
ಸಿದ್ದಗಂಗಾ ಮಾ.24 NEWS DESK : ನೀರು ಅಮೂಲ್ಯ ವಸ್ತು ಅದನ್ನು ಅವಶ್ಯಕತೆಗೆ ತಕ್ಕಂತೆ ಮಿತವಾಗಿ ಬಳಸಬೇಕು. ಪೋಲು ಮಾಡಬೇಡಿ ಎಂದು ತುಮಕೂರು ಸಿದ್ದಗಂಗಾ ಮಠದ ಶ್ರೀ ಶ್ರೀ ಸಿದ್ದಲಿಂಗ ಮಹಾ ಸ್ವಾಮೀಜಿ ಹೇಳಿದರು. ಮಠದ ಆವರಣದಲ್ಲಿ ಏರ್ಪಡಿಸಲಾಗಿದ್ದ ವಿದ್ಯಾರ್ಥಿಗಳ ಸಾಮೂಹಿಕ ಪ್ರಾರ್ಥನ ಹಾಗೂ ವಿಶ್ವ ಜಲದಿನದ ಮಹತ್ವ ಕುರಿತು ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು. ಜಗತ್ತಿನಾದ್ಯಂತ ಇಂದು ನೀರು ಎಲ್ಲಾರಿಗೂ,ಎಲ್ಲಾದಕ್ಕೂ ಬೇಕಾಗಿದೆ ಆದರೆ ಅದನ್ನು ಬಳಸುತಿರುವ ರೀತಿ ಸರಿಯಲ್ಲವೆಂದರು. ನೀರಿಲ್ಲದೆ ಬದುಕು ಸಾದ್ಯವೇ ಇಲ್ಲಾ ಎಂಬುದು ಸತ್ಯ, ವಿದ್ಯಾರ್ಥಿಗಳು ಈ ಬಗ್ಗೆ ಜಾಗೃತರಾಗಬೇಕು ನಿಮ್ಮಲ್ಲಿ ಅರಿವು ಮೂಡಿದರೆ,ಇತರರಿಗೂ ಜಾಗೃತಿ ಮೂಡಿಸಬಹುದೆಂದು. ನೀವುಗಳು ನೀರನ್ನು ಮಿತವಾಗಿ ಬಳಸುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು. ಮುಂದಿನ ತಲೆಮಾರಿಗೂ ಉಳಿಸಿ ಅವರಿಗೂ ದೊರಕುವಂತೆ ಮಾಡಬೇಕು ಇದು ನಾವು ಮಿತವಾಗಿ ಬಳಸುವುದರಿಂದ ಮಾತ್ರ ಸಾಧ್ಯವಾಗುತ್ತದೆ ಎಂದರು. ನಂತರ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಮುಂದಿನ ಪರೀಕ್ಷೆಯ ಬಗ್ಗೆ ಮಾಹಿತಿ ಪಡೆದು ಅಗತ್ಯ ಮಾರ್ಗದರ್ಶನ ಮಾಡಿದರು. ಶ್ರೀ ಮಠದಲ್ಲಿ ವಿದ್ಯಾಭ್ಯಾಸ ಮಾಡುತಿರುವ ಸಾವಿರಾರು ವಿದ್ಯಾರ್ಥಿಗಳು ಪ್ರಾರ್ಥನೆಯಲ್ಲಿ ಶಿಸ್ತುಬದ್ಧವಾಗಿ ಭಾಗವಸಿದ್ದು ವಿಶೇಷವಾಗಿತ್ತು.










