
ಕುಶಾಲನಗರ NEWS DESK ಮಾ.17 : ಹೊಸ ವರ್ಷದ ಆರಂಭ ಮತ್ತು ಸಮೃದ್ಧಿಯ ಸಂಕೇತವಾದ ಯುಗಾದಿ ಹಬ್ಬದ ಪ್ರಯುಕ್ತ ಕುಶಾಲನಗರದ ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ತನ್ನ ಗ್ರಾಹಕರಿಗಾಗಿ ವಿಶೇಷ ಕೊಡುಗೆಗಳನ್ನು ಪ್ರಕಟಿಸಿದೆ. ಹಳದಿ ಟ್ಯಾಗ್ ಹೊಂದಿರುವ ವಿಶೇಷ ಆಭರಣಗಳ ಮೇಕಿಂಗ್ ಶುಲ್ಕಗಳ ಮೇಲೆ ಶೇ.50 ರವರೆಗೆ ರಿಯಾಯಿತಿಯೊಂದಿಗೆ ಖರೀದಿ ಮಾಡುವ ಅವಕಾಶವನ್ನು ಪಡೆಯಬಹುದು. ಕುಶಾಲನಗರ, ಪುತ್ತೂರು, ಸುಳ್ಯ, ಹಾಸನ ಹಾಗೂ ಮೂಡಬಿದ್ರೆಯ ಎಲ್ಲಾ ಮಳಿಗೆಗಳಲ್ಲಿ ಈ ಆಫರ್ ಲಭ್ಯವಿದ್ದು, ಗ್ರಾಹಕರು ಹಬ್ಬದ ಸಂಭ್ರಮವನ್ನು ಹೊಸ ಆಭರಣಗಳೊಂದಿಗೆ ಆಚರಿಸಲು ಉತ್ತಮ ಅವಕಾಶ ಕಲ್ಪಿಸಲಾಗಿದೆ. ಈ ಕೊಡುಗೆ ಮಾರ್ಚ್ 18ರಿಂದ 23ರವರೆಗೆ ಮಾತ್ರ ಲಭ್ಯವಿರುತ್ತದೆ. ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಚಿನ್ನ, ವಜ್ರ ಮತ್ತು ಬೆಳ್ಳಿಯ ಆಭರಣಗಳ ಮೇಲೆ ಆಕರ್ಷಕ ರಿಯಾಯಿತಿ ನೀಡಲಾಗುತ್ತಿದೆ. ಯುಗಾದಿ ಹಬ್ಬಕ್ಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ “ಪ್ರಾಚಿ ಇಲೈಟ್”, ‘ಟೆಂಪಲ್ ಜ್ಯುವೆಲ್ಲರಿ’, ಆ್ಯಂಟಿಕ್ ಮತ್ತು ಪರಂಪರೆಯ ವಿನ್ಯಾಸಗಳ ಜೊತೆಗೆ ಆಧುನಿಕ ವಿನ್ಯಾಸಗಳ ಆಭರಣಗಳು ಲಭ್ಯವಿದ್ದು ಮದುವೆ ಹಾಗೂ ಹಬ್ಬಗಳಿಗಾಗಿ ಆಭರಣಗಳ ವಿಶಾಲ ಸಂಗ್ರಹವಿದ್ದು ಎಲ್ಲಾ ವಯೋಮಿತಿಯ ಗ್ರಾಹಕರಿಗೆ ತಕ್ಕಂತೆ ಚಿನ್ನ ಹಾಗೂ ವಜ್ರಾಭರಣಗಳ ಆಯ್ಕೆ ಲಭ್ಯವಿದೆ. ಪುರುಷರಿಗಾಗಿ “ಪಾರ್ಥ”ಹಾಗೂ ಡೈಮಂಡ್ ನಲ್ಲಿ ಗ್ಲೋ ಹಾಗೂ ಗ್ಲೋಲೈಟ್ ” ಹಾಗೂ ಕರಿಮಣಿಗಳ ವಿಶೇಷ ಸಂಗ್ರಹವಿದೆ. ಹೆಚ್ಚುತ್ತಿರುವ ಚಿನ್ನದ ಬೆಲೆ ಹಿನ್ನೆಲೆಯಲ್ಲಿ ಹಳೆಯ ವಿನ್ಯಾಸದ ಆಭರಣಗಳನ್ನು ಹೊಸಟ್ರೆಂಡ್‌ಗಳ ಡಿಸೈನ್‌ಗೆ ಬದಲಾಯಿಸಲು ಇದು ಒಂದು ಉತ್ತಮ ಅವಕಾಶವಾಗಿದೆ. “ಗ್ರಾಹಕರ ನಂಬಿಕೆಯೇ ನಮ್ಮ ಸಂಸ್ಥೆಯ ಮೂಲಾಧಾರ. ಈ ಯುಗಾದಿ ಎಲ್ಲರ ಬಾಳಿನಲ್ಲಿ ಹೊಸ ಬೆಳಕು ತರಲಿ ಎಂಬ ಆಶಯದೊಂದಿಗೆ ನಾವು ಈ ವಿಶೇಷ ಆಫರ್‌ಗಳನ್ನು ಪರಿಚಯಿಸಿದ್ದೇವೆ” ಎಂದು ಸಂಸ್ಥೆಯ ಚೇರ್‌ಮ್ಯಾನ್ ಜಿ.ಎಲ್ ಬಲರಾಮ ಆಚಾರ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








