ಸೋಮವಾರಪೇಟೆ NEWS DESK ಡಿ.29 : ಸೋಮವಾರಪೇಟೆಯ ಶ್ರೀ ಮುತ್ತಪ್ಪಸ್ವಾಮಿ ಮತ್ತು ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಶೃದ್ಧಾಭಕ್ತಿಯಿಂದ ಅಯ್ಯಪ್ಪ ವೃತಾಧಾರಿಗಳು ಹಾಗೂ ಭಕ್ತರ ಸಮ್ಮುಖದಲ್ಲಿ ಮಂಡಲ ಪೂಜೋತ್ಸವ ಸಂಪನ್ನಗೊಂಡಿತು. ಅರ್ಚಕ ಜಗದೀಶ ಉಡುಪ ಅವರ ಪೌರೋಹಿತ್ಯದಲ್ಲಿ ಗಣಪತಿಹೋಮದೊಂದಿಗೆ ಪೂಜೆಗಳು ಆರಂಭಗೊಂಡಿತು. ನಂತರ ದೇವಾಲಯ ಸಮಿತಿ ಹಾಗೂ ಕ್ಷೇತ್ರದ ಭಕ್ತರು ಕಳೆದ ಐದು ದಿನಗಳಿಂದ ವೃತ ಮಾಡಿ ತಂದಿದ್ದ ಪವಿತ್ರ ತುಪ್ಪವನ್ನು ಅಯ್ಯಪ್ಪಸ್ವಾಮಿಯ ಮೂರ್ತಿಗೆ ವೆಂಕಟೇಶ್ ಅಯ್ಯರ್ ಅಭಿಷೇಕವನ್ನು ನೆರವೇರಿಸಿದರು. ಅದಕ್ಕೂ ಮುನ್ನ ಅಯ್ಯಪ್ಪಸ್ವಾಮಿಯ ಆಭರಣಗಳಿಗೆ ಪೂಜೆ ಸಲ್ಲಿಸಿ ದೇವಾಲಯದ ಆವರಣದಲ್ಲಿ ಮೂರು ಸುತ್ತು ಪ್ರದಕ್ಷಿಣೆಯನ್ನು ದೇವಾಲಯ ಸಮಿತಿಯವರು ಶ್ರೀಮುತ್ತಪ್ಪಸ್ವಾಮಿ ಹಾಗೂ ಶ್ರೀಭುವನೇಶ್ವರಿ ದೇವಿಯವರ ಸನ್ನಿಧಿಯಲ್ಲಿ ಇರಿಸಿದ್ದ ಪವಿತ್ರ ತುಪ್ಪ ಹಾಗೂ ದೇವಾಲಯ ಸಮಿತಿಯ ಪದಾಧಿಕಾರಿಗಳು ಕಳೆದ ಐದು ದಿನಗಳಿಂದ ವೃತ ಮಾಡಿ ಶ್ರೀಭುವನೇಶ್ವರಿ ದೇವಿಯ ಸನ್ನಿಧಿಯಲ್ಲಿ ಇರಿಸಿದ್ದ ತುಪ್ಪದೊಂದಿಗೆ ಪ್ರದಕ್ಷಿಣೆ ನಡೆಸಿ ಮೊದಲಿಗೆ ಅಭಿಷೇಕವನ್ನು ಮಾಡಲಾಯಿತು. ನಂತರ ಭಕ್ತರು ತಂದಿದ್ದ ತುಪ್ಪವನ್ನು ಅಭಿಷೇಕ ಮಾಡುವ ಮೂಲಕ ಪೂಜೆ ಸಲ್ಲಿಸಲಾಯಿತು. ನಂತರ ಉಚ್ಛ ಪೂಜೆಯಲ್ಲಿ ಅಯ್ಯಪ್ಪಸ್ವಾಮಿಯ ಮೂರ್ತಿಯನ್ನು ವಿಶೇಷವಾದ ಆಭರಣಗಳೊಂದಿಗೆ ಅಲಂಕರಿಸಿ ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು. ಸಂಜೆ ಅಯ್ಯಪ್ಪ ವೃತಾಧಾರಿಗಳು ಮತ್ತು ಭಕ್ತರ ಭಜನೆಯೊಂದಿಗೆ ಪಡಿಪೂಜೆಯನ್ನು ವಿಶೇಷವಾಗಿ ಮಾಡಲಾಯಿತು. ನಂತರ ಅಯ್ಯಪ್ಪಸ್ವಾಮಿಗೆ ಭಕ್ತರ ಭಜನೆಯೊಂದಿಗೆ ಪುಷ್ಪಾಭಿಷೇಕ ನಡೆಸಲಾಯಿತು. ಮಹಾಮಂಗಳಾರತಿಯ ನಂತರ ಅನ್ನದಾನವನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭ ಪೂಜಾ ಕೈಂಕರ್ಯದಲ್ಲಿ ಅರ್ಚಕರಾದ ವೆಂಕಟೇಶ್ ಹೊಳ್ಳ, ವಾದಿರಾಜ್, ಹರಿಭಟ್, ಸಹಾಯಕರಾಗಿ ಬಜೆಗುಂಡಿ ಮಣಿಸ್ವಾಮಿ ಸಹಕಾರ ನೀಡಿದರು. ದೇವಾಲಯ ಸಮಿತಿ ಅಧ್ಯಕ್ಷ ವಿನೋದ್ ಕುಮಾರ್, ಪ್ರಧಾನ ಕಾರ್ಯದರ್ಶಿ ಪ್ರಸನ್ನ ನಾಯರ್, ಉಪಾಧ್ಯಕ್ಷ ರಾಜೇಂದ್ರನ್, ಖಜಾಂಚಿ ಎನ್.ಜಿ.ಮೋಹನ್, ಸಹ ಕಾರ್ಯದರ್ಶಿ ಕೆ.ಸಿ.ದಿನೇಶ್ ಮತ್ತು ಸದಸ್ಯರುಗಳು, ಮುತ್ತಪ್ಪಸ್ವಾಮಿ ದೇವಾಲಯದ ಅರ್ಚಕ ಸುಧೀಶ್ ಇದ್ದರು.










