
ಕುಶಾಲನಗರ ಜ.27 NEWS DESK : ಕುಶಾಲನಗರದ ಎಸ್.ಕೆ.ಎಸ್.ಎಸ್.ಎಫ್ ಹಾಗೂ ಎಸ್.ವೈ.ಎಸ್ ವತಿಯಿಂದ ಕುಶಾಲನಗರದ ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ಗಣರಾಜ್ಯೋತ್ಸವ ಹಾಗೂ ಎಸ್.ಕೆ.ಎಸ್.ಎಸ್.ಎಫ್ ನ 100ನೇ ವರ್ಷದ ಪ್ರಚಾರದ ಅಂಗವಾಗಿ ಕೊಡಗು ಜಿಲ್ಲಾ ಎಸ್.ಕೆ.ಎಸ್.ಎಸ್.ಎಫ್ ಉಪಾಧ್ಯಕ್ಷರಾದ ಅಬ್ದುಲ್ ಮಜೀದ್ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು. ಇದೇ ರೀತಿ ಬಡವರಿಗೆ ಅನುಕೂಲವಾಗುವ ಕೆಲಸಗಳನ್ನು ಎಸ್.ಕೆ.ಎಸ್.ಎಸ್.ಎಫ್ ವತಿಯಿಂದ ನಡೆಸಲಾಗುತ್ತಿದೆ ಎಂದರು. ಈ ಸಂದರ್ಭ ಮಾಜಿ ಸೈನಿಕರಾದ ಅಬ್ದುಲ್ ರಜಾ಼ಕ್, ಉಸ್ಮಾನ್.ಕೆ, ಎಮ್.ಅಬೂಬಕರ್, ಶಕೀರ್ ಫೈಜಿ಼, ಅಬ್ದುಲ್ಲ ಫೈಜ಼ಿ, ಹುಸೇನ್, ಅಬ್ಲುಲ್ಲಾ ಪ್ಲೈ ಕೂರ್ಗ್, ಶೌಕತ್, ಕುಶಾಲನಗರ ಎಸ್.ಕೆ.ಎಸ್.ಎಸ್.ಎಫ್ ಹಾಗೂ ಎಸ್.ವೈ.ಎಸ್ ಕಾರ್ಯಕರ್ತರು ಇದ್ದರು.









