ಮಡಿಕೇರಿ ಡಿ.19 NEWS DESK : ಕರಾವಳಿಯ ಸಾಂಸ್ಕೃತಿಕ ನಗರಿ ಪುತ್ತೂರಿನ ಹೃದಯಭಾಗದಲ್ಲಿರುವ ಜಿ.ಎಲ್. ಮಾಲ್ ಇದೀಗ ಚಳಿಗಾಲದ ಸಂಭ್ರಮಕ್ಕೆ ಸಜ್ಜಾಗಿದೆ. ಶಾಪಿಂಗ್ ಪ್ರಿಯರಿಗಾಗಿ ಹಾಗೂ ಆಹಾರ ಪ್ರೇಮಿಗಳಿಗಾಗಿ ಇದೇ ಡಿಸೆಂಬರ್ 20ರಿಂದ ಜನವರಿ 04ರವರೆಗೆ ಅದ್ಧೂರಿ ‘ಜಿ.ಎಲ್.ಮಾಲ್ ಉತ್ಸವ’ ಹಾಗೂ ‘ಫುಡ್ ಫೆಸ್ಟಿವಲ್’ ಆಯೋಜಿಸಲಾಗಿದೆ. ಹದಿನಾರು ದಿನಗಳ ಕಾಲ ನಡೆಯಲಿರುವ ಈ ಮೇಳವು ರಿಯಾಯಿತಿಗಳ ಮಹಾಪೂರವನ್ನೇ ಹರಿಸಲಿದ್ದು, ಗ್ರಾಹಕರಿಗೆ ಮನರಂಜನೆಯ ಜೊತೆಗೆ ಅದೃಷ್ಟ ಪರೀಕ್ಷೆಗೂ ವೇದಿಕೆ ಕಲ್ಪಿಸಿದೆ. :: ನೋಡೋಕೆ ಎರಡು ಕಣ್ಣು ಸಾಲದು : ಏನೆಲ್ಲಾ ವಿಶೇಷತೆಗಳಿವೆ..? :: ಲಕ್ಕಿ ಡ್ರಾ ಸೌಭಾಗ್ಯ: ಮಾಲ್‌ನಲ್ಲಿ ಶಾಪಿಂಗ್ ಮಾಡುವ ಅದೃಷ್ಟಶಾಲಿ ಗ್ರಾಹಕರಿಗೆ ಅತ್ಯಾಧುನಿಕ ಸ್ಮಾರ್ಟ್‌ಫೋನ್ ಗೆಲ್ಲುವ ಬಂಪರ್ ಅವಕಾಶವಿದೆ. ಆಕರ್ಷಕ ರಿಯಾಯಿತಿಗಳು: ಮಾಲ್‌ನ ಎಲ್ಲಾ ಪ್ರಮುಖ ಮಳಿಗೆಗಳಲ್ಲಿ ಹಬ್ಬದ ಪ್ರಯುಕ್ತ ವಿಶೇಷ ದರ ಕಡಿತ ಹಾಗೂ ಶಾಪಿಂಗ್ ಕೂಪನ್‌ಗಳು ಲಭ್ಯವಿವೆ. :: ರೀಲ್ಸ್ ಚಾಲೆಂಜ್ : : ಸಾಮಾಜಿಕ ಜಾಲತಾಣ ಪ್ರಿಯರಿಗಾಗಿ ವಿಶೇಷ ‘ರೀಲ್ಸ್ ಚಾಲೆಂಜ್’ ಆಯೋಜಿಸಲಾಗಿದ್ದು, ಸೃಜನಶೀಲತೆಗೆ ಬಹುಮಾನದ ಗೌರವ ಸಿಗಲಿದೆ. :: ವಾರಾಂತ್ಯದ ಮಜವನ್ನು ಇಮ್ಮಡಿಗೊಳಿಸಲು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ :: ಡಿ. 21 (ಶನಿವಾರ): ಸಂಜೆ 5 ಗಂಟೆಯಿಂದ ಅಕ್ಷಯ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ಹಾಗೂ ಕಣ್ಮನ ಸೆಳೆಯುವ ಫ್ಯಾಷನ್ ಶೋ ನಡೆಯಲಿದೆ. ಡಿ. 28 (ಶನಿವಾರ): ಬೆಳಿಗ್ಗೆ 10 ಗಂಟೆಯಿಂದ ರೋಟರಿ ಕ್ಲಬ್ ಯುವ ಸಹಯೋಗದೊಂದಿಗೆ 7 ವಿಭಾಗಗಳಲ್ಲಿ ಬೃಹತ್ ಚಿತ್ರಕಲಾ ಸ್ಪರ್ಧೆ ನಡೆಯಲಿದ್ದು, ಪುಟಾಣಿ ಕಲಾವಿದರಿಗೆ ಇದು ಸದವಕಾಶವಾಗಿದೆ. :: ಮಾಹಿತಿಗಾಗಿ ಸಂಪರ್ಕಿಸಿ :: ಚಿತ್ರಕಲಾ ಸ್ಪರ್ಧೆ ಹಾಗೂ ಇತರ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಸಕ್ತಿ ಇರುವವರು 7411962374 ಅಥವಾ 7411962375 ಸಂಖ್ಯೆಯನ್ನು ಸಂಪರ್ಕಿಸಲು ಕೋರಲಾಗಿದೆ. ಈ ಚಳಿಗಾಲದ ಸಂಭ್ರಮವನ್ನು ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಆಚರಿಸಲು ಜಿ.ಎಲ್. ಮಾಲ್‌ಗೆ ಇಂದೇ ಭೇಟಿ ನೀಡಿ, ನಿಮ್ಮದಾಗಿಸಿಕೊಳ್ಳಿ ಅದ್ಭುತ ಉಡುಗೊರೆಗಳನು..!











