
ವಿರಾಜಪೇಟೆ ಡಿ.24 NEWS DESK : ಕಾನೂರು ವಲಯದ ಕೋತೂರು ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಕಾರ್ಯಕ್ರಮದಡಿಯಲ್ಲಿ ಹೈನುಗಾರಿಕೆ ಮಾಹಿತಿ ಕಾರ್ಯಕ್ರಮ ಸಮಗ್ರ ಕೃಷಿಕರಾದ ಕೃಷ್ಣ ಅವರ ಮನೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಪಶು ವೈದ್ಯಧಿಕಾರಿಗಳಾದ ಡಾ. ಚಂದ್ರಶೇಖರ್ ಅವರು, ಲಾಭದಾಯಕ ಹೈನುಗಾರಿಕೆ, ಹಟ್ಟಿ ರಚನೆ ವಿಧಾನಗಳು, ಹಸುಗಳ ಆಯ್ಕೆ, ಕರುಗಳ ಪಾಲನೆ, ಹಸುಗಳಿಗೆ ಸಂಪೂರ್ಣ ಆಹಾರ ನೀಡುವ ಬಗ್ಗೆ, ಹಸುಗಳಿಗೆ ಬರುವ ಸಾಂಕ್ರಾಮಿಕ ಕಾಯಿಲೆಗಳು ಮತ್ತು ಸಿಗುವ ಲಸಿಕೆಗಳ ಬಗ್ಗೆ ಮತ್ತು ಪಶು ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ, ಹೈನುಗಾರಿಕೆಯ ಸ್ವಯಂ ಉದ್ಯೋಗಕ್ಕೆ ಒಂದು ಉತ್ತಮ ಅವಕಾಶವಾಗಿದೆ. ಇದರಿಂದ ಜನರು ತಮ್ಮದೇ ಆದ ಉದ್ಯೋಗವನ್ನು ಸೃಷ್ಟಿಸಿಕೊಳ್ಳುವುದು ಎಂದು ಸಮಗ್ರ ಮಾಹಿತಿ ನೀಡಿದರು. ಕೃಷಿ ಮೇಲ್ವಿಚಾರಕರು ವಸಂತ ಗ್ರಾಮಾಭಿವೃದ್ಧಿ ಯೋಜನೆಯ ಮುಖಾತರ ಹೈನುಗಾರಿಕೆಗೆ ಸಿಗುವ ತರಬೇತಿ ಪ್ರಗತಿ ನಿಧಿ ಇನ್ನಿತರ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಕಾನೂರು ಪಶು ಸಖಿಯಾದ ಮೋನಿಕಾ, ಸೇವಾ ಪ್ರತಿನಿಧಿ ಕಾವೇರಿ, ಸಂಘದ ಸದಸ್ಯರು, ಊರಿನ ಗ್ರಾಮಸ್ಥರು ಇದ್ದರು.









