Close Menu
News-Desk-KannadaNews-Desk-Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • ಬಂಗಾರ ಕೊಳ್ಳುವವರಿಗೆ ಹಬ್ಬದ ಸಂಭ್ರಮ: ದಿಢೀರ್ ಇಳಿಕೆಯಾದ ಚಿನ್ನದ ದರ, ಎಷ್ಟಿದೆ ಗೊತ್ತಾ?
  • *ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ ಹುಲಿ ಸೆರೆ*
  • ನಾಳೆ ದೇಶಾದ್ಯಂತ ಕಾರ್ಮಿಕ ಸಂಘಟನೆಗಳ ಮುಷ್ಕರ: ಬಸ್, ಬ್ಯಾಂಕ್, ಶಾಲಾ-ಕಾಲೇಜುಗಳ ಸ್ಥಿತಿ ಏನು? ಹೊರಗಡೆ ಹೋಗುವ ಮುನ್ನ ಈ ಸುದ್ದಿ ಓದಿ!
  • *ಪಿ.ಕೃಷ್ಣೇಗೌಡ ನೇತೃತ್ವದ ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷರಾಗಿ ಪಿ.ಕೆ.ಉದಯಕುಮಾರ್ ಆಯ್ಕೆ*
  • *ಆಹಾರ ಭದ್ರತಾ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಗೊಳಿಸಿ: ಡಾ.ಎಚ್.ಕೃಷ್ಣ*
  • *ಅರಣ್ಯ ಹಕ್ಕು ಕಾಯ್ದೆ ಆದಿವಾಸಿಗಳಿಗೆ ತಲುಪಿಸಿ: ಗಿರಿಧರ*
  • *ಕಾರ್ಮಿಕ ವರ್ಗದ ತುರ್ತು ರೋಗಿಗಳಿಗೆ ಸರತಿ ಸಾಲು ಬೇಡ : ಜಿಲ್ಲಾ ಸರ್ಜನ್ ಗೆ ಮನವಿ ಸಲ್ಲಿಸಿದ ಎಸ್‌ಡಿಟಿಯು*
  • *ಮೈಸೂರಿನಲ್ಲಿ ಪೂರ್ಣ ಪ್ರಮಾಣದ ಪಾಸ್‌ಪೋರ್ಟ್‌ ಸೇವಾ ಕೇಂದ್ರ ಆರಂಭಕ್ಕೆ ಯದುವೀರ್‌ ಒತ್ತಡ ಕೇಂದ್ರ ವಿದೇಶಾಂಗ ಸಚಿವರಿಗೆ ಮನವಿ ಸಲ್ಲಿಸಿರುವ ಮೈಸೂರು-ಕೊಡಗು ಸಂಸದರು*
  • *ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯಿಂದ ಮಡಿಕೇರಿಯಲ್ಲಿ ಪ್ರತಿಭಟನೆ*
  • *ಸಾಂತ್ವನ ಮಹಿಳಾ ಸಹಾಯವಾಣಿ : ಕೊಡಗಿನಲ್ಲಿ 5657 ಪ್ರಕರಣಗಳು ಇತ್ಯರ್ಥ*
News-Desk-KannadaNews-Desk-Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News-Desk-KannadaNews-Desk-Kannada





Home » *ದೇವರಕೊಲ್ಲಿ ಶ್ರೀ ಚಾಮುಂಡೇಶ್ವರಿ ದೇವಾಲಯದ ನೂತನ ಕಲಾಮಂದಿರಕ್ಕೆ ಭೂಮಿಪೂಜೆ : ಸಂಸ್ಕೃತಿ ಸಂರಕ್ಷಣೆಯಲ್ಲಿ ದೇವಾಲಯಗಳು ವಹಿಸುವ ಪಾತ್ರ ಮಹತ್ವದ್ದು  : ಅನಿಲ್ ಹೆಚ್.ಟಿ.*
ಇತ್ತೀಚಿನ ಸುದ್ದಿಗಳು

*ದೇವರಕೊಲ್ಲಿ ಶ್ರೀ ಚಾಮುಂಡೇಶ್ವರಿ ದೇವಾಲಯದ ನೂತನ ಕಲಾಮಂದಿರಕ್ಕೆ ಭೂಮಿಪೂಜೆ : ಸಂಸ್ಕೃತಿ ಸಂರಕ್ಷಣೆಯಲ್ಲಿ ದೇವಾಲಯಗಳು ವಹಿಸುವ ಪಾತ್ರ ಮಹತ್ವದ್ದು  : ಅನಿಲ್ ಹೆಚ್.ಟಿ.*

January 14, 20262 Mins Read
Facebook WhatsApp Twitter Telegram Copy Link Threads Email LinkedIn Pinterest
Facebook Twitter WhatsApp Email Telegram Copy Link

ಮಡಿಕೇರಿ ಜ.14 NEWS DESK :  ಪ್ರಾಚೀನ ಕಾಲದಿಂದಲೂ ನಮ್ಮ ಕಲೆ, ಸಂಸ್ಕೃತಿ ಸಂರಕ್ಷಣೆಯಲ್ಲಿ ದೇವಾಲಯಗಳು ಪ್ರಮುಖ ಪಾತ್ರ ವಹಿಸಿದ್ದು, ಹೀಗಾಗಿಯೇ ಭಾರತದಲ್ಲಿ ಆಲಯಗಳು ಕಲೋಪಾಸನ ಕೇಂದ್ರಗಳಾಗಿಯೂ ಕಂಗೊಳಿಸಿವೆ ಎಂದು ಕೊಡಗು ಪತ್ರಕತ೯ರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ. ಹೇಳಿದ್ದಾರೆ. ದೇವರಕೊಲ್ಲಿಯ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಉದ್ದೇಶಿತ ಶ್ರೀ ಚಾಮುಂಡೇಶ್ವರಿ ಕಲಾಮಂದಿರಕ್ಕೆ ಭೂಮಿಪೂಜೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿದೇಶಗಳಲ್ಲಿ ನೆಲಸಿರುವ ಭಾರತೀಯರು ತಮ್ಮ ದೇಶದ ಸಂಸ್ಕೃತಿ, ಆಚಾರ ವಿಚಾರಗಳನ್ನು ಮಕ್ಕಳಿಗೆ ಕಲಿಸುವಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಾರೆ. ವಿದೇಶದ ನೆಲದಲ್ಲಿ ಇರುವವರಿಗೆ ಭಾರತದ ಸಂಸ್ಕೃತಿಯ ಮಹತ್ವದ ಅರಿವಾಗುತ್ತದೆ. ಭಾರತದಲ್ಲಿ ಭಜನೆ, ಹಾಡು, ನೖತ್ಯ, ಯೋಗ, ಧ್ಯಾನಗಳ ಮೂಲಕ ಸಾಂಸ್ಕೃತಿಕ ಕೇಂದ್ರಗಳಾಗಿಯೂ ದೈವಿಕ ಕೇಂದ್ರಗಳು ರೂಪುಗೊಂಡಿವೆ ಎಂದರಲ್ಲದೇ, ಮಕ್ಕಳಿಗೆ ಧಾಮಿ೯ಕ ಶಿಕ್ಷಣ ಕಲಿಸುವಲ್ಲಿ ದೇವಾಲಯಗಳ ಕಲಾಮಂದಿರಗಳು ಪ್ರಮುಖ ಪಾತ್ರ ವಹಿಸಬೇಕೆಂದು ಸಲಹೆ ನೀಡಿದರು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಅಧ್ಯಕ್ಷರಾಗಿದ್ದ ಕೇಶವಪ್ರಸಾದ್ ಮುಳಿಯ ದೇವಾಲಯದ ಮೂಲಕ ಧಾಮಿ೯ಕ ಶಿಕ್ಷಣದಂಥ ವಿನೂತನ ಕಾಯ೯ಕ್ರಮ ಆಯೋಜಿಸಿದ್ದನ್ನು ಸ್ಮರಿಸಿದ ಅನಿಲ್ ಹೆಚ್.ಟಿ. ಇಂಥ ಧಮ೯ ಶಿಕ್ಷಣವನ್ನು ಮಕ್ಕಳಿಗೆ ಕಲಿಸುವಲ್ಲಿ ತಾಯದಿಂದರ ಪಾತ್ರವೂ ಮಹತ್ವದ್ದಾಗಿದೆ ಎಂದರು. ಶ್ರೀ ಚಾಮುಂಡೇಶ್ವರಿ ಕಲಾಮಂದಿರದ ಮೂಲಕ ಗ್ರಾಮೀಣ ಭಾಗದ ಸಾಂಸ್ಕೃತಿಕ ಪ್ರತಿಭೆಗಳಿಗೆ ಉತ್ತಮ ವೇದಿಕೆ ದೊರಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅನಿಲ್, ದೇವಾಲಯಕ್ಕೆ ಕೆಲವು ಕಿ.ಮೀ. ದೂರರವಿರುವಂತೆಯೇ ದೇವಾಲಯದ ಮಹತ್ವ ಸಾರುವ ಫಲಕಗಳನ್ನು ಅಳವಡಿಸಿದರೆ ಭಕ್ತರಿಗೆ ಪ್ರಯೋಜನವಾಗುತ್ತದೆ ಎಂದು ಸಲಹೆ ನೀಡಿದರು. ಶ್ರೀಚಾಮುಂಡೇಶ್ವರಿ ದೇವಿಯೇ ತನಗೆ ಬೇಕಾದ ದೇವಾಲಯಕ್ಕಾಗಿನ ಭೂಮಿಯನ್ನು ಪ್ರಾಕೖತ್ತಿಕವಾಗಿ ಪಡೆದುಕೊಂಡ ಪವಾಡ ಹೊಂದಿರುವ 850 ವಷ೯ಘಳ ಇತಿಹಾಸವುಳ್ಳ ದೇವಾಲಯದ ಕಲಾಮಂದಿರ ವಿಳಂಭರಹಿತವಾಗಿ ನಿಮಾ೯ಣವಾಗಲಿ ಎಂದೂ ಅವರು ಆಶಿಸಿದರು. ಮೈಸೂರಿನ ಉದ್ಯಮಿ ಚೆರಿಯಮನೆ ನರೇಶ್ ಮಾತನಾಡಿ, ಪ್ರತೀಯೊಂದನ್ನೂ ಸಂಭ್ರಮದಿಂದ ಆಚರಿಸುವ ಮಹತ್ವದ ಗುಣ ಭಾರತೀಯರಲ್ಲಿದೆ. ಹೀಗಾಗಿಯೇ ಸಂಕ್ರಾಂತಿ ಸೇರಿದಂತೆ ಭಾರತದ ಹಬ್ಬಗಳೆಲ್ಲವೂ ಮನೆಮಂದಿಯ ಸಂಭ್ರಮವನ್ನು ಒಳಗೊಂಡಿರುತ್ತದೆ. ಸ್ಥಳೀಯರನ್ನು ಒಗ್ಗೂಡಿಸುವ ಗುಣ ಹಬ್ಬಗಳಿಗಿದೆ ಎಂದರು. ಶ್ರೀಚಾಮುಂಡೇಶ್ವರಿ ಕಲಾಮಂದಿರವು ಸಾಂಸ್ಕೃತಿಕ ಮಾತ್ರವಲ್ಲದೇ ಸ್ಥಳೀಯ ಜನಪದವನ್ನೂ ಪ್ರೋತ್ಸಾಹಿಸಲು ವೇದಿಕೆ ನೀಡಲಿ ಮತ್ತು ಪ್ರಕೖತ್ತಿಗೂ ಗೌರವ ನೀಡುವ ಕೇಂದ್ರವಾಗಲಿ ಎಂದೂ ನರೇಶ್ ಹಾರೈಸಿದರು.  ಶ್ರೀ ಚಾಮುಂಡೇಶ್ವರಿ ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಬಿ.ಜೆ.ಯಶೋಧರ ಮಾತನಾಡಿ, ಪ್ರಕೃತಿ ಸೌಂದಯ೯ದ ನಡುವಿರುವ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ 80 ಲಕ್ಷ ರು. ವೆಚ್ಚದಲ್ಲಿ ಕಲಾಮಂದಿರ ನಿಮಾ೯ಣವನ್ನು 1 ವಷ೯ದೊಳಗೆ ಮುಕ್ತಾಯಗೊಳಿಸಲಾಗುತ್ತದೆ. ಈ ಮೂಲಕ ಭಜನೆ, ಯೋಗ, ಪ್ರಾಣಾಯಾಮ, ಬಾಲಸಂಸ್ಕಾರ, ಧಾಮಿ೯ಕ ಪ್ರವಚನಗಳಿಗೆ ಈ ಕೇಂದ್ರದಲ್ಲಿ ಅವಕಾಶ ನೀಡಲಾಗುತ್ತದೆ ಎಂದರು. ಶ್ರೀ ಕ್ಷೇತ್ರ ಧಮ೯ಸ್ಥಳ ಗ್ರಾಮಾಭಿವೖದ್ದಿ ಯೋಜನೆಯ ಮಡಿಕೇರಿ ತಾಲೂಕಿನ ಜ್ಞಾನ ವಿಕಾಸ ಸಮನ್ವಯಾಧಿಕಾರಿ ವಿಮಲ, ದೇವಾಲಯ ಆಡಳಿತ ಮಂಡಳಿ ಉಪಾಧ್ಯಕ್ಷ ಕೆ.ಆರ್. ರಾಜು ವೇದಿಕೆಯಲ್ಲಿದ್ದರು. ವಿಠಲ ನಿರೂಪಿಸಿದರು. ಮಕರಸಂಕ್ರಾಂತಿ ಅಂಗವಾಗಿ ದೇವಾಲಯದಲ್ಲಿ ವಿಶೇಷ ಪೂಜೆ, ಅನ್ನಸಂತಪ೯ಣೆ ಜರುಗಿತು. ಈ ವ್ಯಾಪ್ತಿಯ ಗ್ರಾಮಗಳ ನೂರಾರು ಭಕ್ತರು ಪಾಲ್ಗೊಂಡಿದ್ದರು.

 

Share. Facebook Twitter Pinterest LinkedIn Tumblr Email WhatsApp
Previous Article*ಕೊಡಗು ಜಿಲ್ಲಾ ಮಲೆಯ ಸಮಾಜಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ*
Next Article *ಕೊಡಗು ವೈದ್ಯಾಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ*

Related Posts

ಬಂಗಾರ ಕೊಳ್ಳುವವರಿಗೆ ಹಬ್ಬದ ಸಂಭ್ರಮ: ದಿಢೀರ್ ಇಳಿಕೆಯಾದ ಚಿನ್ನದ ದರ, ಎಷ್ಟಿದೆ ಗೊತ್ತಾ?

February 11, 2026

*ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ ಹುಲಿ ಸೆರೆ*

February 11, 2026

ನಾಳೆ ದೇಶಾದ್ಯಂತ ಕಾರ್ಮಿಕ ಸಂಘಟನೆಗಳ ಮುಷ್ಕರ: ಬಸ್, ಬ್ಯಾಂಕ್, ಶಾಲಾ-ಕಾಲೇಜುಗಳ ಸ್ಥಿತಿ ಏನು? ಹೊರಗಡೆ ಹೋಗುವ ಮುನ್ನ ಈ ಸುದ್ದಿ ಓದಿ!

February 11, 2026

*ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ ಹುಲಿ ಸೆರೆ*

February 11, 2026

ಮಡಿಕೇರಿ, NEWS DESK ಫೆ.11 : ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ನಿರಂತರವಾಗಿ ಜಾನುವಾರುಗಳ ಮೇಲೆ ದಾಳಿ…

ನಾಳೆ ದೇಶಾದ್ಯಂತ ಕಾರ್ಮಿಕ ಸಂಘಟನೆಗಳ ಮುಷ್ಕರ: ಬಸ್, ಬ್ಯಾಂಕ್, ಶಾಲಾ-ಕಾಲೇಜುಗಳ ಸ್ಥಿತಿ ಏನು? ಹೊರಗಡೆ ಹೋಗುವ ಮುನ್ನ ಈ ಸುದ್ದಿ ಓದಿ!

February 11, 2026

*ಪಿ.ಕೃಷ್ಣೇಗೌಡ ನೇತೃತ್ವದ ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷರಾಗಿ ಪಿ.ಕೆ.ಉದಯಕುಮಾರ್ ಆಯ್ಕೆ*

February 11, 2026

*ಆಹಾರ ಭದ್ರತಾ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಗೊಳಿಸಿ: ಡಾ.ಎಚ್.ಕೃಷ್ಣ*

February 11, 2026

*ಅರಣ್ಯ ಹಕ್ಕು ಕಾಯ್ದೆ ಆದಿವಾಸಿಗಳಿಗೆ ತಲುಪಿಸಿ: ಗಿರಿಧರ*

February 11, 2026

*ಕಾರ್ಮಿಕ ವರ್ಗದ ತುರ್ತು ರೋಗಿಗಳಿಗೆ ಸರತಿ ಸಾಲು ಬೇಡ : ಜಿಲ್ಲಾ ಸರ್ಜನ್ ಗೆ ಮನವಿ ಸಲ್ಲಿಸಿದ ಎಸ್‌ಡಿಟಿಯು*

February 11, 2026

*ಮೈಸೂರಿನಲ್ಲಿ ಪೂರ್ಣ ಪ್ರಮಾಣದ ಪಾಸ್‌ಪೋರ್ಟ್‌ ಸೇವಾ ಕೇಂದ್ರ ಆರಂಭಕ್ಕೆ ಯದುವೀರ್‌ ಒತ್ತಡ ಕೇಂದ್ರ ವಿದೇಶಾಂಗ ಸಚಿವರಿಗೆ ಮನವಿ ಸಲ್ಲಿಸಿರುವ ಮೈಸೂರು-ಕೊಡಗು ಸಂಸದರು*

February 11, 2026

*ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯಿಂದ ಮಡಿಕೇರಿಯಲ್ಲಿ ಪ್ರತಿಭಟನೆ*

February 11, 2026

*ಸಾಂತ್ವನ ಮಹಿಳಾ ಸಹಾಯವಾಣಿ : ಕೊಡಗಿನಲ್ಲಿ 5657 ಪ್ರಕರಣಗಳು ಇತ್ಯರ್ಥ*

February 11, 2026

*ಕಾಯಕ ಶರಣರ ಜಯಂತಿ ಸಮ ಸಮಾಜ ನಿರ್ಮಾಣದಲ್ಲಿ ಕಾಯಕ ಶರಣರ ಕೊಡುಗೆ ಅಪಾರ: ಹೇಮಲತಾ*

February 10, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.