
ಮಡಿಕೇರಿ ಮಾ.18 NEWS DESK : ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಉರೂಸ್ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲಾಯಿತು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರ ನೇತೃತ್ವದಲ್ಲಿ ತಾಜಲ್ ಇಸ್ಲಾಂ ಮುಸ್ಲಿಂ ಜಮಾತ್ ಅಧ್ಯಕ್ಷರಾದ ಕೆ.ಎಂ.ಹುಸೇನ್ ಶಾಫಿ, ಮಾಜಿ ಅಧ್ಯಕ್ಷರಾದ ಅಬೂಬಕರ್ ಸಕಾಪಿ, ಆಡಳಿತ ಮಂಡಳಿ ಸದಸ್ಯರಾದ ಮೆನ್ ಮಹಮ್ಮದ್, ಎಮ್.ಎ.ಹನೀಫ್ ಹಾಗೂ ಧರ್ಮ ಗುರುಗಳು ಆಹ್ವಾನ ಪತ್ರಿಕೆಯನ್ನು ನೀಡಿ ಉರುಸ್ ಸಮಾರಂಭಕ್ಕೆ ಆಹ್ವಾನಿಸಿದರು.
ಎಮ್ಮೆಮಾಡು ಉರುಸ್ ಪ್ರಾಮುಖ್ಯತೆ ಬಗ್ಗೆ ಮುಖ್ಯಮಂತ್ರಿಗಳಿಗೆ ವಿವರಿಸಿದ ಶಾಸಕರು, ಸುಮಾರು 400 ವರ್ಷಕ್ಕೂ ಅಧಿಕ ಇತಿಹಾಸ ಇರುವ ಈ ಉತ್ಸವಕ್ಕೆ, ಕರ್ನಾಟಕ ಮಾತ್ರವಲ್ಲದೇ ನೆರೆಯ ರಾಜ್ಯಗಳಿಂದ ಎಲ್ಲಾ ಧರ್ಮದ ಭಕ್ತರು ಆಗಮಿಸಿ ಪ್ರಾರ್ಥಿಸುತ್ತಾರೆ ಎಂದು ವಿವರಿಸಿದರು. ಇದೇ ಸಂದರ್ಭ ಸಭಾಪತಿಗಳಾದ ಯು.ಟಿ ಖಾದರ್, ಅಲ್ಪಸಂಖ್ಯಾತ ಸಚಿವರಾದ ಜಮೀರ್ ಅಹ್ಮದ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಝೀರ್ ಅಹಮದ್, ಶಾಂತಿನಗರ ಶಾಸಕರಾದ ಎನ್.ಎ ಹ್ಯಾರೀಸ್ ಮತ್ತು ಮಡಿಕೇರಿ ಶಾಸಕರಾದ ಡಾ. ಮಂಥರ್ ಗೌಡ ಅವರನ್ನು ಆಹ್ವಾನಿಸಲಾಯಿತು.









