
ಸುಂಟಿಕೊಪ್ಪ ಜ.31 NEWS DESK : ಸುಂಟಿಕೊಪ್ಪದ ಮಿಡ್‍ಸಿಟಿ ವತಿಯಿಂದ 3ನೇ ವರ್ಷದ ರಾಷ್ಟ್ರ ಮಟ್ಟದ 5 ಮಂದಿ ಆಟಗಾರರ ಫುಟ್ಬಾಲ್ ಪಂದ್ಯಾವಳಿಗೆ ಕೊಡಗು ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರರಾದ ಎ.ಲೋಕೇಶ್‍ಕುಮಾರ್ ಅವರು ಚಾಲನೆ ನೀಡಿದರು. ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿತಗೊಂಡಿರುವ 3 ದಿನಗಳ ಕಾಲದ ಹೊನಲು ಬೆಳಕಿನ ರಾಷ್ಟ್ರಮಟ್ಟದ ಫುಟ್ಬಾಲ್ ಒದೆಯುವ ಮೂಲಕ ಚಾಲನೆ ನೀಡಿದರು. ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪಿ.ಆರ್.ಸುನಿಲ್‍ಕುಮಾರ್, ಕಡಗಾದಳು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜಯಣ್ಣ, ಬ್ಲೂಬಾಯ್ಸ್ ಯುವಕ ಸಂಘದ ವ್ಯವಸ್ಥಾಪಕ ಟಿ.ಯು.ಪ್ರಸನ್ನ ಮಿಡ್‍ಸಿಟಿ ಸಂಘದ ಹಮೀದ್ ಸೇರಿದಂತೆ ಹಾಜರಿದ್ದರು. ಈ ಪಂದ್ಯಾವಳಿಯಲ್ಲಿ 32 ತಂಡಗಳು ನೋಂದಾವಣಿಗೊಂಡಿದೆ. ಉದ್ಘಾಟನಾ ಪಂದ್ಯಾವಳಿಯು ಗೋವಾ ಮತ್ತು ಮಿಡ್‍ಸಿಟಿ ಜೂನಿಯರ್ ತಂಡಗಳ ನಡುವೆ ನಡೆಯಿತು.









