
ಗೋಣಿಕೊಪ್ಪ ಮಾ.23 NEWS DESK : ಗೋಣಿಕೊಪ್ಪಲು ಶ್ರೀ ಕಿಲೇರಿ ಮುತ್ತಪ್ಪ ದೇವಸ್ಥಾನ ಹರಿಶ್ಚಂದ್ರಪುರದಲ್ಲಿ ಶ್ರೀ ಮುತ್ತಪ್ಪದೇವರ ವಾರ್ಷಿಕೋತ್ಸವ ಮಾ.29, 30 ಮತ್ತು 31 ರಂದು ಮೂರು ದಿನಗಳ ಕಾಲ ನಡೆಯಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ. 29 ರಂದು ಬೆಳಿಗ್ಗೆ 6ಕ್ಕೆ ಗಣಪತಿ ಹೋಮ, 8.30ಕ್ಕೆ ಪ್ರತಿಷ್ಠಾ ದಿನಾಚರಣೆ ಪೂಜೆ, ಸಂಜೆ 6 ಗಂಟೆಗೆ ಶ್ರೀ ಮುತ್ತಪ್ಪನ್‍ದೇವರ ವೆಳ್ಳಾಟಂ, ರಾತ್ರಿ 9 ಗಂಟೆಗೆ ಸಾಮೂಹಿಕ ಅನ್ನ ಸಂತರ್ಪಣೆನಡೆಯಲಿದೆ. ಮಾ. 30 ರಂದು ಸಂಜೆ 6.30 ಗಂಟೆಗೆ ಶ್ರೀ ಮುತ್ತಪ್ಪ ವೆಳ್ಳಾಟಂ, 7.30 ಗಂಟೆಗೆ ಕಾರಣೋರ್ ವೆಳ್ಳಾಟಂ, ರಾತ್ರಿ 8.30 ಗಂಟೆಗೆ ಗುಳಿಗನ್ ವೆಳ್ಳಾಟಂ, 9 ಗಂಟೆಗೆ ಸಾಮೂಹಿಕ ಅನ್ನಸಂತರ್ಪಣೆ, 9 ಗಂಟೆಗೆ ಕಂಡ ಕರ್ಣನ್ ವೆಳ್ಳಾಟಂ, 10.30 ಗಂಟೆಗೆ ವಸೂರಿಮಲಾ ವೆಳ್ಳಾಟಂ, 11.30 ಗಂಟೆಗೆ ವಿಷ್ಣುಮೂರ್ತಿ ವೆಳ್ಳಾಟಂ, 12.30 ಗಂಟೆಗೆ ಪೋದಿ ವೆಳ್ಳಾಟಂ, ಮಧ್ಯಾಹ್ನ 1 ಗಂಟೆಗೆ ಕಳಸ ಸ್ವಾಗತ ನಡೆಯಲಿದೆ. ಮಾ.31 ರಂದು ಮಂಗಳವಾರ ಪ್ರಾತಃಕಾಲ 2 ಗಂಟೆಗೆ ಗುಳಿಗನ್ ತೆರೆ, 4 ಗಂಟೆಗೆ ಕಂಡ ಕರ್ಣನ್‍ತೆರೆ, 5 ಗಂಟೆಗೆ ತಿರುವಪ್ಪನ್‍ತೆರೆ, 6 ಗಂಟೆಗೆ ಪೋದಿ ತೆರೆ, 6.30 ಗಂಟೆಗೆ ಕಾರಣೋರ್‍ತೆರೆ, 7 ಗಂಟೆಗೆ ವಸೂರಿಮಲ ತೆರೆ ಹಾಗೂ 7.30 ಗಂಟೆಗೆ ವಿಷ್ಣುಮೂರ್ತಿತೆರೆ ನಡೆಯಲಿದೆ ಎಂದು ಆಡಳಿತ ಮಂಡಳಿ ಮಾಹಿತಿ ನೀಡಿದ್ದಾರೆ.









