ಮಡಿಕೇರಿ ಡಿ.29 NEWS DESK : ಕ್ರೀಡೆಯು ಸಮಾಜದಲ್ಲಿ ಒಗ್ಗಟ್ಟನ್ನು ಮೂಡಿಸುತ್ತದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ವಿರಾಜಪೇಟೆಯ ಸಂತ ಅನ್ನಮ್ಮ ಶಾಲಾ ಮೈದಾನದಲ್ಲಿ ಆಯೋಜನೆಗೊಂಡ, ಐಪಿಎಲ್ ಟಿ-10 ಕ್ರಿಕೆಟ್ ಪಂದ್ಯಾವಳಿಯಗೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಕ್ರೀಡಾಪಟುಗಳಿಗೆ ಶುಭಹಾರೈಸಿದರು. ಕ್ರೀಡೆಯಲ್ಲಿ ಎಲ್ಲರೂ ತಮ್ಮನ್ನು ತೊಡಗಿಸಿಕೊಂಡು ಉತ್ತಮ ರೀತಿಯ ಫಲಿತಾಂಶ ಬರುವಲ್ಲಿ ಸರ್ವರ ಪ್ರಯತ್ನ ಮುಖ್ಯವಾದದ್ದು. ಕ್ರೀಡೆಯು ಸಮಾಜದಲ್ಲಿ ಶಾಂತಿ ಸೌಹಾರ್ದತೆ ನೆಲೆಸಲು ಸಹಕಾರಿಯಾಗಲಿದೆ. ಸೋಲು ಗೆಲುವನ್ನು ಎಲ್ಲರೂ ಸಮಾನವಾಗಿ ಸ್ವೀಕರಿಸಿ ಉತ್ತಮ ಆಟಗಾರರಾಗಿ ಎಂದು ಹಾರೈಸಿದರು. ವೇದಿಕೆಯಲ್ಲಿ ತಾಲೂಕು ಅಲ್ಪಸಂಖ್ಯಾತರ ಸದಸ್ಯರು ಕೊಳುಮಂಡ ರಫೀಕ್, ಸದಸ್ಯರು, ಪದಾಧಿಕಾರಿಗಳು, ಮಾಜಿ ಪುರಸಭೆ ಸದಸ್ಯರು ರಾಫಿ, ಮತೀನ್, ಅತಿಫ್ ಮನ್ನ, ಸ್ಥಾಯಿ ಸಮಿತಿ ಅಧ್ಯಕ್ಷರು ಜಲಿಲ್, ಪಕ್ಷದ ಮುಖಂಡರು ನಾಸಿರ್, ಸುಭಾಸ್ ನಾಣಯ್ಯ, ಯುವ ಕಾಂಗ್ರೆಸ್ ಉಪಾಧ್ಯಕ್ಷರು ಅಂಕಿತ್ ಪೊನ್ನಪ್ಪ, ಮೆಲ್ ರೋಯ್ ಲೋಬೊ, ಜಗದೀಶ್, ಬೀನಾ ಜಗದೀಶ್ ಹಾಗೂ ಕಾರ್ಯಕ್ರಮ ಆಯೋಜಕರು ಉಪಸ್ಥಿತರಿದ್ದರು.











