
ಮಡಿಕೇರಿ ಜ.29 NEWS DESK : ಅಲ್ ಅಮೀನ್ ಕೊಡಗು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಪ್ರತಿವರ್ಷ ನಡೆಸಿಕೊಂಡು ಬರುತ್ತಿರುವ ಮುಸ್ಲಿಂ ಸಮಾಜದ ಬಡ ಮತ್ತು ಅನಾಥ ಹೆಣ್ಣು ಮಕ್ಕಳ ಉಚಿತ ಸಾಮೂಹಿಕ ವಿವಾಹ ಸಮಾರಂಭ ಫೆ.1 ರಂದು ನಡೆಯಲಿದೆ. ಸುಂಟಿಕೊಪ್ಪದ ಎಸ್.ಎಸ್,ಹಾಲ್ ನಲ್ಲಿ ಪೂರ್ವಾಹ್ನ 10.30 ಗಂಟೆಗೆ ಸಮಾರಂಭ ನಡೆಯಲಿದ್ದು, ಆಯ್ದ 11 ಜೋಡಿ ವಧು ವರರು ಸತಿಪತಿಗಳಾಗಲಿದ್ದಾರೆ. ವಧುವಿಗೆ ಚಿನ್ನದ ಸರ ಮತ್ತು ಬಳೆಯನ್ನು ಅಲ್ ಅಮೀನ್ ಸಮಿತಿಯು ನೀಡಲಿದೆ. ವಧು-ವರರಿಗೆ ಉಡುಪು ಹಾಗೂ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳುವವರಿಗೆ ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನೂ ಮಾಡಲಿದೆ. ಈ ಸಾಮೂಹಿಕ ವಿವಾಹಕ್ಕೆ ತಗಲುವ ವೆಚ್ಚವನ್ನು ಭರಿಸಲು ಅಲ್ ಅಮೀನ್ ಸಮಿತಿಯು ಸಮಾಜ ಬಾಂಧವರನ್ನೇ ಅವಲಂಬಿತವಾಗಿದೆ ಎಂದು ಸಮಿತಿಯ ಅಧ್ಯಕ್ಷ ಬಿ.ಹೆಚ್.ಅಹ್ಮದ್ ಹಾಜಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








