
ಮಡಿಕೇರಿ ಜ.14 NEWS DESK : ಕಳೆದ ಶೈಕ್ಷಣಿಕ ವರ್ಷದ 10ನೇ ತರಗತಿಯ ವಾರ್ಷಿಕ ಪರೀಕ್ಷೆಯ ಫಲಿತಾಂಶದಲ್ಲಿ ವಿರಾಜಪೇಟೆಯ ಕಾವೇರಿ ಶಾಲೆಯ ವಿದ್ಯಾರ್ಥಿ ಆಶ್ರಯ್ ಅಕ್ಕಮ್ಮ ಅತ್ಯುತ್ತಮ ಅಂಕಗಳನ್ನು ಗಳಿಸುವುದರ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ವಿರಾಜಪೇಟೆ ತಾಲ್ಲೂಕಿನಲ್ಲಿ ಗುಣಮಟ್ಟದ ಫಲಿತಾಂಶವನ್ನು ತಂದು ಕೊಟ್ಟ ಎಲ್ಲಾ ವಿದ್ಯಾರ್ಥಿಗಳ ಸಾಧನೆಯನ್ನ ಪ್ರಶಂಸಿಸುವ ಸಲುವಾಗಿ “ಸಾಧಕ ಸಂಭ್ರಮ್” ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ 625 ಅಂಕಗಳಿಗೆ 623 ಅಂಕಗಳನ್ನು ಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಆಶ್ರಯ ಅಕ್ಕಮ್ಮ ಕನ್ನಡ 123-125, ಇಂಗ್ಲಿಷ್ 99-100, ಹಿಂದಿ 100-100, ವಿಜ್ಞಾನ 100-100, ಸಮಾಜ 100-100 ಗಣಿತ 100-100 ಅಂಕದೊಂದಿಗೆ ಪ್ರತಿ ವಿಷಯಕ್ಕೆ ಸಂಬಂಧಿಸಿದಂತೆ ಅತ್ಯುತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಗೆ ಸನ್ಮಾನ ಮಾಡಲಾಯಿತು. ಕನ್ನಡ ವಿಷಯದಲ್ಲಿ ಮಾನವಿ ಮುತ್ತಮ್ಮ 123-125, ಇಂಗ್ಲೀಷ್ ಭುವನ ಪೂವಯ್ಯ 99-100, ಸಮೃದ್ಧಿ ಕೆ.ಟಿ 99-100, ದೇವಯ್ಯ ಪಿ.ಎಸ್ 99-100, ಅನಲ್ ಪಿ. ಎಸ್ 99-100, ವರ್ಷಿತ 99-100 ಅಂಕಗಳನ್ನು ಪಡೆದುಕೊಂಡಿದ್ದಾರೆ. ಹಿಂದಿ ವಿಷಯದಲ್ಲಿ ಭುವನ ಪೂವಯ್ಯ 100-100, ಆಯಿಷ ರಿಹ 100-100 ದಿಯಾ 100-100, ಫೈಕಾ ಫೆರಿನ್ 100-100 ಹಾಗೂ ಮಾನವಿ ಮುತ್ತಮ್ಮ 100-100 ಅಂಕ ಪಡೆದುಕೊಂಡಿದ್ದಾರೆ. ಗಣಿತದಲ್ಲಿ ಆಶ್ರಯ್ ಅಕ್ಕಮ್ಮ 100-100, ವಿಜ್ಞಾನದಲ್ಲಿ ಆಶ್ರಯ್ ಅಕ್ಕಮ್ಮ 100-100, ಸಮಾಜದಲ್ಲಿ ಸಮೃದ್ಧಿ ಕೆ.ಟಿ 100-100, ಸಂಜನಾ ಭಟ್ 100-100 ಪಡೆದುಕೊಂಡಿದ್ದು, ಇವರಿಗೆ ಸ್ಮರಣ ಫಲಕಗಳನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪರೀಕ್ಷಾ ಪೂರ್ವ ತಯಾರಿಯ ಬಗ್ಗೆ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಪೋಷಕ ಶಿಕ್ಷಕ ಸಮಿತಿಯ ಅಧ್ಯಕ್ಷರಾದ ಅಮಿತ್ ಮಾತನಾಡಿ, ಸಾಧಕ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ, ಇದರ ಹಿಂದೆ ಇರುವಂತಹ ಪೋಷಕ, ಶಿಕ್ಷಕ ಹಾಗೂ ವಿದ್ಯಾರ್ಥಿಗಳ ಶ್ರಮವನ್ನು ಶ್ಲಾಘಿಸಿದರು. ಪೋಷಕ ಶಿಕ್ಷಕ ಸಮಿತಿಯ ಕಾರ್ಯದರ್ಶಿ ಜಮೀಲ ಮಾತನಾಡಿ, ವಿದ್ಯಾರ್ಥಿಗಳು ಸಾಧನೆ ಮಾಡುವುದರ ಜೊತೆಗೆ ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಸುದೇಶ್ ಬಿ.ಎಸ್ ಪ್ರಾಸ್ತಾವಿಕ ನುಡಿಗಳನ್ನಾಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾರ್ಯದರ್ಶಿ ವಿನೋದ್ ಪಿ.ಎನ್, ಮಾತನಾಡಿ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿಯೂ ಸಹ ಎಲ್ಲರೂ ಮೆಚ್ಚುವಂತಹ ಸಾಧನೆಗಳನ್ನು ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಮುಖ್ಯ ಶಿಕ್ಷಕಿ ಪಾರ್ವತಿ ಯು.ಪಿ, ಸಂಯೋಜಕಿ ಅಮೃತ ಅರ್ಜುನ್, ಪೋಷಕ ಶಿಕ್ಷಕ ಸಮಿತಿಯ ಪೋಷಕ ಸದಸ್ಯರು ಹಾಗೂ ಭೋದಕ ಭೋದಕೇತರ ವೃಂದದವರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಕೆಲವೊಂದು ಮನರಂಜನಾ ಕ್ರೀಡೆಗಳನ್ನು ಏರ್ಪಡಿಸಲಾಗಿತ್ತು. ನಂತರ ಔತಣ ಕೂಟದಲ್ಲಿ ತಮ್ಮ ನೆಚ್ಚಿನ ಶಿಕ್ಷಕರೊಂದಿಗೆ ತಮ್ಮ ಸವಿ ಸವಿ ನೆನಪುಗಳನ್ನು ಮೆಲುಕು ಹಾಕಿಕೊಂಡರು. ಮುಖ್ಯ ಶಿಕ್ಷಕಿ ಯು.ಪಿ.ಪಾರ್ವತಿ ಸ್ವಾಗತಿಸಿದರು. ತಂಸೀನಾ ಹಾಗೂ ಸುಪ್ರೀತ ನಿರೂಪಿಸಿದರು. ಸಂಯೋಜಿಕಿ ಅಮೃತ ಅರ್ಜುನ್ ವಂದಿಸಿದರು.









