
ವಿರಾಜಪೇಟೆ ಜ.15 NEWS DESK : ಹೆಗ್ಗಳ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ದಾನಿಗಳು ನೀಡಿದ ಟ್ರ್ಯಾಕ್ ಸೂಟ್ ನ್ನು ವಿತರಿಸಲಾಯಿತು. ದಾನಿಗಳಾದ ಪರ್ವತಾರೋಹಿ ಜಮ್ಮಡ ಪ್ರೀತು ಅಪ್ಪಯ್ಯ, ವನ್ಯಜೀವಿ ಛಾಯಾಗ್ರಾಹಕರಾದ ಕುಜ್ನ್ಯ೦ಡ ಮಹೇಶ್, ಪ್ರಮೀಳಾ ಕೆ. ಎ.,ಹಾಗೂ ಪಟ್ಟಡ ರಕ್ಷಿತ್ ಚಂಗಪ್ಪ ಅವರು ವಿದ್ಯಾರ್ಥಿಗಳ ಟ್ರ್ಯಾಕ್ ಸೂಟ್ ಗೆ ಬೇಕಾದ ಧನ ಸಹಾಯವನ್ನು ನೀಡಿದ್ದರು. ಟ್ರ್ಯಾಕ್ ಸೂಟ್ ನ್ನು ದಾನಿಗಳಾದ ಕುಜ್ಞ್ಯoಡ ಮಹೇಶ್ ರವರು ಶಾಲಾ ಮಕ್ಕಳಿಗೆ ವಿತರಿಸಿದರು. ಈ ಸಂದರ್ಭ ಶಾಲಾ ಮುಖ್ಯ ಶಿಕ್ಷಕಿ ಕಮಲಮ್ಮ, ಸಹ ಶಿಕ್ಷಕಿ, ಸಿಬ್ಬಂದಿಗಳು, ಶಾಲೆಯ ಎಸ್ ಡಿ ಎಂ ಸಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.









