ಮಡಿಕೇರಿ, NEWS DESK ಮಾ.5 : ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಬಳಸಿಕೊಂಡ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣಕ್ಕಾಗಿ ಮೀಸಲಿದ್ದ 39 ಸಾವಿರ ಕೋಟಿ ರೂ.ಗಳನ್ನು ಹಿಂದಿರುಗಿಸಲು ಸರಕಾರ ಅಗತ್ಯ ಕ್ರಮ ಕೈಗೊಳ್ಳದಿದ್ದಲ್ಲಿ ಕೊಡಗಿನ ಗಡಿಭಾಗದ ಗೇಟ್‌ಗಳನ್ನು ಬಂದ್ ಮಾಡಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಬಿಜೆಪಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮೋರ್ಚಾ ಎಚ್ಚರಿಕೆ ನೀಡಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿಯ ಪರಿಶಿಷ್ಟ ಜಾತಿ ಮೋರ್ಚಾದ ಜಿಲ್ಲಾಧ್ಯಕ್ಷ ಪಿ.ಎಂ.ರವಿ ರಾಜ್ಯದ ಕಾಂಗ್ರೆಸ್ ಸರಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಜಾತಿ ಉಪ ಯೋಜನೆಗಳಿಗೆ ಮೀಸಲಾಗಿದ್ದ ಹಣವನ್ನು ಪಂಚ ಗ್ಯಾರಂಟಿಗಳಿಗೆ ಬಳಕೆ ಮಾಡಿದೆ. ಅಲ್ಲದೆ ಮುಂಬರುವ ರಾಜ್ಯ ಬಜೆಟ್‌ನಲ್ಲಿ ಪರಿಶಿಷ್ಟರಿಗೆ ಮೀಸಲಾಗಿದ್ದ ಹಣದಲ್ಲಿ ಉಳಿಕೆಯಾಗಿರುವ 15 ಸಾವಿರ ಕೋಟಿ ರೂ.ಗಳನ್ನು ಬಳಸಿಕೊಳ್ಳಲು ಮುಂದಾಗುತ್ತಿದೆ ಎನ್ನುವ ಮಾಹಿತಿ ಇದೆ. ಯಾವುದೇ ಕಾರಣಕ್ಕೂ ಶೋಷಿತ ಸಮುದಾಯದ ಕಲ್ಯಾಣಕ್ಕೆ ಮೀಸಲಾದ ಹಣವನ್ನು ದುರ್ಬಳಕೆ ಮಾಡಬಾರದು. ಬಜೆಟ್ ಗೂ ಮೊದಲೇ ಮುಖ್ಯಮಂತ್ರಿಗಳು ಪರಿಶಿಷ್ಟರಿಗೆ ಮೀಸಲಾದ ಹಣಕ್ಕೆ ಕೈ ಹಾಕುವುದಿಲ್ಲವೆಂದು ಘೋಷಿಸಬೇಕೆಂದು
ಕಾಂಗ್ರೆಸ್ ಸರಕಾರವು 2023-24ನೇ ಸಾಲಿನಲ್ಲಿ ಪಂಚ ಗ್ಯಾರಂಟಿಗಳಿಗಾಗಿ ಪರಿಶಿಷ್ಟರಿಗೆ ಮೀಸಲಾಗಿದ್ದ ಹಣದಲ್ಲಿ 11,144 ಕೋಟಿ ರೂ.ಗಳನ್ನು ಬಳಸಿಕೊಂಡಿದ್ದರೆ, 2024-25ನೇ ಸಾಲಿನಲ್ಲಿ 14,282 ಕೋಟಿ, 2025-26ನೇ ಸಾಲಿನಲ್ಲಿ 13,433 ಕೋಟಿ ರೂ.ಗಳನ್ನು ಬಳಸಿಕೊಂಡಿದೆ ಎಂದು ಗಂಭೀರ ಆರೋಪ ಮಾಡಿದರು.

2025-26ನೇ ಸಾಲಿನ ಬಜೆಟ್‌ನಲ್ಲಿ ಪರಿಶಿಷ್ಟರಿಗಾಗಿ ( ಎಸ್‌ಸಿ ಎಸ್‌ಪಿ-ಟಿಎಸ್‌ಪಿ) 42,018 ಕೋಟಿ ಮೀಸಲಿಡಲಾಗಿತ್ತು. ಇದರಲ್ಲಿ 23,788 ಕೋಟಿ ಮಾತ್ರ ಬಳಕೆಯಾಗಿದೆ. ಬಳಕೆಯಾದ ಹಣದಲ್ಲಿ 13,443 ಕೋಟಿಗಳನ್ನು ಗ್ಯಾರಂಟಿಗಳಿಗೆ ಬಳಸಲಾಗಿದೆಯಾದ್ದರಿಂದ ಪರಿಶಿಷ್ಟರ ಕಲ್ಯಾಣಕ್ಕೆ ಬಳಕೆಯಾದದ್ದು ಕೇವಲ 10,345 ಕೋಟಿ ರೂ. ಮಾತ್ರವೆಂದು ಬೇಸರ ವ್ಯಕ್ತಪಡಿಸಿದರು.
ಸರಕಾರ ಪಂಚ ಗ್ಯಾರಂಟಿಗಳಿಗೆ ಹಣವನ್ನು ವಿನಿಯೋಗಿಸುತ್ತಿರುವುದರಿಂದ ಪರಿಶಿಷ್ಟರ ಕಲ್ಯಾಣವೆನ್ನುವುದು ಮರೀಚಿಕೆಯಾಗಿದೆ. ಬಹುತೇಕ ಎಲ್ಲಾ ನಿಗಮಗಳು, ವಿವಿಧ ಕಲ್ಯಾಣ ಯೋಜನೆಗಳು ಅಗತ್ಯ ನೆರವು ಲಭ್ಯವಿಲ್ಲದೆ ಸೊರಗಿದೆ. ರಾಜ್ಯದ ಕಾಂಗ್ರೆಸ್ ಸರಕಾರದ ಆಡಳಿತಕ್ಕೆ ಬೆಂಬಲ ನೀಡಿದ್ದ ದಲಿತ ಸಂಘಟನೆಗಳೆ ಪ್ರಸ್ತುತ ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಾಗಿದ್ದ ಹಣವನ್ನು ಪಂಚ ಗ್ಯಾರಂಟಿಗಳಿಗೆ ಬಳಕೆ ಮಾಡುತ್ತಿರುವುದನ್ನು ಅರ್ಥೈಸಿಕೊಂಡಿವೆ. ಇದೇ ಕಾರಣದಿಂದ ಸರಕಾರದ ನಿಲುವನ್ನು ವಿರೋಧಿಸಿ ಪ್ರತಿಭಟನೆಗೂ ಮುಂದಾಗಿವೆ ಎಂದು ಹೇಳಿದರು.
ಕಳೆದ ಮೂರು ವರ್ಷಗಳ ಅವಧಿಯಲ್ಲಿ ದುರ್ಬಳಕೆಯಾಗಿರುವ ಹಣವನ್ನು ಸರ್ಕಾರ ಹಿಂದಕ್ಕೆ ನೀಡಬೇಕು, ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಿದ್ದ 39 ಸಾವಿರ ಕೋಟಿ ಹಣದಲ್ಲಿ ಎಲ್ಲಾ ಜಿಲ್ಲೆಗಳಿಗೆ ದಲಿತರ ಕಲ್ಯಾಣಕ್ಕಾಗಿ ತಲಾ 1 ಕೋಟಿ ಹಣವನ್ನು ಒದಗಿಸಬೇಕು. ಪರಿಶಿಷ್ಟರ ಅಭ್ಯುದಯಕ್ಕೆ ಮೀಸಲಾಗಿರುವ ಎಲ್ಲಾ ನಿಗಮಗಳಿಗೆ ತಲಾ 1 ಸಾವಿರ ಕೋಟಿ ರೂ.ಗಳ ಅನುದಾನವನ್ನು ಬಜೆಟ್ ಸಂದರ್ಭ ಘೋಷಿಸಬೇಕು. ಇಲ್ಲವಾದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಪಿ.ಎಂ.ರವಿ ತಿಳಿಸಿದರು.
ಬಿಜೆಪಿ ಪರಿಶಿಷ್ಟ ಪಂಗಡ ಮೋರ್ಚಾದ ಅಧ್ಯಕ್ಷ ಎಂ.ಎಂ .ಪರಮೇಶ್ವರ್ ಮಾತನಾಡಿ, ರಾಜ್ಯ ಸರಕಾರ 56,342 ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಘೋಷಿಸಿದೆ. ಆದರೆ, ಈ ಭರ್ತಿ ಪ್ರಕ್ರಿಯೆಯನ್ನು ಶೇ.56ರ ಮೀಸಲಾತಿಗೆ ಬದಲಾಗಿ ಹಳೆಯ ಶೇ.50 ರ ಮೀಸಲಾತಿಯಡಿ ನಡೆಸುತ್ತಿರುವುದು ಪರಿಶಿಷ್ಟರಿಗೆ ಮಾಡುತ್ತಿರುವ ಅನ್ಯಾಯವಾಗಿದೆ. ಇದರಿಂದ ರಾಜ್ಯ ವ್ಯಾಪಿ 4 ಸಾವಿರದಷ್ಟು ಪರಿಶಿಷ್ಟರು ಅನ್ಯಾಯಕ್ಕೆ ಒಳಗಾಗಲಿದ್ದಾರೆ. ಒಳ ಮೀಸಲಾತಿಯ ವರ್ಗೀಕರಣಕ್ಕಾಗಿ ನ್ಯಾ.ನಾಗಮೋಹನದಾಸ್ ಆಯೋಗ ರಚನೆಯ ಸಂದರ್ಭ ಮತ್ತು ಸರ್ಕಾರ ಒಳ ಮೀಸಲಾತಿಯ ಮಸೂದೆ ಮಂಡಿಸಿ ರಾಜ್ಯಪಾಲರ ಅನುಮೋದನೆ ಪಡೆಯುವ ಹಂತದಲ್ಲಿ ಶೇ.56 ಮೀಸಲಾತಿ ಇತ್ತು. ಇದೀಗ ಏಕಾಏಕಿ ಈ ಮೀಸಲಾತಿಯನ್ನು ಶೇ.50ಕ್ಕೆ ಇಳಿಸುವಾಗ ಪರಿಶಿಷ್ಟ ವರ್ಗದವರನ್ನು ಕತ್ತಲಲ್ಲಿ ಇರಿಸಿರುವುದಾಗಿ ಆರೋಪಿಸಿದರು.
ರಾಜ್ಯ ಸರಕಾರ ಪ್ರಸ್ತುತ ಪೌರಕಾರ್ಮಿಕರು, ಅಂಗನವಾಡಿ ಕಾರ್ಯಕರ್ತರು ಸೇರಿದಂತೆ ವಿವಿಧ ಇಲಾಖೆಗಳ ಉದ್ಯೋಗಿಗಳಿಗೆ ಮಾಸಿಕ ವೇತನ ಕೊಡಲು ಪರದಾಡುವ ಮೂಲಕ ಆರ್ಥಿಕವಾಗಿ ದಿವಾಳಿಯಾಗಿದೆ. ತನ್ನ ಈ ಎಡವಟ್ಟುಗಳನ್ನು ಮುಚ್ಚಿಕೊಳ್ಳಲು ಮೀಸಲಾತಿಯ ಗೊಂದಲವನ್ನು ಸೃಷ್ಟಿಸಿದೆ ಎಂದು ಟೀಕಿಸಿದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷರು ಹಾಗೂ ದಿಶಾ ಸಮಿತಿ ಸದಸ್ಯ ಆರ್.ಕೆ.ಚಂದ್ರ ಮಾತನಾಡಿ, ಸುಳ್ಳು ಭರವಸೆಗಳ ಮೂಲಕ ಅಧಿಕಾರಕ್ಕೆ ಬಂದವರ ನಿರ್ಲಕ್ಷ್ಯತೆಯಿಂದಾಗಿ ಇಂದಿ
ಸುದ್ದಿಗೊಷ್ಠಿಯಲ್ಲಿ ಬಿಜೆಪಿ ಎಸ್‌ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪಿ.ಕೆ.ಚಂದ್ರು, ಮಡಿಕೇರಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಈರಾ ಸುಬ್ಬಯ್ಯ ಹಾಗೂ ಎಸ್‌ಟಿ ಮೋರ್ಚಾದ ವಿರಾಜಪೇಟೆ ಮಂಡಲದ ಅಧ್ಯಕ್ಷ ಪಿ.ಎ.ಮುತ್ತುರಾಜು ಉಪಸ್ಥಿತರಿದ್ದರು.







