
ಮಡಿಕೇರಿ NEWS DESK ಫೆ.5 : ಕೊಪ್ಪಳದ ಕರಟಗಿಯಲ್ಲಿ ಫೆ.7 ಮತ್ತು 8ರಂದು ನಡೆಯುವ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿಗೆ ಚೇರಂಬಾಣೆಯ ಶ್ರೀ ರಾಜರಾಜೇಶ್ವರಿ ಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿ ಪಟ್ಟಮಾಡ ವರುಣಿಕಾ ಮುತ್ತಣ್ಣ ಆಯ್ಕೆಯಾಗಿದ್ದಾಳೆ. ಈಕೆ ಭಾವಗೀತೆಯಲ್ಲಿ ಸಾಧನೆ ಮಾಡಿದ್ದು, ಇದೀಗ ರಾಜ್ಯ ಮಟ್ಟದ ಸ್ಪರ್ಧೆಯನ್ನು ಎದುರಿಸಲಿದ್ದಾಳೆ. ಪಟ್ಟಮಾಡ ವರುಣಿಕಾ ಮುತ್ತಣ್ಣ ಚೇರಂಬಾಣೆ ಬೇಂಗೂರು ಗ್ರಾಮದ ಪಟ್ಟಮಾಡ ರವಿನ್ ಮುತ್ತಣ್ಣ ಹಾಗೂ ಮಿಲನ್ ಮುತ್ತಣ್ಣ ದಂಪತಿಯ ಪುತ್ರಿ.









