Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಏ.10 ರಿಂದ ಕೊಡವ ಲೆದರ್ ಬಾಲ್ ಕ್ರಿಕೆಟ್ ಲೀಗ್ ಮೂರನೇ ಆವೃತ್ತಿ ಆರಂಭ*
  • *ಸುಂಟಿಕೊಪ್ಪದಲ್ಲಿ ಶಾಂತಿ ಸಭೆ : ಸೌಹಾರ್ದತೆಯನ್ನು ಕಾಪಾಡಿಕೊಳ್ಳಲು ದಿನೇಶ್‍ಕುಮಾರ್ ಕರೆ*
  • *ಸೋಮವಾರಪೇಟೆ : ಕಾರ್ಮಿಕರಿಗೆ ಪೂರ್ವಭಾವಿ ಕಲಿಕಾ ತರಬೇತಿ ಕಾರ್ಯಾಗಾರ*
  • *ಯಡೂರಿನಲ್ಲಿ ವೈಸಿಸಿ ಕ್ರಿಕೆಟ್ ಕಪ್ ಪಂದ್ಯಾವಳಿ : ಗರಗಂದೂರಿನ ದಳಪತಿ ಕ್ರಿಕೆಟರ್ಸ್ ತಂಡ ಚಾಂಪಿಯನ್*
  • *ಕೂಡಿಗೆ ಪರೀಕ್ಷಾ ಕೇಂದ್ರದಲ್ಲಿ ಸುಗಮವಾಗಿ ನಡೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆ* 
  • *ಪ್ರಸಿದ್ಧ ಎಮ್ಮೆಮಾಡು ಉರೂಸ್ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳಿಗೆ ಆಹ್ವಾನ*
  • *ಕೊಡಗು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ನವೀಕರಣ ಕಟ್ಟಡ ಉದ್ಘಾಟನೆ : ಗ್ರಾಹಕರ ಹಿತರಕ್ಷಿಸುವಲ್ಲಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಹಲವು ಕ್ರಮ : ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡ*
  • *ಮಾ.21 ರಂದು ಸಿಎನ್‌ಸಿಯಿಂದ “ವಿಚಾರ ಸಂಕಿರಣ” : ಡಾ.ಎಲ್.ಹನುಮಂತಯ್ಯ, ಕೆ.ಪಿ.ಬಾಲಸುಬ್ರಹ್ಮಣ್ಯ, ಎಂ.ಟಿ.ನಾಣಯ್ಯ, ರೇವತಿ ಪೂವಯ್ಯರಿಂದ ವಿಚಾರ ಮಂಡನೆ*
  • *ಜಮೀನು ತೆರವು ಕಾರ್ಯಾಚರಣೆ : ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಮಸಗೋಡು ಗ್ರಾಮಸ್ಥರ ಅಸಮಾಧಾನ*
  • *ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇಂದಿನಿಂದ ಶುರು: 8.65 ಲಕ್ಷ ವಿದ್ಯಾರ್ಥಿಗಳಿಗೆ ಅಗ್ನಿಪರೀಕ್ಷೆ; ಪರೀಕ್ಷಾ ಕೇಂದ್ರಗಳ ಸುತ್ತ 144 ನಿಷೇಧಾಜ್ಞೆ ಜಾರಿ!*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕೊಡಗು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ನವೀಕರಣ ಕಟ್ಟಡ ಉದ್ಘಾಟನೆ : ಗ್ರಾಹಕರ ಹಿತರಕ್ಷಿಸುವಲ್ಲಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಹಲವು ಕ್ರಮ : ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಕೊಡಗು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ನವೀಕರಣ ಕಟ್ಟಡ ಉದ್ಘಾಟನೆ : ಗ್ರಾಹಕರ ಹಿತರಕ್ಷಿಸುವಲ್ಲಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಹಲವು ಕ್ರಮ : ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡ*

ಮಾರ್ಚ್ 18, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಮಾ.18 NEWS DESK : ಗ್ರಾಹಕರು ಮೋಸ, ವಂಚನೆಗೆ ಒಳಗಾಗುವುದು ತಪ್ಪಿಸುವಲ್ಲಿ ರಾಜ್ಯಾದ್ಯಂತ ಗ್ರಾಹಕರ ಕಾಯ್ದೆಗಳ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡ ಅವರು ತಿಳಿಸಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಮತ್ತು ಜಿಲ್ಲಾ ನ್ಯಾಯವಾದಿಗಳ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಕೊಡಗು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ನವೀಕರಣ ಕಟ್ಟಡವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಗ್ರಾಹಕರಾಗಿದ್ದು, ವಂಚನೆಗೆ ಅಥವಾ ಮೋಸಕ್ಕೆ ತುತ್ತಾದರೆ, ಪರಿಹಾರ ಒದಗಿಸುವಲ್ಲಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಕ್ರಮವಹಿಸಲಿದೆ ಎಂದು ಗ್ರಾಹಕರ ವ್ಯಾಜ್ಯಗಳ ಪರಿಹಾರ ರಾಜ್ಯ ಆಯೋಗದ ಅಧ್ಯಕ್ಷರು ಹೇಳಿದರು.
ಗ್ರಾಹಕರಿಗೆ ಸರಿಯಾದ ಸೇವೆ ಒದಗಿಸಬೇಕು ಎಂಬುದು ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಉದ್ದೇಶವಾಗಿದೆ. ಆ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ಕಚೇರಿಗೆ ಬೇಕಾದ ಎಲ್ಲಾ ರೀತಿಯ ಮೂಲ ಸೌಲಭ್ಯವನ್ನು ಕಲ್ಪಿಸಲು ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಮುಂದಾಗಿದೆ ಎಂದು ಟಿ.ಜಿ.ಶಿವಶಂಕರೇಗೌಡ ಅವರು ವಿವರಿಸಿದರು. ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಸಲ್ಲಿಕೆಯಾಗುವ ಪ್ರಕರಣಗಳನ್ನು 90 ದಿನಗಳಲ್ಲಿ ವಿಲೇವಾರಿ ಮಾಡಲು ಆಯೋಗ ಶ್ರಮಿಸುತ್ತಿದೆ. ಗ್ರಾಹಕರ ವ್ಯಾಜ್ಯಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ ತೀರ್ಪು ನೀಡಲು ಆಯೊಗ ಕ್ರಮವಹಿಸಿದೆ ಎಂದು ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರು ನುಡಿದರು. ಗ್ರಾಹಕರ ಹಿತರಕ್ಷಣಾ ಕಾಯ್ದೆ ಬಗ್ಗೆ ವಕೀಲರಿಗೆ ಮಾಹಿತಿ ನೀಡಿ ರಾಜ್ಯಾದ್ಯಾಂತ ಕಾಲೇಜುಗಳಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಗ್ರಾಹಕರ ಆಯೋಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಲಾಗುತ್ತಿದೆ. ಆ ನಿಟ್ಟಿನಲ್ಲಿ ಎಲ್ಲಾ ಹಂತದ ನ್ಯಾಯಾಲಯಗಳ ಹಾಗೂ ವಕೀಲರ ಸಂಘದ ಸಹಕಾರ ಅತ್ಯಗತ್ಯ ಎಂದು ಹೇಳಿದರು. ನ್ಯಾಯಾಂಗವು ಗ್ರಾಹಕರ ಆಯೋಗದ ಜೊತೆ ಕೈಜೋಡಿಸಿ ಕೆಲಸ ಮಾಡಬೇಕು ಎಂಬುದಾಗಿದೆ. ಆ ನಿಟ್ಟಿನಲ್ಲಿ ಗ್ರಾಹಕರ ಹಿತರಕ್ಷಣೆ ಕಾಪಾಡುವುದು ಎಲ್ಲರ ಆದ್ಯತೆಯಾಗಬೇಕು ಎಂದು ತಿಳಿಸಿದರು. ಗ್ರಾಹಕರ ಹಿತರಕ್ಷಣಾ ಸಮಿತಿ ಸಭೆಯನ್ನು ಮೂರು ತಿಂಗಳಿಗೊಮ್ಮೆ ನಡೆಸಿ ಗ್ರಾಹಕರ ಹಕ್ಕುಗಳ ಕಾಯ್ದೆಯನ್ನು ಸಂರಕ್ಷಿಸುವಲ್ಲಿ ಮುಂದಾಗಬೇಕು ಎಂದು ಸಲಹೆ ಮಾಡಿದರು. ಗ್ರಾಹಕರಿಗೆ ಮಧ್ಯಸ್ಥಿಕೆ ಮೂಲಕ ಪರಿಹಾರ ಕಂಡುಕೊಳ್ಳುವುದು, ಹಾಗೆಯೇ ಗ್ರಾಹಕರ ಹಿತರಕ್ಷಣೆ ಮತ್ತು ಚಿಂತನೆಯನ್ನು ಅರ್ಥ ಮಾಡಿಕೊಂಡು ಆಯೋಗ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು. ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ 18 ಕೋಟಿ ಇದ್ದು, ಇದರಲ್ಲಿ 5 ಕೋಟಿ ರೂ.ವನ್ನು ವಿವಿಧ ಅಭಿವೃದ್ಧಿ ಕಾಮಗಾರಿ ಸೇರಿದಂತೆ ಜಾಗೃತಿ ಅಭಿಯಾನಕ್ಕೆ ಬಳಸಿಕೊಳ್ಳಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು. ರಸ್ತೆ ಅಪಘಾತಗಳು, ಆಸ್ಪತ್ರೆಗಳು, ವ್ಯಾಪಾರ-ವಹಿವಾಟು ಮತ್ತಿತರ ಕಡೆಗಳಲ್ಲಿ ಗ್ರಾಹಕರಿಗೆ ಆಗುವ ಮೋಸ, ವಂಚನೆ ತಪ್ಪಿಸುವಲ್ಲಿ ತಾವು ನೀಡಿರುವ ತೀರ್ಪಿನ ವಿವಿಧ ಪ್ರಕರಣ ಸಂಬಂಧ ಸ್ವಾರಸ್ಯಕರವಾಗಿ ಶಿವಶಂಕರೇಗೌಡ ಅವರು ವಿವರಿಸಿದರು. ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಕೊಡಗು ಜಿಲ್ಲೆಯ ನ್ಯಾಯಾಧೀಶರು, ನ್ಯಾಯವಾದಿಗಳು ಸೇರಿದಂತೆ ಹಲವರು ಶ್ರಮಿಸಿದ್ದಾರೆ ಎಂದರು. ಗ್ರಾಹಕರ ಪರಿಹಾರ ವೇದಿಕೆಯ ಸದಸ್ಯರಾದ ಗೌರಮ್ಮಣಿ ಅವರು ಮಾತನಾಡಿ ಗ್ರಾಹಕರ ಆಯೋಗವು ಗ್ರಾಹಕರ ಹಿತರಕ್ಷಣೆಗಾಗಿ ಕೆಲಸ ಮಾಡುತ್ತಿದ್ದು, ಗ್ರಾಹಕರ ವಿಶ್ವಾಸ ಗಳಿಸುವಲ್ಲಿ ಶ್ರಮಿಸುತ್ತಿದೆ. ಗ್ರಾಹಕರಿಗೆ ನ್ಯಾಯ ಒದಗಿಸುವಲ್ಲಿ ಮುಂದಾಗಲಾಗಿದೆ ಎಂದರು. ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರಾದ ಹೊಸಮನಿ ಪುಂಡಲಿಕ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಸಿ.ಟಿ.ಜೋಸೆಫ್, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಡಾ.ಸಿ.ರೇಣುಕಾಂಬ ಅವರು ಮಾತನಾಡಿದರು. ಆಹಾರ ಇಲಾಖೆ ಉಪ ನಿರ್ದೇಶಕರಾದ ಎಂ.ಭೀಮರಾಯ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರರಾದ ಕೆ.ಟಿ.ಪ್ರಭು, ಕುಶಾಲನಗರ ವಕೀಲರ ಸಂಘದ ಅಧ್ಯಕ್ಷರಾದ ನಾಗೇಂದ್ರ ಬಾಬು(ಕುಶಾಲನಗರ), ನ್ಯಾಯಾಧೀಶರು, ನ್ಯಾಯಾವಾದಿಗಳು ಇತರರು ಇದ್ದರು. ಮಹಾಲಿಂಗಸ್ವಾಮಿ ಪ್ರಾರ್ಥಿಸಿದರು, ಡಾ.ಸಿ.ರೇಣುಕಾಂಬ ಸ್ವಾಗತಿಸಿದರು, ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕರಾದ ಬಿ.ಎಸ್.ಜಯಪ್ಪ ನಿರೂಪಿಸಿ, ವಂದಿಸಿದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಏ.10 ರಿಂದ ಕೊಡವ ಲೆದರ್ ಬಾಲ್ ಕ್ರಿಕೆಟ್ ಲೀಗ್ ಮೂರನೇ ಆವೃತ್ತಿ ಆರಂಭ*

ಮಾರ್ಚ್ 18, 2026

*ಸುಂಟಿಕೊಪ್ಪದಲ್ಲಿ ಶಾಂತಿ ಸಭೆ : ಸೌಹಾರ್ದತೆಯನ್ನು ಕಾಪಾಡಿಕೊಳ್ಳಲು ದಿನೇಶ್‍ಕುಮಾರ್ ಕರೆ*

ಮಾರ್ಚ್ 18, 2026

*ಸೋಮವಾರಪೇಟೆ : ಕಾರ್ಮಿಕರಿಗೆ ಪೂರ್ವಭಾವಿ ಕಲಿಕಾ ತರಬೇತಿ ಕಾರ್ಯಾಗಾರ*

ಮಾರ್ಚ್ 18, 2026

*ಸುಂಟಿಕೊಪ್ಪದಲ್ಲಿ ಶಾಂತಿ ಸಭೆ : ಸೌಹಾರ್ದತೆಯನ್ನು ಕಾಪಾಡಿಕೊಳ್ಳಲು ದಿನೇಶ್‍ಕುಮಾರ್ ಕರೆ*

ಮಾರ್ಚ್ 18, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಸುಂಟಿಕೊಪ್ಪ ಮಾ.18 NEWS DESK : ಹಬ್ಬದ ದಿನದಂದು ಶಾಂತಿ, ಸಾಮರಸ್ಯ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳಲು ಕುಶಾಲನಗರ ವೃತ್ತ ನಿರೀಕ್ಷಕರಾದ…

*ಸೋಮವಾರಪೇಟೆ : ಕಾರ್ಮಿಕರಿಗೆ ಪೂರ್ವಭಾವಿ ಕಲಿಕಾ ತರಬೇತಿ ಕಾರ್ಯಾಗಾರ*

ಮಾರ್ಚ್ 18, 2026

*ಯಡೂರಿನಲ್ಲಿ ವೈಸಿಸಿ ಕ್ರಿಕೆಟ್ ಕಪ್ ಪಂದ್ಯಾವಳಿ : ಗರಗಂದೂರಿನ ದಳಪತಿ ಕ್ರಿಕೆಟರ್ಸ್ ತಂಡ ಚಾಂಪಿಯನ್*

ಮಾರ್ಚ್ 18, 2026

*ಕೂಡಿಗೆ ಪರೀಕ್ಷಾ ಕೇಂದ್ರದಲ್ಲಿ ಸುಗಮವಾಗಿ ನಡೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆ* 

ಮಾರ್ಚ್ 18, 2026

*ಪ್ರಸಿದ್ಧ ಎಮ್ಮೆಮಾಡು ಉರೂಸ್ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳಿಗೆ ಆಹ್ವಾನ*

ಮಾರ್ಚ್ 18, 2026

*ಕೊಡಗು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ನವೀಕರಣ ಕಟ್ಟಡ ಉದ್ಘಾಟನೆ : ಗ್ರಾಹಕರ ಹಿತರಕ್ಷಿಸುವಲ್ಲಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಹಲವು ಕ್ರಮ : ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡ*

ಮಾರ್ಚ್ 18, 2026

*ಮಾ.21 ರಂದು ಸಿಎನ್‌ಸಿಯಿಂದ “ವಿಚಾರ ಸಂಕಿರಣ” : ಡಾ.ಎಲ್.ಹನುಮಂತಯ್ಯ, ಕೆ.ಪಿ.ಬಾಲಸುಬ್ರಹ್ಮಣ್ಯ, ಎಂ.ಟಿ.ನಾಣಯ್ಯ, ರೇವತಿ ಪೂವಯ್ಯರಿಂದ ವಿಚಾರ ಮಂಡನೆ*

ಮಾರ್ಚ್ 18, 2026

*ಜಮೀನು ತೆರವು ಕಾರ್ಯಾಚರಣೆ : ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಮಸಗೋಡು ಗ್ರಾಮಸ್ಥರ ಅಸಮಾಧಾನ*

ಮಾರ್ಚ್ 18, 2026

*ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇಂದಿನಿಂದ ಶುರು: 8.65 ಲಕ್ಷ ವಿದ್ಯಾರ್ಥಿಗಳಿಗೆ ಅಗ್ನಿಪರೀಕ್ಷೆ; ಪರೀಕ್ಷಾ ಕೇಂದ್ರಗಳ ಸುತ್ತ 144 ನಿಷೇಧಾಜ್ಞೆ ಜಾರಿ!*

ಮಾರ್ಚ್ 18, 2026

*ಕೊಡಗಿನಲ್ಲಿ ವನ್ಯಜೀವಿ ಉಪಟಳ : ಅರಣ್ಯ ಸಚಿವರಿಂದ ಮಹತ್ವದ ಸಭೆ : ಶಾಸಕದ್ವಯರು ಭಾಗಿ*

ಮಾರ್ಚ್ 18, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.