
ಸುಂಟಿಕೊಪ್ಪ,ಜ.27 NEWS DESK : ಬಾಳೆಕಾಡು ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಮುತ್ತಪ್ಪ ಸೇವಾ ಸಮಿತಿಗೆ 2026-27ನೇ ಸಾಲಿನ ಅಧ್ಯಕ್ಷರಾಗಿ ಹರೀಶ್(ಹರೀ), ಪ್ರಧಾನ ಕಾರ್ಯದರ್ಶಿಯಾಗಿ ಪ್ರಕಾಶ್(ಕುಟ್ಟಿ) ಆಯ್ಕೆಯಾಗಿದ್ದಾರೆ. ದೇವಾಲಯದ ಆವರಣದಲ್ಲಿ ಅಧ್ಯಕ್ಷ ಪ್ರಶಾಂತ್ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ನೂತನ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಹರೀಶ, ಸಹ ಉಪಾಧ್ಯಕ್ಷರಾಗಿ ವಸಂತ, ಸಹ ಕಾರ್ಯದರ್ಶಿಯಾಗಿ ಅರುಣ, ಖಜಾಂಚಿಯಾಗಿ ಸತೀಶ್, ಸಹ ಖಜಾಂಚಿಯಾಗಿ ಸುಜಯ್, ಗೌರವ ಅಧ್ಯಕ್ಷರುಗಳಾಗಿ ಅಶೋಕ, ಶಶಿ, ಉನ್ನಿಕೃಷ್ಣ, ತಂಗಪ್ಪ, ಅಶೋಕ್, ಕುಮಾರ, ವಾಸು, ಮುರುಗೇಶ್, ರಾಮಚಂದ್ರ ನೇಮಗೊಂಡಿದ್ದಾರೆ. ಸಲಹೆಗಾರರಾಗಿ ಪ್ರವೀಣ್, ಸುರೇಶ್, ಸಂದೀಪ್ (ರಾಜೇಶ್) ಮೋಹನ್ ಪ್ರದೀಪ್, ವಿನು, ಬಿ,ರವಿ,ಸಿ, ಮೋಹನ್, ಆರ್.ಸುಧಿ ಅವರನ್ನು ಆಯ್ಕೆ ಮಾಡಲಾಯಿತು.









