ಸುಂಟಿಕೊಪ್ಪ, ಡಿ.24 NEWS DESK : ಮಹಾ ಶಿವರಾತ್ರಿಯ ಹಿನ್ನೆಲೆಯಲ್ಲಿ ಕೊಯಂಬತ್ತೂರಿನ ಈಶಾ ಕೇಂದ್ರ್ರದ ವತಿಯಿಂದ ಕೃಷ್ಣನ ನಗರಿ ಉಡುಪಿಯಿಂದ ಆರಂಭಗೊಂಡ ‘ಆದಿ ಯೋಗಿ ರಥ ಯಾತ್ರೆ’ಗೆ ಗದ್ದೆಹಳ್ಳದ ಗಾಂಧಿ ವೃತ್ತದಲ್ಲಿ ಭವ್ಯ ಸ್ವಾಗತ ಕೋರಲಾಯಿತು. ಗದ್ದೆಹಳ್ಳದಿಂದ ನೂರಾರು ಸಂಖ್ಯೆ ಯಲ್ಲಿ ನೇರಿದ್ದ ಭಕ್ತಾಧಿಗಳು ರಥವನ್ನು ಎಳೆದು ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟದಲ್ಲಿ ತಂಗಿತು. ನಂತರ ಬೆಳಗ್ಗಿನ ಪೂಜೆಯನ್ನು ಸಲ್ಲಿಸಿದ ಬಳಿಕ ಕುಶಾಲನಗರದತ್ತ ಪ್ರಯಾಣ ಬೆಳೆಸಿತು. ಶ್ರೀಪುರಂ ಅಯ್ಯಪ್ಪ ಕ್ಷೇತ್ರದ ಬಳಿ ಪೂಜೆಯನ್ನು ಸ್ವೀಕರಿಸಿದ ಬಳಿಕ ಕೊಡಗರಹಳ್ಳಿ ಶ್ರೀ ಬೈತೂರಪ್ಪ ದೇವಾಲಯಕ್ಕೆ ಆಗಮಿಸಿತು. ದೇವಾಲಯದಲ್ಲಿ ಪೂಜೆ ನೇರವೇರಿಸಿದ ಬಳಿಕ ಧ್ಯಾನ ಭಜನೆಯ ಮೂಲಕ ಕೊಡಗರಹಳ್ಳಿ ಮಾರುತಿ ನಗರದ ಶ್ರೀ ಆಂಜನೇಯ ದೇವಸ್ಥಾನ, 7ನೇ ಹೊಸಕೋಟೆಯ ಶ್ರೀ ಮಹಾಗಣಪತಿ ಮತ್ತು ಶ್ರೀ ಕೃಷ್ಣ ದೇವಸ್ಥಾನ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಚಾರಿಟೇಬಲ್ ಟ್ರಸ್ಟ್ ನಲ್ಲಿ ವಿಶೇಷ ಪೂಜೆ ಸಲ್ಲಿಸಿ, ಮಧ್ಯಾಹ್ನ ದ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಸಂದರ್ಭ ಆಯಾ ವ್ಯಾಪ್ತಿಯ ದೇವಸ್ಥಾನ ಸೇವಾ ಸಮಿತಿಗಳು ವಿವಿಧ ಸಂಘಟನೆಗಳು ರಥವನ್ನು ಎಳೆಯಲು ಕೈ ಜೋಡಿಸಿದ್ದು ಮಾತ್ರವಲ್ಲದೆ ಮನೆ ಮತ್ತು ವಾಣಿಜ್ಯ ಮಳಿಗೆಗಳ ಮುಂದೆ ಹಾದು ಹೋಗುವಾಗ ಈಡುಗಾಯಿ ಹೊಡೆದು ಆರತಿ ಎತ್ತಿ ಭಕ್ತಿಯಿಂದ ನಮಿಸಿದರು. ಸಂಜೆ ಕುಶಾಲನಗರ ತಲುಪಿ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ತಂಗಲಿದೆ. ಡಿ.25 ರಂದು ಬೆಳಿಗ್ಗೆ ರಥಯಾತ್ರೆಯು ಬೆಟ್ಟದಪುರ ಕೆ.ಆರ್.ನಗರ ಮಾರ್ಗವಾಗಿ ಮೈಸೂರು ತಲುಪಲಿದ್ದು, ಫೆ.13 ರಂದು ಕೊಯಮಾತ್ತೂರಿನಲ್ಲಿರುವ ಈಶ ಆದಿಯೋಗಿ ಕೇಂದ್ರದಲ್ಲಿ ಫೆ.14 ಮಹಾಶಿವರಾತ್ರಿಯಂದು ಸಮರ್ಪಣೆಗೊಳ್ಳಲಿದೆ.










