
ಮಡಿಕೇರಿ NEWS DESK ಮಾ.17 : ಮಡಿಕೇರಿಯ ಶ್ರೀ ರಾಮೋತ್ಸವ ಸಮಿತಿ ವತಿಯಿಂದ 132ನೇ ವರ್ಷದ ಪರಾಭವ ನಾಮ ಸಂವತ್ಸರದ ಶ್ರೀ ರಾಮೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಗಳು ಮಾ.19 ರಿಂದ 28 ರವರೆಗೆ ಪ್ರತಿದಿನ ಸಂಜೆ 6.30ರಿಂದ ರಾತ್ರಿ 8.30 ರವರೆಗೆ ಶ್ರೀ ಆಂಜನೇಯ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ. ಮಾ.19 ರಂದು ಪುಂಜಾಲಕಟ್ಟೆ ಕೃಷ್ಣ ಗೋಪಾಲ್ ಹಾಗೂ ಬಳಗದಿಂದ ಕರ್ನಾಟಕ ಶಾಸ್ತ್ರೀಯ ವೇಣುವಾದನ, ಮಾ.20 ರಂದು ಶ್ರೀ ಮಹಾಲಿಂಗೇಶ್ವರ ಕೃಪಾಪೋಷಿತ ನಾಟಕ ಮಂಡಳಿ, ಮೈಸೂರು ಇವರಿಂದ ಪೌರಾಣಿಕ ನಾಟಕಗಳ ರಂಗಗೀತೆ ಗಾಯನ, ಮಾ.21 ರಂದು ಮಡಿಕೇರಿಯ ವಿದುಷಿ ಮೇಘಾ ಭಟ್ ಅವರಿಂದ ಶಾಸ್ತ್ರೀಯ ಸಂಗೀತ, ಮಾ.22 ರಂದು ಮಡಿಕೇರಿಯ ನಾಟ್ಯನಿಕೇತನ ಸಂಗೀತ ನೃತ್ಯ ಶಾಲೆಯ ಪೂರ್ಣಿಮಾ ವಿನಯ್ ಶಿಷ್ಯಯರಿಂದ ನೃತ್ಯ ಸಂಗೀತ, ಮಾ.23 ರಂದು ಶ್ರೀ ರಾಮಾಂಜನೇಯ ಭಜನಾ ಮಂಡಳಿಯಿಂದ ಭಜನೆ, ಮಾ.24 ರಂದು ಮಡಿಕೇರಿಯ ಶ್ರುತಿ ಲಯ ತಂಡ, ವೀಣಾ ಹೊಳ್ಳರಿಂದ ಭಕ್ತಿ ಸಂಗೀತ, ಮಾ.25 ರಂದು ಬಾಳೆಲೆಯ ಕಾವೇರಿ ಕಲಾಸಮಿತಿ, ವತ್ಸಲಾ ನಾರಾಯಣ್ ಹಾಗೂ ಬಳಗದಿಂದ ಭಜನೆ, ಭಕ್ತಿ ಸಂಗೀತ, ಮಾ.26 ರಂದು ಪೊನ್ನಂಪೇಟೆಯ ನಾಟ್ಯ ಸಂಕಲ್ಪ ನೃತ್ಯ ಕಲಾ ಶಾಲೆಯ ಪ್ರೇಕ್ಷಾ ಭಟ್ ಹಾಗೂ ಶಿಷ್ಯರಿಂದ ಭರತನಾಟ್ಯ, ಮಾ.27 ರಂದು ಶ್ರೀ ರಾಮನವಮಿ ವಿಶೇಷ ಪೂಜೆ, ಬೆಳಿಗ್ಗೆ 11 ಗಂಟೆಯಿಂದ ಮಡಿಕೇರಿಯ ಶಿವಶಕ್ತಿ ವೃಂದದಿಂದ ಧಾರ್ಮಿಕ ಪಠಣ, ಸಂಜೆ ಮಂಗಳೂರಿನ ವಿದುಷಿ ಶ್ರೇಯಾ ಕೊಳತ್ತಾಯ, ಸುರತ್ಕಲ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಮಾ.28 ರಂದು ಹನುಮಂತೋತ್ಸವ ವಿಶೇಷ ಪೂಜೆ, ಬೆಳಿಗ್ಗೆ 11 ಗಂಟೆಯಿಂದ ಗಾನಾಮೃತ ಕಾರ್ಯಕ್ರಮ ಹಾಗೂ ಸಂಜೆ ಮಂಗಳೂರಿನ ಯಕ್ಷಮಂಜುಳಾ ಮಹಿಳಾ ಬಳಗ, ಪೂರ್ಣಿಮಾ ಪ್ರಭಾಕರ ರಾವ್ ಪೇಜಾವರ ಬಾಲ ಪ್ರತಿಭೆಗಳಿಂದ ತಾಳಮದ್ದಳೆ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನಡೆಯಲಿದೆ. ಹತ್ತು ದಿನಗಳ ಕಾಲ ನಡೆಯುವ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಮಿತಿ ಮನವಿ ಮಾಡಿದೆ.









