
ಮಡಿಕೇರಿ NEWS DESK ಫೆ.5 : ಇತ್ತೀಚೆಗೆ ಸಿದ್ದಾಪುರ ಸಮೀಪದ ಗೌರಿಬೆಟ್ಟ ವ್ಯಾಪ್ತಿಯಲ್ಲಿ ಕಾಡಾನೆ ದಾಳಿಯಿಂದ ಸಾವನ್ನಪ್ಪಿದ ಕಾರ್ಮಿಕ, ಹುಂಡಿ ನಿವಾಸಿ ಲತೀಫ್ ಅವರ ಕುಟುಂಬಕ್ಕೆ ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ನ ಕೊಡಗು ಜಿಲ್ಲಾ ಘಟಕ ಸಾಂತ್ವನ ಹೇಳಿತು. ಪಾಲಿಬೆಟ್ಟದ ಹುಂಡಿಯಲ್ಲಿರುವ ಲತೀಫ್ ಅವರ ನಿವಾಸಕ್ಕೆ ಭೇಟಿ ನೀಡಿದ ಎಸ್‌ಡಿಟಿಯು ಪ್ರಮುಖರು ಅಗತ್ಯ ಸಹಕಾರ ನೀಡುವ ಭರವಸೆ ನೀಡಿದರು. ಅತ್ಯಂತ ಬಡತನದಲ್ಲಿರುವ ಕುಟುಂಬಕ್ಕೆ ಸರಕಾರ ಹೆಚ್ಚಿನ ಮೊತ್ತದ ಪರಿಹಾರವನ್ನು ನೀಡಬೇಕು ಎಂದು ಒತ್ತಾಯಿಸಿದರು. ಸಂಬಂಧಿಸಿದ ಇಲಾಖೆಗಳಿಂದ ಸರಕಾರದ ಸೌಲಭ್ಯಗಳನ್ನು ದೊರಕಿಸಿಕೊಡಲು ಸಹಕರಿಸುವುದಾಗಿ ಭರವಸೆ ನೀಡಿದರು. ಎಸ್‌ಡಿಟಿಯುನ ಜಿಲ್ಲಾಧ್ಯಕ್ಷ ಕೆ.ಹೆಚ್.ಅಣ್ಣ ಷರೀಫ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಜಾಕ್ ಎಂ.ಎ, ಸದಸ್ಯರುಗಳಾದ ಇಲಿಯಾಸ್ ಕುಶಾಲನಗರ, ಅಜೀಜ್ ಕುಶಾಲನಗರ ಹಾಗೂ ಸಾಜಿದ್ ಮಡಿಕೇರಿ ನಿಯೋಗದಲ್ಲಿದ್ದರು.









