
ನಾಪೋಕ್ಲು ಜ.21 NEWS DESK : ಕೋರಂಗಲದ ಜ್ಞಾನೋದಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ಸಂತೆ ಹಾಗೂ ಪುಟಾಣಿಗಳ ಛದ್ಮವೇಷ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಮಕ್ಕಳ ಸಂತೆಯಲ್ಲಿ ವಿವಿಧ ರೀತಿಯ ತರಕಾರಿಗಳು, ತಿಂಡಿ-ತಿನಿಸುಗಳ ಮಳಿಗೆಗಳು, ವಿವಿಧ ಬಗೆಯ ಹೂವಿನ ಗಿಡಗಳು ಹಾಗೂ ಅಲಂಕಾರಿಕ ಗಿಡಗಳ ಕುಂಡಗಳು ಮಾರಾಟಕ್ಕಿದ್ದವು. ಛದ್ಮವೇಷ ಸ್ಪರ್ಧೆಯಲ್ಲಿ ಅನೇಕ ಪುಟಾಣಿಗಳು ಉತ್ಸಾಹದಿಂದ ಭಾಗವಹಿಸಿ ತಮ್ಮ ಮನಮೋಹಕ ವೇಷಭೂಷಣಗಳಿಂದ ಎಲ್ಲರ ಗಮನ ಸೆಳೆದರು. ಕಾರ್ಯಕ್ರಮದಲ್ಲಿ ಶಾಲೆ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಚೀಯಕ ಪೂವಂಡ ಮಿಥುನ್ ಚಂಗಪ್ಪ ಹಾಗೂ ಟ್ರಸ್ಟಿಗಳಾದ ಚೀಯಕಪೂವಂಡ ಸಚಿನ್ ಪೂವಯ್ಯ ಮುಖ್ಯ ಶಿಕ್ಷಕರಾದ ಶ್ವೇತನ್ ಚೆಂಗಪ್ಪ, ಮಕ್ಕಳ ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದು ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಿ ಶುಭ ಹಾರೈಸಿದರು. ಶಿಕ್ಷಕರಾದ ಶ್ರುತಿ ಬಿ. ಪಿ ಅವರು ಸ್ವಾಗತಿಸಿದ ಕಾರ್ಯಕ್ರಮನ್ನು ಚಿತ್ರಾ ಎಂ.ಎ.ನಿರೂಸಿ, ವಂದಿಸಿದರು.
ವರದಿ : ದುಗ್ಗಳ ಸದಾನಂದ









