
ಮಡಿಕೇರಿ ಜ.27 NEWS DESK : ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ನಡೆದ 77ನೇ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಸೋಮವಾರಪೇಟೆಯ ತಾನ್ಯ ಮುರಳೀಧರ್ ಪ್ರತಿನಿಧಿಸಿದ್ದ ರಾಜ್ಯ ರಾಷ್ಟ್ರೀಯ ಸೇವಾದಳ (ಎನ್‍ಎಸ್‍ಎಸ್) ತಂಡ ಪ್ರಥಮ ಬಹುಮಾನ ಪಡೆದುಕೊಂಡಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಗೌರವ ರಕ್ಷೆ ನೀಡುವ ಸಂದರ್ಭ ರಾಜ್ಯ ರಾಷ್ಟ್ರಿಯ ಸೇವಾದಳ ತಂಡ ಆಕರ್ಷಕ ಪಥಸಂಚಲನದ ಮೂಲಕ ಗಮನ ಸೆಳೆಯಿತು. ಅಲ್ಲದೆ, ಪ್ರಥಮ ಬಹುಮಾನಕ್ಕೂ ಭಾಜನವಾಯಿತು. ತಂಡಕ್ಕೆ ರಾಜ್ಯ ಮಟ್ಟದಿಂದ ಆಯ್ಕೆಯಾದ ವಿದ್ಯಾರ್ಥಿಗಳಲ್ಲಿ ತಾನ್ಯ ಕೂಡ ಒಬ್ಬರಾಗಿದ್ದು, ಪ್ರಶಂಸನಾ ಪತ್ರ ಪಡೆದುಕೊಂಡಿದ್ದಾರೆ. ಸೋಮವಾರಪೇಟೆಯ ಹಿರಿಯ ಪತ್ರಕರ್ತ ಎಸ್.ಎ.ಮುರಳೀಧರ ಹಾಗೂ ಸರಿತಾ ದಂಪತಿಯ ಪುತ್ರಿ ತಾನ್ಯ ಈ ಹಿಂದೆ ಕೇರಳದ ಪಾಲಕ್ಕಾಡ್ ನಲ್ಲಿ ನಡೆದ ದಕ್ಷಿಣ ವಲಯ ಆರ್‌ಡಿ ಕ್ಯಾಂಪ್ ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು. ಈಕೆ ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾನಿಲಯದಲ್ಲಿ ದ್ವಿತೀಯ ವರ್ಷದ ಅರಣ್ಯ ಶಾಸ್ತ್ರ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.









