
ವಿರಾಜಪೇಟೆ ಡಿ.29 NEWS DESK : ಆರ್ಜಿ-ಪೆರುಂಬಾಡಿ ಗ್ರಾಮದ ಶ್ರೀ ಅಯ್ಯಪ್ಪ ಭಜನಾ ಮಂದಿರದ 30ನೇ ವರ್ಷದ ಮಂಡಲ ಪೂಜಾ ಮಹೋತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು. ಮಂಡಲ ಪೂಜೆಯ ಅಂಗವಾಗಿ ಭಜನಾ ಮಂದಿರದ ಆವರಣದ ಸಭಾಂಗಣದಲ್ಲಿ ಸಂಜೆ ಗ್ರಾಮದ ಮಕ್ಕಳಿಂದ ಭಕ್ತಿ ಪ್ರದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶನಿವಾರ ಬೆಳಿಗ್ಗೆ ಗಣಪತಿ ಹೋಮದೊಂದಿಗೆ ಪೂಜಾ ವಿಧಿವಿಧಾನಗಳಿಗೆ ಚಾಲನೆ ನೀಡಲಾಯಿತು. ಮಧ್ಯಾಹ್ನ ವಿಶೇಷ ಪೂಜೆ ಭಜನೆ ಮಾಹಾಪೂಜೆ ನಡೆಯಿತು. ಸಂಜೆ ಮಂದಿರ ಮುಂಭಾಗದಿಂದ ಶ್ರೀ ಅಯ್ಯಪ್ಪನ ಉತ್ಸವ ಮೂರ್ತಿ ವಿದ್ಯುತ್ ಅಲಂಕೃತ ಮಂಟಪದೊಂದಿಗೆ ಮಹಿಳೆಯರು ಮಕ್ಕಳ ತಾಲಾಪೊಲಿ, ಅಯ್ಯಪ್ಪ ವೃತಧಾರಿಗಳ ಕಳಶ ಹೊತ್ತು ಅಯ್ಯಪ್ಪ ಘೋಷ, ಚೆಂಡೆ ವಾದ್ಯಗಳೊಂದಿಗೆ ಶೋಭಾಯತ್ರೆ ಜರುಗಿತು. ಮೆರವಣಿಗೆ ಚೆಕ್ ಪೋಸ್ಟ್ ವರೆಗೆ ಸಾಗಿ ಚಾಮುಂಡಿ ಮಾಳದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ಭಜನ ಮಂದಿರದಲ್ಲಿ ಅಂತ್ಯಗೊಂಡಿತು. ಪದಿನೆಟ್ಟ್ ಪಡಿ ಪೂಜೆ, ಮಾಹಾಪೂಜೆ ನಡೆಯಿತು. ಮಂಡಲ ಪೂಜಾ ಮಹೋತ್ಸವ ಅಂಗವಾಗಿ ಮಧ್ಯಾಹ್ನ ಮತ್ತು ರಾತ್ರಿ ಅನ್ನಸಂತರ್ಪಣೆ ನಡೆಯಿತು. ಶ್ರೀ ಅಯ್ಯಪ್ಪ ಭಜನಾ ಮಂದಿರದ ಆಡಳಿತ ಮಂಡಳಿ ಸದಸ್ಯರು, ಪದಾಧಿಕಾರಿಗಳು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ವರದಿ : ಕಿಶೋರ್ ಕುಮಾರ್ ಶೆಟ್ಟಿ











