ನಾಪೋಕ್ಲು ಡಿ.22 NEWS DESK : ಹಳೇತಾಲ್ಲೂಕು ಅಂಗನವಾಡಿ ಕೇಂದ್ರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ ನಡೆಯಿತು. ಹಳೇತಾಲ್ಲೂಕು ಅಂಗನವಾಡಿ ಕೇಂದ್ರದಲ್ಲಿ ಪಂಚಾಯತ್ ಸದಸ್ಯರು, ಸ್ಥಳ ದಾನಿಗಳಾದ ಕುಲ್ಲೇಟಿರ ಅರುಣ ಬೇಬ, ಪಂಚಾಯತ್ ಸದಸ್ಯರಾದ ಹೇಮಾ ಅರುಣ್ ಮತ್ತು ಪೊಲೀಸ್ ಠಾಣೆಯ ಮುಖ್ಯಪೇದೆ ರಾಮಕೃಷ್ಣ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕುಲ್ಲೇಟಿರ ಅರುಣ ಬೇಬ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಪೋಲಿಯೋ ಮಹತ್ವದ ಬಗ್ಗೆ ವಿವರವಾಗಿ ಮಾಹಿತಿ ನೀಡಿ ಶುಭ ಹಾರೈಸಿದರು. ಈ ಸಂದರ್ಭ ಅಂಗನವಾಡಿ ಕಾರ್ಯಕರ್ತಯಾರಾದ ಭಾಗ್ಯವತಿ, ಪವಿತ್ರ, ಸುಜಾತಾ, ಆಶಾ ಕಾರ್ಯಕರ್ತರಾದ ರಮ್ಯ ಹಾಗೂ ಪೋಷಕರು ಮಕ್ಕಳು ಹಾಜರಾಗಿದ್ದರು.
ವರದಿ : ದುಗ್ಗಳ ಸದಾನಂದ.











