
ಮಡಿಕೇರಿ ಮಾ.9 NEWS DESK : ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಕೊಡವ ಕೂಟಾಳಿಯಡ ಕೂಟದ ವತಿಯಿಂದ ಸಾಧಕ ಕೊಡವ ಮಹಿಳೆಯರನ್ನು ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಾರಮಾಡ ಮಾಚಮ್ಮ, ಕಾಡ್ಯಮಾಡ ರೀಟಾ ಬೋಪಯ್ಯ, ಕರೋಟಿರ ಶಶಿ ಸುಬ್ರಮಣಿ, ಮಾಳೇಟಿರ ಸೀತಮ್ಮ ವಿವೇಕ್ ಅವರನ್ನು ಕೂಟದ ಪ್ರಮುಖರು ಹಾಗೂ ಪದಾಧಿಕಾರಿಗಳು ಅವರ ಮನೆಗೆ ತೆರಳಿ ಸನ್ಮಾನಿಸಿ, ಗೌರವಿಸಿರು. ಈ ಸಂದರ್ಭ ಕೂಟದ ಅಧ್ಯಕ್ಷರಾದ ಚೊಟ್ಟಂಡ ಪ್ರಭು ಸೋಮಯ್ಯ, ಕಾರ್ಯದರ್ಶಿ ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ ಹಾಗೂ ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಜರಿದ್ದರು.









