
ವಿರಾಜಪೇಟೆ ಮಾ.9 NEWS DESK : ವಿರಾಜಪೇಟೆ ಪುರಸಭೆಯಲ್ಲಿ ಮುಖ್ಯ ರಸ್ತೆಯ ಬದಿಗಳಲ್ಲಿರುವ ಕಟ್ಟಡದ ಮಾಲೀಕರಿಗೆ ಕಾನೂನು ರೀತಿಯ ಪರಿಹಾರಕ್ಕಾಗಿ ಮತ್ತು ಹಲವು ಮಂಡನೆಗಳ ಅಂಗೀಕಾರಕ್ಕೆ ಒತ್ತಾಯಿಸಿ ವಿರಾಜಪೇಟೆ ಪುರಸಭೆ ಕಚೇರಿ ಮುಂದೆ ಮಾ.12 ರಂದು ನಾಗರಿಕ ಸಮಿತಿ ಮತ್ತು ಸಾರ್ವಜನಿಕ ಕಾರ್ಯಕರ್ತರ ಕೂಟದ ಸಂಯುಕ್ತ ಹೋರಾಟ ಸಮಿತಿ ವತಿಯಿಂದ ನಡೆಯುವ ಹೋರಾಟ, ಹಕ್ಕೋತ್ತಾಯಕ್ಕೆ ವಿರಾಜಪೇಟೆಯ ಸಿಪಿಐಎಂ ಪಕ್ಷದ ಘಟಕದಿಂದ ಸಂಪೂರ್ಣವಾಗಿ ಬೆಂಬಲಿಸುವುದಾಗಿ ಮತ್ತು ಹೋರಾಟದಲ್ಲಿ ಭಾಗವಹಿಸುವುದಾಗಿ ಸಿಪಿಐಎಂ ವಿರಾಜಪೇಟೆ ಘಟಕ ಕಾರ್ಯದರ್ಶಿ ಕೆ.ಎಸ್ ರಮೇಶ್ (ಶಾಜಿ)ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿದ ರಮೇಶ್ ಅವರು, ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ನಾಗರಿಕ ಸಮಿತಿ ಮತ್ತು ಇನ್ನಿತರ ಜನಪರ ಕಾಳಜಿ ಉಳ್ಳ ಸಂಘಟನೆಗಳು ನಡೆಸುವ ಹೋರಾಟಕ್ಕೆ ನಮ್ಮ ಸಂಘಟನೆ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ತಿಳಿಸಿದ್ದಾರೆ.








