
ಕುಶಾಲನಗರ ಜ.29 NEWS DESK : ಗೊಂದಿಬಸವನಹಳ್ಳಿ ರಸ್ತೆಯಲ್ಲಿ ಇರುವ ಬಲಮರಿ ಗಣಪತಿ ದೇವಾಲಯದ 28ನೇ ವಾರ್ಷಿಕೋತ್ಸವ ಹಾಗೂ ಪೂಜಾ ಕಾರ್ಯಕ್ರಮ ಕಳೆದ ಎರಡು ದಿನಗಳಿಂದ ಶ್ರದ್ಧಾಭಕ್ತಿಯಿಂದ ನೆರವೇರಿತು. ಬುಧವಾರ ಕಳಸ ಸ್ಥಾಪನೆ, ಶುದ್ದಿ ಪುಣ್ಯಾಹ, ಗಣಪತಿ ಹೋಮ, ನವಗ್ರಹ ಪೂಜೆ ಸೇರಿದಂತೆ ಇತರೇ ಧಾರ್ಮಿಕ ಕಾರ್ಯಗಳು ಜರುಗಿದವು. ಗುರುವಾರ ಬೆಳಗ್ಗೆ ಗಣಪತಿ ಹೋಮ, ಸ್ವಾಮಿಗೆ ಪಂಚಾಮೃತ ಅಭಿಷೇಕ, ಮಧ್ಯಾಹ್ನ ಗಣಪತಿ ದೇವರನ್ನು ಬಗೆ ಬಗೆಯ ಪುಷ್ಪಗಳಿಂದ ಅಲಂಕಾರ ಮಾಡಿ ಮಹಾ ಮಹಾ ಮಂಗಳಾರತಿ ನೆರವೇರಿಸಲಾಯಿತು. ಬಳಿಕ ನೆರೆದ ಭಕ್ತರಿಗೆ ಪ್ರಸಾದ ಹಾಗೂ ಅನ್ನಸಂತರ್ಪಣೆ ನೆರವೇರಿತು. ದೇವಾಲಯದ ಅರ್ಚಕ ಪ್ರಕಾಶ್ ಭಟ್ ನೇತೃತ್ವದ ಅರ್ಚಕರ ತಂಡದಿಂದ ಪೂಜಾ ವಿಧಿಗಳು ನಡೆದವು. ದೇವಾಲಯ ಸಮಿತಿ ಗೌರವಾಧ್ಯಕ್ಷ ಎಂ.ಕೆ.ದಿನೇಶ್, ನಿಕಟಪೂರ್ವ ಅಧ್ಯಕ್ಷ ರೇಣುಕುಮಾರ್, ಪ್ರಭಾರ ಅಧ್ಯಕ್ಷ ಕೆ.ವಿ.ಅರುಣ್, ಉಪಾಧ್ಯಕ್ಷ ಶಿವರಾಂ, ಖಜಾಂಚಿ ಬಿ.ಸಿ.ಆನಂದ್, ನಿರ್ದೇಶಕ ರಾದ ಗೋವಿಂದರಾಜ್, ರಾಮಕೃಷ್ಣಾಚಾರ್, ಪೂವಯ್ಯ, ಮುತ್ತಣ್ಣ, ಲಿಂಗಂ, ಜಿ.ಬಿ.ಜಗದೀಶ್, ಲವಕುಮಾರ್,ಭೀಮಯ್ಯ, ಎಸ್.ನಾಗರಾಜು,ಹನುಮರಾಜ್ ಸೇರಿದಂತೆ ಭಕ್ತ ಸಂಕುಲ ನೆರೆದಿತ್ತು.









