
ಮಡಿಕೇರಿ ಜ.31 NEWS DESK : ಕೊಡಗು ಜಿಲ್ಲೆಯ ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ರಸ್ತೆಗಳ ಅಭಿವೃದ್ಧಿಗೆ ಮುಂದಿನ ಬಜೆಟ್ ನಲ್ಲಿ ಅನುದಾನ ಘೋಷಣೆ ಮಾಡುವಂತೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು, ಲೋಕೋಪಯೋಗಿ ಇಲಾಖೆ, ಅರಣ್ಯ ಇಲಾಖೆ ಸಚಿವರ ಗಮನ ಸೆಳೆದರು. ಕೊಡಗು ಜಿಲ್ಲೆಯ ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವೈಲ್ಡ್ ಲೈಫ್ ಸೆಂಚುರಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಹಾಗೂ ಪುಷ್ಪಗಿರಿ – ಬೀದಳ್ಳಿ – ಸುಬ್ರಹ್ಮಣ್ಯದವರೆಗೆ ರಸ್ತೆ ನಿರ್ಮಾಣ, ಮಡಿಕೇರಿ ತಾಲ್ಲೂಕಿನ ಗಾಳಿಬೀಡು ವಣಚಲು – ಕಡಮಕಲ್ಲು ರಸ್ತೆ ನಿರ್ಮಾಣ ಹಾಗೂ ಮುಂದಿನ ಬಜೆಟ್ ಅನುದಾನ ಘೋಷಣೆ ಮಾಡುವ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿದರು.









