
ನಾಪೋಕ್ಲು ಜ.5 NEWS DESK : ದೆಹಲಿಯಲ್ಲಿ ಜರುಗಲಿರುವ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗವಹಿಸಲು ಕೊಡಗಿನ ಜೆ.ಡಿ.ಸ್ವಾತಿ ಆಯ್ಕೆಯಾಗಿದ್ದಾರೆ. ಮೈಸೂರಿನ ಸೆಂಟ್ ಫಿಲೋಮಿನಾಸ್ ಪದವಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಸ್ವಾತಿ ಎನ್ ಸಿ ಸಿ ಇಂದ ಜೂನಿಯರ್ ಅಂಡರ್ ಆಫೀಸರ್ ಆಗಿ ಜ.26 ರಂದು ದೆಹಲಿಯಲ್ಲಿ ಜರುಗಲಿರುವ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾಳೆ. ಜೆ.ಡಿ.ಸ್ವಾತಿ ಮಡಿಕೇರಿ ತಾಲ್ಲೂಕಿನ ನಾಪೋಕ್ಲು ನೂರಂವಾಡ ಮಠದ ದೇವರಾಜು ಹಾಗೂ ನಯನ ದಂಪತಿಗಳ ಪುತ್ರಿ.
ವರದಿ : ದುಗ್ಗಳ ಸದಾನಂದ









