನುವ ವಿಶಾಲ ಚಿಂತನೆಯ ಪ್ರಯತ್ನಗಳನ್ನು ಮುರಿಯುವ ಮೂಲಕ ರಾಷ್ಟ್ರದ ಏಕತೆ ಮತ್ತು ಅಖಂಡತೆಗೆ ಧಕ್ಕೆ ತರುವ ಪ್ರಯತ್ನಗಳು ನಡೆಯುತ್ತಿದೆ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ಎಸ್. ಅವರು ಆರೋಪಿಸಿದ್ದಾರೆ. ನಗರದ ಕೊಡಗು ಗೌಡ ಸಮಾಜದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯುತ್ತಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ದಕ್ಷಿಣ ಪ್ರಾಂತದ 45ನೇ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ‘ರಾಷ್ಟ್ರ’ ಪ್ರಥಮ ಎನ್ನುವ ಉದಾತ್ತ ಚಿಂತನೆಯನ್ನು ಮೈಗೂಡಿಸಿಕೊಂಡ ಯುವ ಸಮೂಹವು, ಪಾಶ್ಚಿಮಾತ್ಯ ಶಕ್ತಿಗಳ ಒತ್ತಡಗಳನ್ನು ಮೀರಿ ಭಾರತದ ಅಭ್ಯುದಯಕ್ಕೆ ಶ್ರಮಿಸುತ್ತಿದೆ. ಇಂದಿನ ಯುವ ಸಮೂಹ ಸನಾತನ ಸಂಸ್ಕøತಿಯ ಮಹತ್ವವನ್ನು ಅರಿತು, ಅದರ ತಳಹದಿಯ ಮೇಲೆ ರಾಷ್ಟ್ರದ ಪುನರ್ ನಿರ್ಮಾಣಕ್ಕೆ ತÀನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ. ಇದಕ್ಕೆ ಬೆನ್ನೆಲುಬಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯನಿರ್ವಹಿಸುತ್ತಿದೆ ಎಂದರು. ವಿಶ್ವದ ಬಲಾಢ್ಯ ದೇಶಗಳೆಂದು ಗುರುತಿಸಿಕೊಂಡಿರುವ ಅಮೇರಿಕಾ, ಚೈನಾ ಮೊದಲಾದ ರಾಷ್ಟ್ರಗಳು ಭಾರತವನ್ನು ಮುರಿಯುವ ಪ್ರಯತ್ನಗಳನ್ನು ಮಾಡುತ್ತಲೆ ಬರುತ್ತಿವೆ. ಇದರ ಭಾಗವಾಗಿ ಎಂಬಂತೆ ಅಮೇರಿಕಾ ಅಧ್ಯಕ್ಷ ಟ್ರಂಪ್ ಅವರು, ಭಾರತದ ಆರ್ಥಿಕತೆ ‘ಡೆಡ್ ಎಕಾನಮಿ’ ಎಂದು ತಿಳಿಸಿದ್ದಾರೆ. ದೀಪಾವಳಿಯ ಒಂದು ದಿನದಂದು ಭಾರತದಲ್ಲಿ ನಡೆಯುವ ವ್ಯಾಪಾರ ವಹಿವಾಟುಗಳ ಒಟ್ಟು ಮೊತ್ತ ಎಷ್ಟೋ ರಾಷ್ಟ್ರಗಳ ವಾರ್ಷಿಕ ಖರ್ಚುವೆಚ್ಚಗಳಷ್ಟಾಗುತ್ತದೆ. ಹೀಗಿದ್ದ ಮೇಲೆ ಭಾರತÀದ್ದು ಡೆಡ್ ಎಕಾನಮಿ ಹೇಗಾಗುತ್ತದೆ ಎಂದು ಪ್ರಶ್ನಿಸಿದರು. ರಾಷ್ಟ್ರದ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರ ಭಕ್ತ ಆರ್‍ಎಸ್‍ಎಸ್ ಸಂಸ್ಥೆ 100 ವರ್ಷಗಳನ್ನು ಪೂರೈಸಿದ್ದರೆ, ಬ್ರ್ರಿಟೀಷರ ಪಾರತಂತ್ರ ವ್ಯವಸ್ಥೆಯಿಂದ ಹೊರ ಬರುವ ನಿಟ್ಟಿನಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರೇರಣಾ ಶಕ್ತಿಯಾಗಿ ಕಾರ್ಯನಿರ್ವಹಿಸಿದ ‘ವಂದೇ ಮಾತರಂ’ಗೆ 150 ವರ್ಷ, ಬ್ರ್ರಿಟೀಷರ ವಿರುದ್ಧ ಹೋರಾಟಗಳನ್ನು ಮಾಡಿದ ರಾಣಿ ಅಬ್ಬಕ್ಕ ಅವರ 500ನೇ ವರ್ಷಾಚರಣೆಯು ನಡೆದಿದ್ದು, ಇದು ಪರಿವರ್ತನೆಯ ದಿನಮಾನಗಳಾಗಿದೆ. ಇಂತಹ ಅವಧಿಯಲ್ಲಿನ ಎಐ ತಂತ್ರಜ್ಞಾನ, ಚಾಟ್ ಜಿಪಿಸಿ ಮೊದಲಾದ ಸಾಮಾಜಿಕ ಜಾಲತಾಣದ ಪ್ರಭಾವಗಳಿಂದ ಮುಕ್ತವಾಗಿ ಪರಸ್ಪರ ವಿಶ್ವಾಸದ ಮೂಲಕ ಭಾರತದ ಪುನರ್ ನಿರ್ಮಾಣದ ಪ್ರಯತ್ನಗಳಲ್ಲಿ ಎಬಿವಿಪಿ ಸದಾ ತನ್ನನ್ನು ತೊಡಗಿಸಿಕೊಂಡಿರುವುದಾಗಿ ಬಾಲಕೃಷ್ಣ ತಿಳಿಸಿದರು. ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ರಾಷ್ಟ್ರೀಯ ಮಟ್ಟದ ಅಥ್ಲಿಟ್ ತೀತಮಾಡ ಅರ್ಜುನ್ ದೇವಯ್ಯ ಅವರು ಯಾವುದೇ ವಿಚಾರಗಳು ಮತ್ತು ತತ್ತ್ವಗಳಿಂದ ಜನರ ಬದಲಾವಣೆ ಸಾಧ್ಯವಾಗಲಾರದು. ಬದಲಾಗಿ, ಮಹಾನ್ ವ್ಯಕ್ತಿಗಳ ತತ್ತ್ವಾದರ್ಶಗಳ ಅಧ್ಯಯನ, ಪಾಲನೆ, ಅಭ್ಯಾಸಗಳಿಂದ ಮಾತ್ರ ಬದಲಾವಣೆ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮ ಚಿಂತನೆಯನ್ನು ಹರಿಸಬೇಕೆಂದು ಕರೆ ನೀಡಿದರು. ನಿಮ್ಮ ಮನಸು ಗಟ್ಟಿಯಾಗಿದ್ದು, ಚಿಂತನೆಗಳು ಎಂದಿಗೂ ಚಂಚಲವಾಗದಿರಲಿ ಎಂದು ಕಿವಿ ಮಾತುಗಳನ್ನಾಡಿದ ಅವರು, ತಾನು ಸಮಾಜದಲ್ಲಿ ಏನನ್ನು ಸಾಧಿಸಬೇಕೆನ್ನುವುದನ್ನು ಮೊದಲು ಅರಿತು ಆ ನಿಟ್ಟಿನಲ್ಲಿ ಅವಿಶ್ರಾಂತವಾದ ಪ್ರಯತ್ನಗಳಿಗೆ ನಿಮ್ಮನ್ನು ನೀವು ತೆರೆದುಕೊಳ್ಳಬೇಕೆಂದು ತಿಳಿಸಿದರಲ್ಲದೆ, ಅಧ್ಯಯನವನ್ನು ಚಿತ್ತ ಚಾಂಚಲ್ಯಕ್ಕೆ ಒಳಗಾಗದೆ ನಡೆಸುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಐಎಎಸ್ ಮೊದಲಾದ ಉನ್ನತ ಶಿಕ್ಷಣವನ್ನು ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸಬಹುದು. ಇಂತಹ ಹುದ್ದೆಗಳನ್ನು ಯುವ ಸಮೂಹ ಅಲಂಕರಿಸಬೇಕು ಮತ್ತು ಆ ಮೂಲಕ ಸಮಾಜದ ಭ್ರಷ್ಟತೆಯನ್ನು ತೆಡೆಯುವ ಪ್ರಯತ್ನಗಳಿಗೆ ಮುಂದಾಗಬೇಎಂದು ಸಲಹೆಯನ್ನಿತ್ತರು. ಎಬಿಸಿಪಿ ದಕ್ಷಿಣ ಪ್ರಾಂತ ಅಧ್ಯಕ್ಷರಾದ ಡಾ.ರವಿ ಮಂಡ್ಯ ಅವರು ಮಾತನಾಡಿ, ಎಬಿವಿಪಿ ರಾಷ್ಟ್ರದಾದ್ಯಂತ 76.96 ಲಕ್ಷ ಸದಸ್ಯರನ್ನು ಹೊಂದುವ ಮೂಲಕ ವಿಶ್ವದ ಏಕೈಕ ಬೃಹತ್ ಸಂಘಟನೆಯಾಗಿದೆ. ಇದರ 1300 ಕ್ಕೂ ಹೆಚ್ಚಿನ ಶಾಖೆಗಳು ರಾಷ್ಟ್ರವ್ಯಾಪಿ ಕಾರ್ಯಾಚರಿಸುತ್ತಿವೆ. ಆಯಾ ಕಾಲ ಘಟ್ಟದ ಶಿಕ್ಷಣ ವ್ಯವಸ್ಥೆಯಲ್ಲಿನ ಸಂಕಷ್ಟಗಳು, ದೇಶ ಎದುರಿಸಿದ ಸಮಸ್ಯೆ, ಸಂಕಷ್ಟಗಳಿಗೆ ಸ್ಪಂದಿಸುತ್ತ ಎಬಿವಿಪಿ ಕಾರ್ಯನಿರ್ವಹಿಸಿಕೊಂಡು ಬಂದಿರುವುದಾಗಿ ತಿಳಿಸಿದರು. ಪ್ರಾಂತ ಸಮ್ಮೇಳದ ಸ್ವಾಗತ ಸಮಿತಿ ಅಧ್ಯಕ್ಷರಾದ ಎಂ.ಈಶ್ವರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಹೊಳ್ಳ, ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಮಂಧಾರ, ದಕ್ಷಿಣ ಪ್ರಾಂತದ ಕಾರ್ಯದರ್ಶಿ ಗೋಪಿ ರಂಗಸ್ವಾಮಿ ಉಪಸ್ಥಿತರಿದ್ದರು. :: ಪ್ರದರ್ಶನ ಉದ್ಘಾಟನೆ :: ಸಮಾವೇಶದ ಉದ್ಘಾಟನೆಗೂ ಮುನ್ನ ಬೆಳಗ್ಗೆ ಪದ್ಮಶ್ರೀ ರಾಣಿ ಮಾಚಯ್ಯ ಅವರು, ಫೀ.ಮಾ.ಕೆ.ಎಂ. ಕಾರ್ಯಪ್ಪ, ಜನರಲ್ ಕೆ.ಎಸ್.ತಿಮ್ಮಯ್ಯ ಅವರ ಕುರಿತು ಹಾಗೂ ಎಬಿವಿಪಿ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡುವ ಪ್ರದರ್ಶನವನ್ನು ಉದ್ಘಾಟಿಸಿದರು.











