
ಮಡಿಕೇರಿ NEWS DESK ಜ.16 : ಮೈಸೂರಿನ ಯುವರಾಜ ಸ್ಟೇಡಿಯಂನಲ್ಲಿ ನಡೆದ ರಾಜ್ಯಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾಗಮಂಡಲದ ಚೈನೀಸ್ ಕೆನ್‌ಪೊ ಕರಾಟೆ ಶಾಖೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿ 7 ಚಿನ್ನ ಮತ್ತು 11 ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ. ಜಿತಿಕಾ, ಜಶ್ವಿನ್, ಪ್ರತಾಪ್, ಮನ್ವಿತ್, ಗುರುದೀಪ್, ಚೇತಕ್ ಹಾಗೂ ಶಿವಾನಿ ಚಿನ್ನದ ಪದಕಗಳನ್ನು ಗೆದ್ದುಕೊಂಡರು. ರತನ್, ಹಿಮಾನಿ, ಹರ್ಷಿಕಾ, ಪ್ರಿಯಾಂಕ, ಹಿರಾಲ್, ಅಕುಲ್, ಗಗನ್, ತಮನ್, ತ್ರೈಸಿ, ಜಾನೇಶ್ ಹಾಗೂ ಪ್ರೀತಂ ಬೆಳ್ಳಿ ಪದಕಗಳನ್ನು ತಮ್ಮದಾಗಿಸಿಕೊಂಡರು. ತಂಡದ ಪರವಾಗಿ ಚೈನೀಸ್ ಕೆನ್‌ಪೊ ಕರಾಟೆ ಶಾಖೆಯ ನಿರ್ದೇಶಕ ನಾಗರಾಜ್, ಕರಾಟೆ ಶಿಕ್ಷಕರಾದ ಇಮ್ಯಾನ್ವಲ್ ಕೆ.ಜೆ, ರಾಯ್ ಜೋಸೆಫ್ ಹಾಗೂ ಗ್ರಾಂಡ್ ಮಾಸ್ಟರ್ ರಾಜೇಶ್ ಉಪಸ್ಥಿತರಿದ್ದರು.










