ನಾಪೋಕ್ಲು ಡಿ.25 NEWS DESK : ಮೇರಿ ಮಾತೆಯ ದೇವಾಲಯಲ್ಲಿ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಸುಂದರವಾಗಿ ನಿರ್ಮಿಸಿದ್ದ ಗೋದಲಿಯಲ್ಲಿ ಬಾಲ ಏಸುವಿನ ಪ್ರತಿಕೃತಿಯನ್ನು ಧರ್ಮ ಗುರುಗಳಾದ ರೆ. ಫಾ ಜ್ಞಾನ ಪ್ರಕಾಶ್ ಪ್ರತಿಷ್ಠಾಪಿಸಿ ಬಲಿಪೂಜೆ, ಪ್ರಾರ್ಥನೆ ನೆರವೇರಿಸಿದರು. ನಂತರ ಏಸುವಿನ ಸಂದೇಶವನ್ನು ಸಾರಿ ಹಬ್ಬದ ಶುಭಾಶಯ ಕೋರಿದರು. ದೇವಾಲಯವನ್ನು ಹಬ್ಬದ ಪ್ರಯುಕ್ತ ವಿದ್ಯುತ್ ಅಲಂಕಾರಿಸಲಾಗಿತ್ತು. ಭವ್ಯವಾದ ಅಲಂಕಾರದ ಆಕರ್ಷಕ ಗೋದಲಿ ನಿರ್ಮಿಸಲಾಗಿತ್ತು. ಏಸುವಿನ ಗೋದಲಿ ನಿರ್ಮಿಸುವ ಸ್ಪರ್ಧೆ ಆಯೋಜಿಲಾಗಿದ್ದು, ಪ್ರಥಮ ಬಹುಮಾನವನ್ನು ಬಾಬಿ ವೇಗಸ್, ದ್ವಿತೀಯ ಬಹುಮಾನ ಕೆ.ಜೆ.ರಾಯ್ ಹಾಗೂ ತೃತೀಯ ಬಹುಮಾನ ಜಾಲಿ ಅಬ್ರಹಾಂ ಪಡೆದುಕೊಂಡರು. ವಿಜೇತರಿಗೆ ಧರ್ಮಗಳು ಬಹುಮಾನ ವಿತರಿಸಿದರು. ರೋಲಿಂಗ್ ಟ್ರೋಫಿಯನ್ನು ಕೆ.ಜೆ.ಜಾಯ್ ಪ್ರಾಯೋಜಕರಾಗಿದ್ದರು. ಸಾಂತಕ್ಲಾಸ್ ವೇಸದಾರಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಉಡುಗೊರೆ ಕೊಟ್ಟು ಸಂಭ್ರಮಿಸಿದರು. ಈ ಸಂದರ್ಭ ಕ್ರೈಸ್ತ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಪಾಲನಾ ಸಮಿತಿ ಸದಸ್ಯರು, ಯುವಕ ಸಂಘದ ಸದ್ಯಸರು ಇದ್ದರು.
ವರದಿ : ದುಗ್ಗಳ ಸದಾನಂದ.











