ಸುಂಟಿಕೊಪ್ಪ ಡಿ.29 NEWS DESK : ಆಧುನಿಕ ಜೀವನದ ಒತ್ತಡ ಜೀವನ ಶೈಲಿ ಮತ್ತು ಆಶಾಂತಿಯಿಂದ ಆರೋಗ್ಯ ಮತ್ತು ನೆಮ್ಮದಿ ಹಾಳಾಗುತ್ತಿರುವ ಈ ದಿನಗಳಲ್ಲಿ ವಿವಿಧ ರೀತಿಯ ಚಿಕಿತ್ಸಾ ಕೇಂದ್ರಗಳು ತಲೆ ಎತ್ತುತ್ತಿರುವುದು ಎಲ್ಲಾರಿಗೂ ತಿಳಿದ ವಿಚಾರ. ಆದರೆ ಒತ್ತಡದ ಬದುಕನ್ನು ಆಶಾಂತಿ ಮತ್ತು ನಿರಾಶೆಯ ನಡುವೆ ಜ್ಞಾನವನ್ನು ಪಡೆದು ಧ್ಯಾನದಿಂದ ಸನತಾನ ಧರ್ಮದ ಮೂಲಪವಿತ್ರ ಗ್ರಂಥಗಳಾದ ವೇದ, ಉಪನಿಷತ್, ಭಗವತ್ ಗೀತೆ ಗ್ರಂಥಗಳ ಸ್ವ ಅಧ್ಯಯನ, ಮಾರ್ಗದರ್ಶನ ಪಡೆಯುವ ಹಿನ್ನಲೆಯಲ್ಲಿ ಸುಂಟಿಕೊಪ್ಪ ಹೋಬಳಿಯ ಕಂಬಿಬಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಅತ್ತೂರು-ನಲ್ಲೂರು ಗ್ರಾಮದಲ್ಲಿ ಶ್ರೀ ಬ್ರಹ್ಮಜ್ಞಾನ ಧ್ಯಾನ ಮಂದಿರ ಆಶಾಕಿರಣವಾಗಿ ರೂಪುಗೊಂಡಿದೆ. ಪತ್ರಿಕೆಯೊಂದಿಗೆ ತಮ್ಮ ಕನಸ್ಸಿನ ಯೋಜನೆ ಇದೀಗ ಅಂಬೆಗಾಲಿಟ್ಟು ಸರಳವಾಗಿ ಉದ್ಘಾಟನೆಗೊಂಡಿರುವ ಬಗ್ಗೆ ಮಂದಿರ ಉಸ್ತುವಾರಿ ಸಮಿತಿಯ ಕಾರ್ಯಾಧ್ಯಕ್ಷರಾದ ಎಂ.ವಿ.ರಘುನಾಥ್ ಮಾಹಿತಿ ನೀಡಿದರು. ಹಿಮಾಲಯದ ತಪ್ಪಲಿನ ಋಷಿಕೇಶದ ಸ್ವಾಮಿಜಿಯೊಬ್ಬರ ಆಕಸ್ಮಿಕ ಭೇಟಿ ಅವರ ಆರ್ಶಿವಾದದಿಂದ ವೇದ, ಉಪನಿಷತ್ತು, ಭಗವದ್ಗೀತೆ ಹಾಗೂ ಆಧ್ಯಾತ್ಮದೆಡೆಗೆ ಆಕರ್ಷಿತರಾದ ಬಗ್ಗೆ ಹೇಳಿದರು. ಈ ಹಿನ್ನಲೆಯಲ್ಲಿ ತಮ್ಮ ಊರಿನಲ್ಲೇ ಮೊದಲ ಹೆಜ್ಜೆಯಾಗಿ ಕಂಬಿಬಾಣೆ, 7ನೇ ಹೊಸಕೋಟೆ ಹಾಗೂ ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸಿಮೀತವಾಗಿ ಈ ಮಂದಿರವನ್ನು ಸ್ಥಾಪಿಸಿದ್ದು, ಇಲ್ಲಿ ಎಲ್ಲಾವೂ ಉಚಿತ. ಕಾಣಿಕೆ ಡಬ್ಬಿ, ಆರತಿ ತಟ್ಟೆ ಇರುವುದಿಲ್ಲ. ಎಲ್ಲಾವೂ ಸ್ವ ಅಧ್ಯಾಯ ಮತ್ತು ಮಾರ್ಗದರ್ಶನ ಮಾತ್ರ ಹೇಳಿದ ಅವರು ನ.30 ರಂದು ಈ ಧ್ಯಾನ ಮಂದಿರವನ್ನು ಊರಿನ ಮತ್ತು ಪರೂರಿನ ಗಣ್ಯರು ಮತ್ತು ಆಧ್ಯಾತ್ಮಿಕ ಆಸಕ್ತರು, ಹಿತೈಷಿಗಳ ಸಮುಖದಲ್ಲಿ ತಮ್ಮ ತಾಯಿ ತುಂಗಮ್ಮ ವೆಂಕಪ್ಪ ಅವರಿಂದ ಉದ್ಘಾಟಿಸಲಾಗಿದೆ. ಮಂದಿರವು ಪ್ರತಿದಿನ ಬೆಳಿಗ್ಗೆ 6 ರಿಂದ 8 ಮತ್ತು ಸಂಜೆ 6 ರಿಂದ 7 ಸ್ವ ಅಧ್ಯಾಯ ಮತ್ತು ಧ್ಯಾನಕ್ಕೆ ತೆರೆದಿರುತ್ತದೆ. ಪ್ರತಿ ಭಾನುವಾರ ದಿನಪೂರ್ತಿ ಧ್ಯಾನ ಮತ್ತು ಸ್ವ ಅಧ್ಯಾಯ ಮತ್ತು ಮಾರ್ಗದರ್ಶನವನ್ನು ಪಡೆಯಬಹುದು. ಮೊದಲ ಹಂತದಲ್ಲಿ ಪ್ರತಿ ತಿಂಗಳ ನಾಲ್ಕನೇ ಭಾನುವಾರ ಆಧ್ಯಾತ್ಮಿಕ ಪ್ರವಚನ ಏರ್ಪಡಿಸಲಾಗುತ್ತದೆ. ಅಂದು ಬೆಳಗಿನ ಲಘುಉಪಹಾರ ಮಧ್ಯಾಹ್ನದ ಭೋಜನ ಮಾಡಲಾಗುವುದೆಂದು ಎಂ.ವಿ.ರಘುನಾಥ್ ಮಾಹಿತಿ ನೀಡಿದರು. ತಮ್ಮ ಮಂದಿರ ಸ್ಥಾಪನೆ ಉದ್ದೇಶ ಮತ್ತು ಗುರಿಯ ಬಗ್ಗೆ ಸ್ಪಷ್ಟವಾಗಿ ಮಾತನಾಡಿದ ಅವರು, ದೇವಸ್ಥಾನ ಸೇವಸ್ಥಾನವಾಗಿ ಮತ್ತು ಧರ್ಮನುಷ್ಠಾನ ಕೇಂದ್ರವಾಗಿ ರೂಪುಗೊಳ್ಳಬೇಕು. ಪೂಜೆ ಉತ್ಸವಗಳ ಜೊತೆಗೆ ಬಡ ಜನರಿಗೆ ಅವಶ್ಯ ಉಳ್ಳವರಿಗೆ ಸೇವ ಕಾರ್ಯಕ್ರಮಗಳನ್ನು ನರನಾರಾಯಣ ಪೂಜಾ ಭಾವದಿಂದ ಹಮ್ಮಿಕೊಂಡು ನಮ್ಮ ಧರ್ಮ ಆಧ್ಯಾತ್ಮಿಕ ತರಬೇತಿಯನ್ನು ಕೊಡುವ ಧರ್ಮ ಶಿಕ್ಷಣ ಕೇಂದ್ರಗಳಾಗಿ ಪರಿವರ್ತನೆ ಹೊಂದಬೇಕು. ನಮ್ಮ ಸನಾತನಧರ್ಮದ ತಿಳುವಳಿಕೆಯನ್ನು ಹೊಂದಿ ಜ್ಞಾನದಿಂದ ಧ್ಯಾನವನ್ನು ಮಾಡಿ ಬ್ರಹ್ಮತ್ವವನ್ನು ಪಡೆಯುವಂತೆ ಎಲ್ಲರಿಗೂ ಯಾವುದೇ ಭೇದಬಾವಿಲ್ಲದೆ ತಮ್ಮ ಕನಸ್ಸಾಗಿದೆ ಎಂದು ಎಂ.ವಿ.ರಘುನಾಥ್ ಹೇಳಿದರು. ಆಸಕ್ತರು ತಮ್ಮನ್ನು ಮೊಬೈಲ್ ಸಂಖ್ಯೆಯಲ್ಲಿ ಸಂಪರ್ಕಿಸುವಂತೆ 7760878559 ಹೇಳಿದ್ದಾರೆ.











