
ನಾಪೋಕ್ಲು ಜ.12 NEWS DESK : ನಾಪೋಕ್ಲು ಲಯನ್ಸ್ ಕ್ಲಬ್ ವತಿಯಿಂದ ಆಯೋಜಿಸಿದ ಲಯನ್ಸ್ ರೀಜನ್ ಮೀಟ್ ಸಮ್ಮೇಳನದಲ್ಲಿ ಕ್ಲಬ್‍ನ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು. ನಾಪೋಕ್ಲು ಕೊಡವ ಸಮಾಜದ ಅಪ್ಪಚ್ಚ ಕವಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಲಯನ್ಸ್ ರೀಜನ್ ಮೀಟ್ “ಬೆಸುಗೆ” ಸಮ್ಮೇಳನದಲ್ಲಿ ಲಯನ್ಸ್ ಕ್ಲಬ್‍ನ ಹಿರಿಯ ಸದಸ್ಯರುಗಳಾದ ಬೊಪ್ಪೆರ ಕಾವೇರಪ್ಪ ಹಾಗೂ ಸರ್ವೆ ಆಫ್ ಇಂಡಿಯಾ ನಿವೃತ ಅಧಿಕಾರಿ, ಕೇಟೋಳಿರ ಎಸ್.ಕುಟ್ಟಪ್ಪ ಅವರ ಸುದೀರ್ಘ ಅವಧಿಯ ಸೇವೆಯನ್ನು ಪರಿಗಣಿಸಿ ಸನ್ಮಾನಿಸಿ ಗೌರವಿಸಲಾಯಿತು. ಲಯನ್ಸ್ ಕ್ಲಬ್‍ಗಳ ಪ್ರಾಂತೀಯ ಅಧ್ಯಕ್ಷ ಡಾ.ಕೋಟೆರ ಪಂಚಮ್ ತಿಮ್ಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರೊಟೇರಿಯನ್ ಜಿಲ್ಲಾ ಮಾಜಿ ರಾಜ್ಯಪಾಲ ಅಭಿನಂದನ್ ಬಿ.ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಲಯನ್ಸ್ ಪ್ರಾಂತಿಯ ರಾಯಬಾರಿ ಲಯನ್ ನವೀನ್ ಅಂಬೆಕಲ್, ವಲಯ ಅಧ್ಯಕ್ಷರುಗಳಾದ ಲಯನ್ ಬಿಂದ್ಯಾ ಗಣಪತಿ, ಲಯನ್ ಸಿ.ಟಿ.ಅಪ್ಪಣ್ಣ, ಲಯನ್ ನಟರಾಜ ಕೆಸ್ತೂರು, ಪ್ರಾಂತ್ಯ ಅಧ್ಯಕ್ಷರುಗಳು, ಸಮ್ಮೇಳನ ಅಧ್ಯಕ್ಷೆ ಲಯನ್ ಕೇಟೋಳಿರ ರತ್ನ ಚರ್ಮಣ್ಣ, ಕಾರ್ಯದರ್ಶಿ ಲಯನ್ ಮುಕ್ಕಾಟಿರ ವಿನಯ್, ಖಜಾಂಚಿ ಲಯನ್ ಎಳ್ತ ತಂಡ ಬಿ.ಬೋಪಣ್ಣ, ನಾಪೆÇೀಕ್ಲು ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ಮಾದೆಯಂಡ ಬಿ.ಕುಟ್ಟಪ್ಪ, ಕಾರ್ಯದರ್ಶಿ ಲಯನ್ ಅಪ್ಪುಮನಿಯಂಡ ಬನ್ಸಿ ಭೀಮಯ್ಯ, ಖಜಾಂಚಿ ಲಯನ್ ಅಪ್ಪಚೆಟ್ಟೋಳಂಡ ವಸಂತ್ ಮುತ್ತಪ್ಪ, ಲಿಯೋ ಕ್ಲಬ್ಬಿನ ಅಧ್ಯಕ್ಷ ಬಿ.ಕೆ.ಕನ್ನಿಕ, ಕಾರ್ಯದರ್ಶಿ ಎಂ.ಪಿ.ಧ್ರುವ ದೇವಯ್ಯ, ಖಜಾಂಚಿ ಸಿ ಅನನ್ಯ ಅಯ್ಯಪ್ಪ, ಪ್ರಾಂತೀಯ ಕ್ಕೆ ಒಳಪಟ್ಟ ಲಯನ್ಸ್ ಕ್ಲಬ್ ಗಳ ಅಧ್ಯಕ್ಷರು, ಪದಾಧಿಕಾರಿಗಳ ಹಾಗೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.
ವರದಿ : ದುಗ್ಗಳ ಸದಾನಂದ.









