Close Menu
News-Desk-KannadaNews-Desk-Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • ಬಂಗಾರ ಕೊಳ್ಳುವವರಿಗೆ ಹಬ್ಬದ ಸಂಭ್ರಮ: ದಿಢೀರ್ ಇಳಿಕೆಯಾದ ಚಿನ್ನದ ದರ, ಎಷ್ಟಿದೆ ಗೊತ್ತಾ?
  • *ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ ಹುಲಿ ಸೆರೆ*
  • ನಾಳೆ ದೇಶಾದ್ಯಂತ ಕಾರ್ಮಿಕ ಸಂಘಟನೆಗಳ ಮುಷ್ಕರ: ಬಸ್, ಬ್ಯಾಂಕ್, ಶಾಲಾ-ಕಾಲೇಜುಗಳ ಸ್ಥಿತಿ ಏನು? ಹೊರಗಡೆ ಹೋಗುವ ಮುನ್ನ ಈ ಸುದ್ದಿ ಓದಿ!
  • *ಪಿ.ಕೃಷ್ಣೇಗೌಡ ನೇತೃತ್ವದ ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷರಾಗಿ ಪಿ.ಕೆ.ಉದಯಕುಮಾರ್ ಆಯ್ಕೆ*
  • *ಆಹಾರ ಭದ್ರತಾ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಗೊಳಿಸಿ: ಡಾ.ಎಚ್.ಕೃಷ್ಣ*
  • *ಅರಣ್ಯ ಹಕ್ಕು ಕಾಯ್ದೆ ಆದಿವಾಸಿಗಳಿಗೆ ತಲುಪಿಸಿ: ಗಿರಿಧರ*
  • *ಕಾರ್ಮಿಕ ವರ್ಗದ ತುರ್ತು ರೋಗಿಗಳಿಗೆ ಸರತಿ ಸಾಲು ಬೇಡ : ಜಿಲ್ಲಾ ಸರ್ಜನ್ ಗೆ ಮನವಿ ಸಲ್ಲಿಸಿದ ಎಸ್‌ಡಿಟಿಯು*
  • *ಮೈಸೂರಿನಲ್ಲಿ ಪೂರ್ಣ ಪ್ರಮಾಣದ ಪಾಸ್‌ಪೋರ್ಟ್‌ ಸೇವಾ ಕೇಂದ್ರ ಆರಂಭಕ್ಕೆ ಯದುವೀರ್‌ ಒತ್ತಡ ಕೇಂದ್ರ ವಿದೇಶಾಂಗ ಸಚಿವರಿಗೆ ಮನವಿ ಸಲ್ಲಿಸಿರುವ ಮೈಸೂರು-ಕೊಡಗು ಸಂಸದರು*
  • *ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯಿಂದ ಮಡಿಕೇರಿಯಲ್ಲಿ ಪ್ರತಿಭಟನೆ*
  • *ಸಾಂತ್ವನ ಮಹಿಳಾ ಸಹಾಯವಾಣಿ : ಕೊಡಗಿನಲ್ಲಿ 5657 ಪ್ರಕರಣಗಳು ಇತ್ಯರ್ಥ*
News-Desk-KannadaNews-Desk-Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News-Desk-KannadaNews-Desk-Kannada





Home » *ಕೊಡಗು : ಬಾಲಕರ ಬಾಲಮಂದಿರಕ್ಕೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ದಿಢೀರ್ ಭೇಟಿ : ಗುಣಮಟ್ಟದ ಆಹಾರ ಪೂರೈಕೆಗೆ ಸಲಹೆ*
ಇತ್ತೀಚಿನ ಸುದ್ದಿಗಳು

*ಕೊಡಗು : ಬಾಲಕರ ಬಾಲಮಂದಿರಕ್ಕೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ದಿಢೀರ್ ಭೇಟಿ : ಗುಣಮಟ್ಟದ ಆಹಾರ ಪೂರೈಕೆಗೆ ಸಲಹೆ*

January 14, 20261 Min Read
Facebook WhatsApp Twitter Telegram Copy Link Threads Email LinkedIn Pinterest
Facebook Twitter WhatsApp Email Telegram Copy Link

ಮಡಿಕೇರಿ ಜ.14 NEWS DESK : ನಗರದ ಬಾಲಕರ ಬಾಲಮಂದಿರಕ್ಕೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ಬಾಲಕರ ಬಾಲಮಂದಿರದಲ್ಲಿರುವ ಮಕ್ಕಳಿಂದ ವಿದ್ಯಾಭ್ಯಾಸ, ಊಟೋಪಚಾರ, ಬಿಸಿನೀರು ವ್ಯವಸ್ಥೆ, ಗ್ರಂಥಾಲಯ ಸೌಲಭ್ಯ ಮತ್ತಿತರ ಬಗ್ಗೆ ಮಾಹಿತಿ ಪಡೆದರು.  ಕುಂದುಕೊರತೆಗಳಿದ್ದಲ್ಲಿ ಜಿಲ್ಲಾಡಳಿತದ ಗಮನಕ್ಕೆ ತರುವಂತೆ ಸಲಹೆ ನೀಡಿದು. ಮೆನು ಪ್ರಕಾರ ಗುಣಮಟ್ಟದ ಆಹಾರ ಪೂರೈಸಬೇಕು. ಸ್ವಚ್ಛತೆಗೆ ಒತ್ತು ನೀಡಬೇಕು. ಪ್ರತೀ ತಿಂಗಳು ಮಕ್ಕಳಿಗೆ ಆರೋಗ್ಯ ತಪಾಸಣೆ ನಡೆಸಬೇಕು. ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಉತ್ತೇಜಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.  ವಿದ್ಯಾರ್ಥಿಗಳು ಪ್ರತೀ ನಿತ್ಯ ದಿನಪತ್ರಿಕೆಯನ್ನು ಓದಬೇಕು. ಗ್ರಂಥಾಲಯ ಸೌಲಭ್ಯವನ್ನು ಪಡೆದು ಒಳ್ಳೆಯ ಪುಸ್ತಕಗಳನ್ನು ಅಧ್ಯಯನ ಮಾಡುವಂತಾಗಬೇಕು ಎಂದು ಜಿಲ್ಲಾಧಿಕಾರಿ ವಿದ್ಯಾರ್ಥಿಗಳಿಗೆ ಪಾಠ ಮಾಡಿದರು. ಪಾಠದ ಜೊತೆಗೆ ಆಟ ಇರಬೇಕು. ಹೆಚ್ಚು ಅಧ್ಯಯನ ಮಾಡುವುದರಿಂದ ಉನ್ನತ ವ್ಯಾಸಂಗ ಪಡೆಯಲು ಸಾಧ್ಯ. ಆ ನಿಟ್ಟಿನಲ್ಲಿ ಪ್ರಯತ್ನ ಇರಬೇಕು ಎಂದು ಜಿಲ್ಲಾಧಿಕಾರಿ ಅವರು ನುಡಿದರು.  ವಿದ್ಯಾರ್ಥಿಗಳು ಲಭ್ಯವಿರುವ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡು ವೃತ್ತಿಪರ ಶಿಕ್ಷಣ ಮಾಡುವತ್ತ ಗಮನಹರಿಸಬೇಕು. ಯಾವುದೇ ಕಾರಣಕ್ಕೂ ಕೊರಗಬಾರದು. ಛಲ ಮತ್ತು ಆತ್ಮವಿಶ್ವಾಸ ಇದ್ದಲ್ಲಿ ಯಶಸ್ಸುಗಳಿಸಲು ಸಾಧ್ಯ. ಆ ನಿಟ್ಟಿನಲ್ಲಿ ಸತತ ಪ್ರಯತ್ನ ಅಗತ್ಯ ಎಂದು ಹೇಳಿದರು. ಇಂದಿನ ಆಧುನಿಕ ಯುಗದಲ್ಲಿ ಬುದ್ದಿವಂತಿಕೆಗೆ ಆದ್ಯತೆ ಇದೆ. ಆ ನಿಟ್ಟಿನಲ್ಲಿ ಹೆಚ್ಚಿನ ಅಧ್ಯಯನ ಅಗತ್ಯ ಎಂದು ವಿವರಿಸಿದರು. ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಗಿರಿಜನ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವ್ಯಾಪ್ತಿಯ ವಿದ್ಯಾರ್ಥಿ ನಿಲಯಗಳು ಮತ್ತು ಮೊರಾರ್ಜಿ ದೇಸಾಯಿ, ಏಕಲವ್ಯ ವಸತಿ ಶಾಲೆಗಳ ವ್ಯಾಪ್ತಿಯಲ್ಲಿ ಮೆನು ಪ್ರಕಾರ ಗುಣಮಟ್ಟದ ಆಹಾರ ನೀಡಬೇಕು. ವಿದ್ಯಾರ್ಥಿ ನಿಲಯಗಳಲ್ಲಿ ದಿನಪತ್ರಿಕೆಯನ್ನು ಕಡ್ಡಾಯವಾಗಿ ತರಿಸಬೇಕು. ವಿದ್ಯಾರ್ಥಿಗಳು ದಿನಪತ್ರಿಕೆಯನ್ನು ಓದಲು ಉತ್ತೇಜಿಸಬೇಕು. ಗ್ರಂಥಾಲಯ ಬಳಕೆಗೆ ಅವಕಾಶ ಮಾಡಬೇಕು ಎಂದು ಇದೇ ಸಂದರ್ಭದಲ್ಲಿ ಹೇಳಿದರು. ಈ ಸಂದರ್ಭದಲ್ಲಿ ಮಕ್ಕಳ ರಕ್ಷಣಾಧಿಕಾರಿ ಎಸ್.ಹೊನ್ನೇಗೌಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಪ್ರಸನ್ನ ಕುಮಾರ್, ಮಕ್ಕಳ ರಕ್ಷಣಾಧಿಕಾರಿಗಳಾದ ಸಚಿನ್ ಸುವರ್ಣ, ಇರ್ಷಾದ್, ಸಂಸ್ಥೆಯ ಮೇಲ್ವಿಚಾರಕರಾದ ಸತ್ಯಭಾಮ, ಪವಿತ್ರ, ಇತರರು ಇದ್ದರು.

 

Share. Facebook Twitter Pinterest LinkedIn Tumblr Email WhatsApp
Previous Article*ಪೊನ್ನಂಪೇಟೆ ತಾಲ್ಲೂಕಿನ ಗ್ರಾಮಗಳಲ್ಲಿ ಮಿತಿ ಮೀರಿದ ವನ್ಯಜೀವಿಗಳ ಉಪಟಳ : 5 ದಿನಗಳ ಗಡುವು ನೀಡಿದ ಗ್ರಾಮಸ್ಥರು*
Next Article *ಕೆದಮುಳ್ಳೂರು ಅಯ್ಯಪ್ಪ ಬನದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಮಕರ ಜ್ಯೋತಿ ಪೂಜೆ*

Related Posts

ಬಂಗಾರ ಕೊಳ್ಳುವವರಿಗೆ ಹಬ್ಬದ ಸಂಭ್ರಮ: ದಿಢೀರ್ ಇಳಿಕೆಯಾದ ಚಿನ್ನದ ದರ, ಎಷ್ಟಿದೆ ಗೊತ್ತಾ?

February 11, 2026

*ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ ಹುಲಿ ಸೆರೆ*

February 11, 2026

ನಾಳೆ ದೇಶಾದ್ಯಂತ ಕಾರ್ಮಿಕ ಸಂಘಟನೆಗಳ ಮುಷ್ಕರ: ಬಸ್, ಬ್ಯಾಂಕ್, ಶಾಲಾ-ಕಾಲೇಜುಗಳ ಸ್ಥಿತಿ ಏನು? ಹೊರಗಡೆ ಹೋಗುವ ಮುನ್ನ ಈ ಸುದ್ದಿ ಓದಿ!

February 11, 2026

*ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ ಹುಲಿ ಸೆರೆ*

February 11, 2026

ಮಡಿಕೇರಿ, NEWS DESK ಫೆ.11 : ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ನಿರಂತರವಾಗಿ ಜಾನುವಾರುಗಳ ಮೇಲೆ ದಾಳಿ…

ನಾಳೆ ದೇಶಾದ್ಯಂತ ಕಾರ್ಮಿಕ ಸಂಘಟನೆಗಳ ಮುಷ್ಕರ: ಬಸ್, ಬ್ಯಾಂಕ್, ಶಾಲಾ-ಕಾಲೇಜುಗಳ ಸ್ಥಿತಿ ಏನು? ಹೊರಗಡೆ ಹೋಗುವ ಮುನ್ನ ಈ ಸುದ್ದಿ ಓದಿ!

February 11, 2026

*ಪಿ.ಕೃಷ್ಣೇಗೌಡ ನೇತೃತ್ವದ ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷರಾಗಿ ಪಿ.ಕೆ.ಉದಯಕುಮಾರ್ ಆಯ್ಕೆ*

February 11, 2026

*ಆಹಾರ ಭದ್ರತಾ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಗೊಳಿಸಿ: ಡಾ.ಎಚ್.ಕೃಷ್ಣ*

February 11, 2026

*ಅರಣ್ಯ ಹಕ್ಕು ಕಾಯ್ದೆ ಆದಿವಾಸಿಗಳಿಗೆ ತಲುಪಿಸಿ: ಗಿರಿಧರ*

February 11, 2026

*ಕಾರ್ಮಿಕ ವರ್ಗದ ತುರ್ತು ರೋಗಿಗಳಿಗೆ ಸರತಿ ಸಾಲು ಬೇಡ : ಜಿಲ್ಲಾ ಸರ್ಜನ್ ಗೆ ಮನವಿ ಸಲ್ಲಿಸಿದ ಎಸ್‌ಡಿಟಿಯು*

February 11, 2026

*ಮೈಸೂರಿನಲ್ಲಿ ಪೂರ್ಣ ಪ್ರಮಾಣದ ಪಾಸ್‌ಪೋರ್ಟ್‌ ಸೇವಾ ಕೇಂದ್ರ ಆರಂಭಕ್ಕೆ ಯದುವೀರ್‌ ಒತ್ತಡ ಕೇಂದ್ರ ವಿದೇಶಾಂಗ ಸಚಿವರಿಗೆ ಮನವಿ ಸಲ್ಲಿಸಿರುವ ಮೈಸೂರು-ಕೊಡಗು ಸಂಸದರು*

February 11, 2026

*ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯಿಂದ ಮಡಿಕೇರಿಯಲ್ಲಿ ಪ್ರತಿಭಟನೆ*

February 11, 2026

*ಸಾಂತ್ವನ ಮಹಿಳಾ ಸಹಾಯವಾಣಿ : ಕೊಡಗಿನಲ್ಲಿ 5657 ಪ್ರಕರಣಗಳು ಇತ್ಯರ್ಥ*

February 11, 2026

*ಕಾಯಕ ಶರಣರ ಜಯಂತಿ ಸಮ ಸಮಾಜ ನಿರ್ಮಾಣದಲ್ಲಿ ಕಾಯಕ ಶರಣರ ಕೊಡುಗೆ ಅಪಾರ: ಹೇಮಲತಾ*

February 10, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.