

ಮಡಿಕೇರಿ NEWS DESK ಫೆ.6 : ಖಾಸಗಿ ಬಸ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಬೈಕ್ ಸವಾರರು ಮೃತಪಟ್ಟಿರುವ ಘಟನೆ ಗೋಣಿಕೊಪ್ಪಲಿನ ಮುಖ್ಯ ರಸ್ತೆಯ ಶ್ರೀ ಉಮಾಮಹೇಶ್ವರಿ ದೇವಾಲಯದ ಬಳಿ ನಡೆದಿದೆ.
ಗೋಣಿಕೊಪ್ಪಲಿನ ನಿವಾಸಿ ಸುಲೈಮಾನ್ (32) ಹಾಗೂ ಚೆನ್ನಂಗೊಲ್ಲಿ ನಿವಾಸಿ ಪೌಲೋಸ್ (28) ಮೃತ ದುರ್ದೈವಿಗಳು. ಸುಲೈಮಾನ್ ಸ್ಥಳದಲ್ಲೇ ಮೃತಪಟ್ಟರೆ, ಪೌಲೋಸ್ ಅವರನ್ನು ಹೆಚ್ಚಿನ ಚಿಕಿತ್ಸೆಗೆಂದು ಮೈಸೂರಿಗೆ ಕರೆದೊಯ್ಯುವ ಸಂದರ್ಭ ದಾರಿ ಮದ್ಯೆ ಕೊನೆಯುಸಿರೆಳೆದಿದ್ದಾರೆ. ಗುರುವಾರ ರಾತ್ರಿ ಖಾಸಗಿ ಬಸ್ ಬೆಂಗಳೂರಿಗೆ ತೆರಳುತ್ತಿದ್ದ ಸಂದರ್ಭ ಈ ಅಪಘಾತ ಸಂಭವಿಸಿದೆ.












