ಮಡಿಕೇರಿಯ ಕೊಡಗು ವಿದ್ಯಾಲಯದಲ್ಲಿ ಏಪ್ರಿಲ್ 1 ರಿಂದ 22 ರವರೆಗೆ ವಾರ್ಷಿಕ ಬೇಸಿಗೆ ಶಿಬಿರ ‘ಸಮಾಗಮ 2026’ ಆಯೋಜಿತವಾಗಿದೆ.
ಮಡಿಕೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಕೊಡಗು ವಿದ್ಯಾಲಯದ ಬೇಸಿಗೆ ಶಿಬಿರದ ಸಂಯೋಜಕಿಯರಾದ ಬಿಂದು ಮತ್ತು ಅಂಜನಾ, ಈ ಶಿಬಿರವು ಮಕ್ಕಳಿಗೆ ಪಠ್ಯೇತರ ಜ್ಞಾನ, ಆನಂದ ಮತ್ತು ಅರ್ಥಪೂರ್ಣ ಕಲಿಕೆಯ ಅನುಭವವನ್ನು ಒದಗಿಸುವ ಉದ್ದೇಶದಿಂದ ವಿಶೇಷವಾಗಿ ರೂಪಿಸಲಾಗಿದೆ. ಈ ಶಿಬಿರದ ಮೂಲಕ ಮಕ್ಕಳು ತಮ್ಮಲ್ಲಿರುವ ಪ್ರತಿಭೆಗಳನ್ನು ಅನ್ವೇಷಿಸಿ, ಆತ್ಮವಿಶ್ವಾಸವನ್ನು ವೃದ್ಧಿಸಿಕೊಳ್ಳುವ ಜೊತೆಗೆ ಸೃಜನಶೀಲತೆ, ಶಿಸ್ತನ್ನು ಅಭಿವೃದ್ಧಿಪಡಿಸಿಕೊಳ್ಳಲಿದ್ದಾರೆ. ದೈಹಿಕ ಕ್ಷಮತೆ, ಏಕಾಗ್ರತೆ ಮತ್ತು ಸಾಮಾಜಿಕ ಕೌಶಲ್ಯಗಳ ಬೆಳವಣಿಗೆಗೂ ಇದು ನೆರವಾಗಲಿದೆ ಎಂದು ತಿಳಿಸಿದರು..
ಮಕ್ಕಳ ಬೇಸಿಗೆ ರಜೆಯನ್ನು ಸದುಪಯೋಗಪಡಿಸಿಕೊಳ್ಳುವ ಉದ್ದೇಶದಿಂದ, ಪ್ರತಿದಿನ ಬೆಳಗ್ಗೆ 6:30 ರಿಂದ ಸಂಜೆ 6:00 ರವರೆಗೆ ರಚನಾತ್ಮಕ ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ಸುಮಾರು 25 ವರ್ಷಗಳ ಪರಂಪರೆಯನ್ನು ಹೊಂದಿರುವ ಈ ಕ್ರೀಡಾ ಶಿಬಿರವು ಪ್ರತಿವರ್ಷ ಯಶಸ್ವಿಯಾಗಿ ನಡೆಯುತ್ತಿದ್ದು, 300ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ ಎಂದೂ ಉಪನ್ಯಾಸಕಿಯರು ಮಾಹಿತಿ ನೀಡಿದರು. .
ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಈ ಶಾಲೆಯು, ಸಿ. ವಿ. ಶಂಕರ್ ಅಕಾಡೆಮಿ ಸಹಯೋಗದಲ್ಲಿ ಹಾಕಿ, ಕ್ರಿಕೆಟ್, ಹ್ಯಾಂಡ್‌ಬಾಲ್ ಫುಟ್ಬಾಲ್, ಬಾಸ್ಕೆಟ್‌ಬಾಲ್, ಟೇಬಲ್ ಟೆನ್ನಿಸ್, ಅಥ್ಲೆಟಿಕ್ಸ್, ಚೆಸ್, ಕರಾಟೆ ಹಾಗೂ ಸ್ಕೆಟ್ಬೋರ್ಡಿಂಗ್ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಖ್ಯಾತ ತರಬೇತುದಾರರ ಮಾರ್ಗದರ್ಶನದಲ್ಲಿ ತರಬೇತಿಯನ್ನು ಒದಗಿಸಲಾಗುತ್ತದಎಂದು ತಿಳಿಸಿದ ಸುಮಿತ್ರಾ, . ಈ ವರ್ಷ ಪಿಕಲ್ ಬಾಲ್ ಎಂಬ ಜನಪ್ರಿಯ ಕ್ರೀಡೆಯನ್ನು ನೂತನವಾಗಿ ಕೊಡಗಿನಲ್ಲಿ ಮೊಟ್ಟ ಮೊದಲ ಬಾರಿಗೆ ಕೊಡಗು ವಿದ್ಯಾಲಯದಲ್ಲಿ ಪರಿಚಯಿಸಲಾಗುತ್ತಿದೆ ಎಂದು ಬಿಂದು ಮತ್ತು ಅಂಜನಾ. ತಿಳಿಸಿದರು.
ಈ ಶಿಬಿರವು ಏಪ್ರಿಲ್ 1 ರಿಂದ ಏಪ್ರಿಲ್ 22ರವರೆಗೆ ನಡೆಯಲಿದ್ದು, 8 ವರ್ಷ ಮೇಲ್ಪಟ್ಟ, ಎಲ್ಲಾ ಶಾಲೆಗಳ ಮಕ್ಕಳಿಗೂ ಮುಕ್ತವಾಗಿದೆ. ಎಂದು ಅವರು ಮಾಹಿತಿ ನೀಡಿದರು..
ಸುದ್ದಿಗೋಷ್ಟಿಯಲ್ಲಿ ಕೊಡಗು ವಿದ್ಯಾಲಯದ ಪ್ರಾಂಶುಪಾಲರಾದ ಕೆ.ಎಸ್. ಸುಮಿತ್ರಾ, ಆಡಳಿತಾಧಿಕಾರಿ ಪಿ.ರವಿ, ಉಪಸ್ಥಿತರಿದ್ದರು







