
ಮಡಿಕೇರಿ ಜ.8 NEWS DESK : K SHIP – 4 ಯೋಜನೆಯಡಿಯಲ್ಲಿ ಮಡಿಕೇರಿ – ದೋಣಿಗಲ್ (NH 75) ರಸ್ತೆ ಅಭಿವೃದ್ಧಿಗೆ ಕಳೆದ ಬಜೆಟ್ ನಲ್ಲಿ ಘೋಷಣೆಯಾಗಿದ್ದು, ರಸ್ತೆ ಅಭಿವೃದ್ಧಿ ಪಡಿಸುವ ಪ್ರಕ್ರಿಯೆಗಳ ತಾಂತ್ರಿಕ ಕಾರ್ಯಗಳು ಪ್ರಾರಂಭಗೊಂಡಿದೆ. ಡಿಪಿಆರ್ ಸಿದ್ಧಪಡಿಸುವ ನಿಟ್ಟಿನಲ್ಲಿ ಈಗಾಗಲೇ 7 ಕೋಟಿ ರೂ ಅನುದಾನ ಬಿಡುಗಡೆಯಾಗಿದ್ದು, ಈ ಹಿನ್ನೆಲೆಯಲ್ಲಿ ಡಿಪಿಆರ್ ಸಿದ್ಧಪಡಿಸಲು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಬೆಂಗಳೂರಿನ ಶಾಸಕರ ಭವನದ ಶಾಸಕರ ಕಚೇರಿಯಲ್ಲಿ ಡಿಪಿಆರ್ (DPR) ಸಂಬಂಧಿಸಿದಂತೆ ಕಂಪನಿಯ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಅಗತ್ಯ ಸೂಚನೆಗಳನ್ನು ನೀಡಲಾಗಿದೆ. ಈ ರಸ್ತೆಯಿಂದ ಕೊಡಗಿನ ಜನತೆಗೆ ಹಾಗೂ ವಾಣಿಜ್ಯೋದ್ಯಮ, ನೂತನ ಕೈಗಾರಿಕೆಗಳು, ಪ್ರವಾಸೋದ್ಯಮ ಅಭಿವೃದ್ಧಿಗೆ ಮತ್ತಷ್ಟು ಸಹಕಾರಿಯಾಗಲಿದೆ ಎಂದು ಶಾಸಕ ಡಾ.ಮಂತರ್ ಗೌಡ ಅವರು ತಿಳಿಸಿದ್ದಾರೆ.









