ರಾಂಪುರ NEWS DESK ಡಿ.29 : ಟ್ರಕ್ ವೊಂದು ಬೊಲೆರೋ ವಾಹನದ ಮೇಲೆ ಬಿದ್ದ ಪರಿಣಾಮ ಬೊಲೆರೋ ಚಾಲಕ ಮೃತಪಟ್ಟಿರುವ ಘಟನೆ ಉತ್ತರಪ್ರದೇಶದ ರಾಂಪುರದಲ್ಲಿ ನಡೆದಿದೆ. ಒಣಹುಲ್ಲಿನಿಂದ ತುಂಬಿದ್ದ ಟ್ರಕ್’ವೊಂದು ಬೊಲೆರೋ ಮೇಲೆ ಉರುಳಿ ಬಿದ್ದಿದ್ದು, ಘಟನೆಯಲ್ಲಿ ಬೊಲೆರೋ ಚಾಲಕ ಮೃತಪಟ್ಟಿದ್ದಾನೆ. ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.










