
ಮಡಿಕೇರಿ ಜ.8 NEWS DESK : ಸುಂಟಿಕೊಪ್ಪದ ಮಂಜಿಕೆರೆ ಶ್ರೀ ಸ್ವಾಮಿ ಕೊರಗಜ್ಜ ದೈವಸ್ಥಾನದಲ್ಲಿ 7ನೇ ವರ್ಷದ ಗಗ್ಗರ ಸೇವೆ (ಕೋಲ) ಜ.18 ರಂದು ನಡೆಯಲಿದೆ. ಅಂದು ಸಂಜೆ 6 ಗಂಟೆಯ ನಂತರ ಕೋಲ ನಡೆಯಲಿದ್ದು, ಅನ್ನದಾನ ಸೇವೆ ನೆರವೇರಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕೊರಗಜ್ಜ ದೈವದ ಕರಿಗಂಧ ಪ್ರಸಾದವನ್ನು ಸ್ವೀಕರಿಸುವಂತೆ ದೈವಸ್ಥಾನದ ದೈವ ಆರಾಧಕ ಎಂ.ಎ.ಮಹೇಶ್ ಮನವಿ ಮಾಡಿದ್ದಾರೆ. ಸೇವೆಗೆ ಸಹಕಾರ ನೀಡುವವರು ಮತ್ತು ಹೆಚ್ಚಿನ ಮಾಹಿತಿಗೆ ಎಂ.ಎ.ಮಹೇಶ್ 8762304217 ನ್ನು ಸಂಪರ್ಕಿಸಬಹುದಾಗಿದೆ.









