ವಿರಾಜಪೇಟೆ ಡಿ.30 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವಿರಾಜಪೇಟೆ ತಾಲ್ಲೂಕು, ಸ್ವಸಹಾಯ ಸಂಘಗಳ ಒಕ್ಕೂಟಗಳ ಆಶ್ರಯದಲ್ಲಿ ಕೃಷಿ ಕಾರ್ಯಕ್ರಮದಡಿಯಲ್ಲಿ ಸ್ವ ಉದ್ಯೋಗ ಮಾಹಿತಿ ಕಾರ್ಯಕ್ರಮ ಅಮ್ಮತ್ತಿ ವಲಯದ ಹಾಲುಗುಂದ ಕಾರ್ಯಕ್ಷೇತ್ರದ ಬೈರಂಬಾಡ ಸಮುದಾಯ ಭವನದಲ್ಲಿ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಸ್ಟಉದ್ಯೋಗದಲ್ಲಿ ತನ್ನನ್ನು ತೊಡಗಿಸಿಕೊಂಡ ಸುಧಾ ಅವರು ಮಾತನಾಡಿ, ತಾನು ಮನೆಯಲ್ಲಿ ತಯಾರಿಸಿದ ಮಸಾಲೆ ಪದಾರ್ಥಗಳು ಪ್ರಾರಂಭದಲ್ಲಿ ತಿಂಗಳಿಗೆ ಮೂರು ಸಾವಿರ ಆದಾಯ ಬರುತ್ತಿದ್ದು, ಈಗ ತಿಂಗಳಿಗೆ ಐವತ್ತು ಸಾವಿರದವರೆಗೆ ಆದಾಯ ಬರುತ್ತದೆ. ಇದರಿಂದ ನನ್ನ ಜೀವನಮಟ್ಟ ಸುಧಾರಣೆಯಾಗಿದೆ. ಯಾವ ರೀತಿಯಲ್ಲಿ ಮಸಾಲ ಪದಾರ್ಥಗಳನ್ನು ಮಾಡುವ ಬಗ್ಗೆ ಮತ್ತು ಅಣಬೆ ಕೃಷಿ ಮಾಡುವ ಬಗ್ಗೆ, ಅಣಬೆ ಕೃಷಿ ಮಾಡುವುದು ತುಂಬಾ ಲಾಭದಾಯಕ, ಕಡಿಮೆ ವೆಚ್ಚ ಹೆಚ್ಚು ಲಾಭಗಳಿಸಬಹುದು. ಮನೆಯಲ್ಲಿ ಅಣಬೆ ಕೃಷಿ ಮಾಡುವ ಎಂದು ಮಾಹಿತಿ ನೀಡಿದರು. ವಲಯದ ಮೇಲ್ವಿಚಾರಕರಾದ ಧನೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷಿ ಮೇಲ್ವಿಚಾರಕರಾದ ವಸಂತ್, ಹಾಲುಗುಂದ ಸೇವಾ ಪ್ರತಿನಿಧಿ ಮೀನಾಕ್ಷಿ, ಚೆಂಬೆಬೆಳ್ಳೂರು ಸೇವಾ ಪ್ರತಿನಿಧಿ ದೇವಕಿ, ಪ್ರಗತಿಪರ ಕೃಷಿಕರು ಹಾಲುಗುಂದ ಒಕ್ಕೂಟ ಅಧ್ಯಕ್ಷ ನೇತ್ರಾವತಿ, ದಮಯಂತಿ ಸಂಘದ ಸದಸ್ಯರು ಇದ್ದರು.











