Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಮಂದಗತಿಯಲ್ಲಿ ಸಾಗುತ್ತಿರುವ ಅಮೃತ್ ಕಾಮಗಾರಿ : ಮಡಿಕೇರಿ ನಗರಸಭೆ ಸಾಮಾನ್ಯ ಸಭೆಯಲ್ಲಿ ತೀವ್ರ ಅಸಮಾಧಾನ*
  • *ಪೊಲೀಸ್ ವಸತಿ ಗೃಹ, ಸಮುದಾಯ ಭವನಗಳಿಗೆ ಕೊಡಗು ಎಸ್‌ಪಿ ಬಿಂದುಮಣಿ ಭೇಟಿ : ಪರಿಶೀಲನೆ*
  • *ಏ.1 ರಂದು ನಾಪೋಕ್ಲುವಿನಲ್ಲಿ ಹಿಂದೂ ಜನಜಾಗೃತಿ ಸಮಾವೇಶ*
  • *ಮಾ.31ರಂದು ಜನರಲ್ ಕೆ.ಎಸ್.ತಿಮ್ಮಯ್ಯ ಅವರ 120ನೇ ಜನ್ಮ ದಿನಾಚರಣೆ*
  • *ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಬಿ.ಕೆ.ಪ್ರಶಾಂತ್ ಆಯ್ಕೆ*
  • *ಶ್ರೀ ತಿರುನೆಲ್ಲಿ ಪೆಮ್ಮಯ್ಯ ದೇವಾಲಯಕ್ಕೆ ಶಾಸಕ ಎ.ಎಸ್.ಪೊನ್ನಣ್ಣ ಭೇಟಿ : ವಿಶೇಷ ಪೂಜೆ ಸಲ್ಲಿಕೆ*
  • *ಸೋಮವಾರಪೇಟೆಯಲ್ಲಿ ಸಂಭ್ರಮದ ರಾಮೋತ್ಸವ*
  • *ಮೂರ್ನಾಡು : ಮಾ.29 ರಂದು ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ*
  • *ಗೋಣಿಕೊಪ್ಪ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸಮಿತಿಗಳ ರಚನೆ ಮತ್ತು ನಿರ್ವಹಣೆ ತರಬೇತಿ*
  • *ಕೂಡಿಗೆ : ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ವೃತ್ತಿ ಮೇಳ ಸಹಕಾರಿ : ಸಿಇಓ ಆನಂದ್ ಪ್ರಕಾಶ್ ಮೀನ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ವಿಶ್ವ ರಂಗಭೂಮಿ ದಿನಾಚರಣೆ : ರಂಗಭೂಮಿ ಕಲಾವಿದಗೆ ಪ್ರೋತ್ಸಾಹದ ಅಗತ್ಯವಿದೆ : ಕಲಿಯಂಡ ಸರಸ್ವತಿ ಅಭಿಮತ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ವಿಶ್ವ ರಂಗಭೂಮಿ ದಿನಾಚರಣೆ : ರಂಗಭೂಮಿ ಕಲಾವಿದಗೆ ಪ್ರೋತ್ಸಾಹದ ಅಗತ್ಯವಿದೆ : ಕಲಿಯಂಡ ಸರಸ್ವತಿ ಅಭಿಮತ*

ಮಾರ್ಚ್ 28, 20263 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಮಾ.28 NEWS DESK : ಅಲ್ಲಾರಂಡ ರಂಗಚಾವಡಿಯ ವತಿಯಿಂದ ಕೊಡಗು ಪತ್ರಿಕಾ ಭವನ ಟ್ರಸ್ಟ್ ಸಹಕಾರದೊಂದಿಗೆ ನಗರದ ಪತ್ರಿಕ ಭವನದ ಸಭಾಂಗಣದಲ್ಲಿ ಆಯೋಜಿತ ವಿಶ್ವ ರಂಗಭೂಮಿ ದಿನಾಚರಣೆ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಿವೃತ್ತ ಶಿಕ್ಷಕರು ಹಾಗೂ ರಂಗಭೂಮಿ ಕಲಾವಿದರಾದ ಕಲಿಯಂಡ ಸರಸ್ವತಿ ಅವರು, ಕೊಡಗಿನಲ್ಲಿ ಪ್ರತಿಭಾವಂತ ರಂಗ ಕಲಾವಿದರುಗಳಿದ್ದಾರೆ. ಇಂತಹವರನ್ನು ಗುರುತಿಸುವ, ಪ್ರೋತ್ಸಾಹಿಸುವ ಪ್ರಯತ್ನಗಳಾಗದಿರುವುದರಿಂದ ರಂಗ ಭೂಮಿ ಇಲ್ಲಿ ಬೆಳೆಯುತ್ತಿಲ್ಲವೆನ್ನುವ ಮನದಾಳದ ಮಾತುಗಳನ್ನಾಡುತ್ತಲೆ, ಶಿಕ್ಷಕರಾದವರು ತಮ್ಮ ವೃತ್ತಿಯನ್ನು ಮತ್ತು ಮಕ್ಕಳನ್ನು ಪ್ರೀತಿಯಿಂದ ಕಣಬೇಕು. ನಮ್ಮ ಜ್ಞಾನವನ್ನು ಅತ್ಯಂತ ಪರಿಣಾಮಕಾರಿಯಾಗಿ ನಾಟಕಗಳ ಮೂಲಕ ಅಭಿವ್ಯಕ್ತ್ತಪಡಿಸಿದಾಗ, ವಿಚಾರಗಳು ಮಕ್ಕಳ ಮೇಲೆ ಪ್ರಭಾವ ಬೀರಬಲ್ಲುತ್ತದೆ ಮತ್ತು ಅವು ಶಾಶ್ವತವಾಗಿ ಮನಸ್ಸಿನಲ್ಲಿ ಉಳಿಯುತ್ತದೆ. ಪ್ರಸ್ತುತ ಶಿಕ್ಷಣ ವ್ಯವಸ್ಥೆ ಪಾಠ ಪ್ರವಚನ- ಅಂಕಗಳ ಒತ್ತಡಗಳ ನಡುವೆ ಸಿಲುಕಿದ್ದು, ಇತರೆ ಅಮೂಲ್ಯ ವಿಚಾರಗಳು ಮರೆಯಾಗುತ್ತಿದೆಯೆಂದು ವಿಷಾದಿಸಿದರು. ಈ ಸಂದರ್ಭ ಅವರು, ತಾವು ಎಂಬತ್ತರ ದಶಕದಲ್ಲಿ ಆಡಿದ ನಾಟಕಗಳು, ಶಿಕ್ಷಕಿಯಾಗಿ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು, ನಾಟಕಗಳ ಮೂಲಕ ಪಾಠ ಪ್ರವಚನಗಳನ್ನು ಮಾಡುತ್ತಿದ್ದುದನ್ನು ತಿಳಿಸಿದರು. ಅತಿಥಿಗಳಾಗಿ ಪಾಲ್ಗೊಂಡಿದ್ದ ಹಿರಿಯ ರಂಗ ಕರ್ಮಿ ಭರಮಣ್ಣ ಬೆಟ್ಟಗೇರಿ ಅವರು, ಸುಶ್ರಾವ್ಯವಾಗಿ ಮೊಗಳ್ಳಿ ಗಣೇಶ್‍ರವರ ರಂಗಗೀತೆಯನ್ನು ಹಾಡಿ, ರಂಗ ಭೂಮಿ ಎಂದರೆ ಅದು ಕೇವಲ ನಟನೆಯಲ್ಲ. ಅದು ವ್ಯಕ್ತಿಯ ವ್ಯಕ್ತಿತ್ವವನ್ನು ವಿಕಸನ ಗೊಳಿಸುವ, ಕಾಣಲಾಗÀದ ಚಿಂತನೆಗಳನ್ನು ಕಾಣಿಸುವಂತೆ ಮಾಡುವ ಅತ್ಯಂತ ವಿಶಿಷ್ಟವಾದ ಮಾಧ್ಯಮ ಮಾತ್ರವಲ್ಲ, ಮಕ್ಕಳಿಗೆ ಸತ್ಯದ ಹಾದಿಯನ್ನು, ಚಿಂತನೆಗಳನ್ನು ನೀಡುವ ಕ್ಷೇತ್ರ ರಂಗ ಭೂಮಿ ಎಂದು ವಿಶ್ಲೇಷಿಸಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ನಿವೃತ್ತ ಪ್ರಾಂಶುಪಾಲರಾದ ಡಾ.ಜೆ.ಸೋಮಣ್ಣ ಅವರು ಮಾತನಾಡಿ, ಮಾನವೀಯ ಮೌಲ್ಯ, ಸಂಸ್ಕøತಿ, ಸಾಮಾಜಿಕ ಬದ್ಧತೆಯನ್ನು ಮೂಡಿಸುವ ಅತ್ಯಂತ ಪ್ರಭಾವಶಾಲಿಯಾದ ಮಾಧ್ಯಮ “ರಂಗ ಕ್ಷೇತ್ರ”ವಾಗಿದೆ. ಇಂತಹ ಮೌಲಿಕವಾದ ಕ್ಷೇತ್ರವನ್ನು ಅಹಪಾಸ್ಯಕ್ಕೀಡು ಮಾಡುತ್ತಿರುವ ನೋವನ್ನು ತೋಡಿಕೊಂಡ ಅವರು, ಸತ್ಯಹರಿಶ್ಚಂದ್ರ ನಾಟಕದ ಪ್ರಭಾವದಿಂದ ಮಹಾತ್ಮಾ ಗಾಂಧೀಜಿಯವರು ತಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ “ಸತ್ಯ” ಮತ್ತು “ಅಹಿಂಸೆ”ಯನ್ನು ಹೋರಾಟದ ಪ್ರಬಲ ಅಸ್ತ್ರವನ್ನಾಗಿಸಿಕೊಂಡಿದ್ದರು. ಪ್ರಸ್ತುತ ಮಹನೀಯರ ಇಂತಹ ನಡೆಗಳನ್ನೆ ವಿಡಂಬನಾತ್ಮಕವಾಗಿ ನೋಡುವ ಬಗ್ಗೆ ಬೇಸರ ವ್ಯಕ್ತಪಡಿಸಿ, ನಾಟಕಗಳು ಮನಸ್ಸಿನ ಪರಿವರ್ತನೆಯೊಂದಿಗೆ ಮಾನವೀಯತೆಯ ಸಮಾಜವನ್ನು ಕಟ್ಟಲು ಸಹಕಾರಿಯಾಗಿದೆ. ಚಿತ್ರರಂಗದಂದಿಗೆ ರಂಗ ಕಲೆಯು ಬೆಳವಣಿಗೆಯನ್ನು ಕಾಣುವುದು ಅತ್ಯವಶ್ಯವೆಂದು ತಿಳಿಸಿದರು. ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ರಂಗ ಶಿಕ್ಷಣ ಅತ್ಯವಶ್ಯವಾಗಿ ಬೇಕಾಗಿದೆಯೆಂದು ದೃಢವಾಗಿ ನುಡಿದ ಜೆ. ಸೋಮಣ್ಣ ಅವರು, ಶಿಕ್ಷಕರು ಭಾಷಾ ವಿಷಯಗಳನ್ನು ಹಾವ ಭಾವಗಳೊಂದಿಗೆ ಜೀವಂತಿಕೆ ತುಂಬಿ ಮಕ್ಕಳಿಗೆ ಉಣ ಬಡಿಸಬೇಕು. ಪ್ರಸ್ತುತ ಶಿಕ್ಷಕರ ಬೋಧನೆ ಶುಷ್ಕವಾಗುತ್ತಿದೆ. ಇಂತಹ ವಿಚಾರಗಳಿಂದ ಕನ್ನಡ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ, ಅವುಗಳೆಡೆಗಿನ ವಿಶ್ವಾಸ ಕಡಿಮೆಯಾಗುತ್ತಿದಯೆಂದು ಅಭಿಪ್ರಾಯಿಸಿ, ಶಿಕ್ಷಕಕರು ರಂಗ ಶಿಕ್ಷಣದೊಂದಿಗೆ ತರಗತಿಗಳಲ್ಲಿ ಜೀವಂತಿಕೆಯನ್ನು ತುಂಬಬೇಕೆಂದು ಕರೆ ನೀಡಿದರು. ರಂಗಕರ್ಮಿ ರಾಧ ಅವರು ಮಾತನಾಡಿ, ಕೊಡಗಿನ ಮಕ್ಕಳಿಗೆ ರಂಗ ಶಿಕ್ಷಣ ದೊರಕದ ಬಗ್ಗೆ ಅತೀವ ಬೇಸರ ವ್ಯಕ್ತಪಡಿಸಿ, ಕೊಡಗಿನಲ್ಲಿ ರಂಗ ಶಿಕ್ಷಣ ದೊರಕಿಸಿಕೊಡುವ, ನಾಟಕಗಳನ್ನಾಡಲು ಅವಕಾಶ ಕಲ್ಪಸುವ ರಂಗ ಭೂಮಿ ತೆರೆಯಬೇಕಾಗಿದೆಯೆಂದು ನುಡಿದರು. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಹಲ ದಶಕಗಳ ಹಿಂದೆ ವೆಂಕಟರಾಜ ಶ್ಯಾಮರಾವ್ ಎಂಬವರು ನಾಟಕಗಳಿಗೆ ಹೆಚ್ಚಿನ ಉತ್ತೇಜನ ನೀಡುತ್ತಿದ್ದುದನ್ನು ಸ್ಮರಿಸಿ, ಈಶ ಎಂಬವರು ಜಿಲ್ಲೆಯ ರಂಗ ಭೂಮಿಯ ಬೆಳವಣಿಗೆಗೆ ಕಾರಣವಾಗಿದ್ದಾರೆ. ಪ್ರಸ್ತುತ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ನಾಟಕಗಳನ್ನಾಡಿಸುವ ಮೂಲಕ ರಂಗ ಬೂಮಿಯ ಬೆಳವಣಿಗೆಗೆ ಮುಂದಾಗಬೇಕಾಗಿದೆ ಎಂದರು. ಕೊಡಗು ಪತ್ರಿಕಾ ಭವನ ಟ್ರಸ್ಟ್‍ನ ಮ್ಯಾನೇಜಿಂಗ್ ಟ್ರಸ್ಟಿ ಹಾಗೂ ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಮಾತನಾಡಿ, ಕಸಾಪದಿಂದ ಮಕ್ಕಳ ನಾಟಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಆ ಮೂಲಕ ಕಲಾ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ರಂಗಭೂಮಿಯನ್ನು ಉಳಿಸಬೇಕಾಗಿದೆ ಎಂದರು. ಅಲ್ಲಾರಂಡ ರಂಗ ಚಾವಡಿಯ ಅಧ್ಯಕ್ಷ ಅಲ್ಲಾರಂಡ ವಿಠಲ ನಂಜಪ್ಪ ಅವರು ಮಾತನಾಡಿ, ಗ್ರೀಕ್ ನಾಟಕಗಳು ರಂಗಭೂಮಿಯ ಅಡಿಪಾಯಗಳೆನ್ನುವ ಭಾವನೆಗಳಿದೆಯಾದರು, ಭಾರತದ ರಂಗಭೂಮಿ ತನ್ನದೇ ಆದ ಸ್ವಂತಿಕೆಯನ್ನು ಹೊಂದಿದ್ದು, ಕೊಡಗು ಜಿಲ್ಲೆಯೂ ಧಾರ್ಮಿಕ ಆಚರಣೆಗಳ ಹಿನ್ನೆಲೆಯೊಳಗೆ ರಂಗ ಭೂಮಿಯ ಆಳವಾದ ಬೇರುಗಳನ್ನು ಹೊಂದಿದೆ. ಪನ್ನಂಗಾಲ ತಮ್ಮೆ, ಕಡಗದಾಳಿನ ನಾಡೆ ಕರೆಯುವ ಪಾರಂಪರಿಕ ಪದ್ಧತಿಗಳು ರಂಗ ಭೂಮಿಯ ಜೀವಂತಿಕೆಗೆ ಸಾಕ್ಷಿಯಾಗಿ ಕಂಡು ಬರುತ್ತಿಯೆಂದು ವಿಶ್ಲೇಷಿಸಿ, ಎಪ್ಪತ್ತರ ದಶಕದಲ್ಲಿ ಕಣಿವೆ, ಹೆಬ್ಬಾಲೆಗಳಲ್ಲಿನ ಪೌರಾಣಿಕ ನಾಟಕಗಳ ಪ್ರದರ್ಶನದ ವಿಚಾರಗಳು, ಗೋಣಿಕೊಪ್ಪಲಿನಲ್ಲಿ ಅಂದಿನ ದಿನಮಾನಗಳಲ್ಲಿ ನಡೆಯುತ್ತಿದ್ದ ನಾಟಕ ಪ್ರದರ್ಶನ, ಎಂಭತ್ತರ ದಶಕದಲ್ಲಿ ನಡೆದ ರಂಗೋತ್ಸವ, ನಾಟಕಗಳಿಗಾಗಿ ಹುಟ್ಟಿಕೊಂಡಿದ್ದ ವಿವಿಧ ತಂಡಗಳನ್ನು ಉಲ್ಲೇಖಿಸುತ್ತಲೆ, ಜಿಲ್ಲೆಯ ರಂಗ ಕ್ಷೇತ್ರದ ಮಸುಕು ಹಾದಿಯನ್ನು ಸ್ಪಷ್ಟಗೊಳಿಸುವ ಪ್ರಯತ್ನ ನಡೆಸಿದರು. ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಅವರು ರಂಗಗೀತೆಯನ್ನು ಸುಶ್ರಾವ್ಯವಾಗಿ ಪ್ರಸ್ತುತ ಪಡಿಸಿ, ರಂಗಭೂಮಿಯ ಸಂರಕ್ಷಣೆ ಅತ್ಯವಶ್ಯವಾಗಿ ನಡೆಯಬೇಕಾಗಿದೆಯೆಂದರು.


Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಮಂದಗತಿಯಲ್ಲಿ ಸಾಗುತ್ತಿರುವ ಅಮೃತ್ ಕಾಮಗಾರಿ : ಮಡಿಕೇರಿ ನಗರಸಭೆ ಸಾಮಾನ್ಯ ಸಭೆಯಲ್ಲಿ ತೀವ್ರ ಅಸಮಾಧಾನ*

ಮಾರ್ಚ್ 28, 2026

*ಪೊಲೀಸ್ ವಸತಿ ಗೃಹ, ಸಮುದಾಯ ಭವನಗಳಿಗೆ ಕೊಡಗು ಎಸ್‌ಪಿ ಬಿಂದುಮಣಿ ಭೇಟಿ : ಪರಿಶೀಲನೆ*

ಮಾರ್ಚ್ 28, 2026

*ಏ.1 ರಂದು ನಾಪೋಕ್ಲುವಿನಲ್ಲಿ ಹಿಂದೂ ಜನಜಾಗೃತಿ ಸಮಾವೇಶ*

ಮಾರ್ಚ್ 28, 2026

*ಪೊಲೀಸ್ ವಸತಿ ಗೃಹ, ಸಮುದಾಯ ಭವನಗಳಿಗೆ ಕೊಡಗು ಎಸ್‌ಪಿ ಬಿಂದುಮಣಿ ಭೇಟಿ : ಪರಿಶೀಲನೆ*

ಮಾರ್ಚ್ 28, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ ಪೊಲೀಸ್ ನ್ಯೂಸ್

ಮಡಿಕೇರಿ ಮಾ.28 NEWS DESK : ನಗರದ ಮೈತ್ರಿ ಪೊಲೀಸ್ ಸಮುದಾಯ ಭವನದ ಬಳಿಯ ಪೊಲೀಸ್ ವಸತಿ ಗೃಹ ಸಮುಚ್ಚಯ…

*ಏ.1 ರಂದು ನಾಪೋಕ್ಲುವಿನಲ್ಲಿ ಹಿಂದೂ ಜನಜಾಗೃತಿ ಸಮಾವೇಶ*

ಮಾರ್ಚ್ 28, 2026

*ಮಾ.31ರಂದು ಜನರಲ್ ಕೆ.ಎಸ್.ತಿಮ್ಮಯ್ಯ ಅವರ 120ನೇ ಜನ್ಮ ದಿನಾಚರಣೆ*

ಮಾರ್ಚ್ 28, 2026

*ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಬಿ.ಕೆ.ಪ್ರಶಾಂತ್ ಆಯ್ಕೆ*

ಮಾರ್ಚ್ 28, 2026

*ಶ್ರೀ ತಿರುನೆಲ್ಲಿ ಪೆಮ್ಮಯ್ಯ ದೇವಾಲಯಕ್ಕೆ ಶಾಸಕ ಎ.ಎಸ್.ಪೊನ್ನಣ್ಣ ಭೇಟಿ : ವಿಶೇಷ ಪೂಜೆ ಸಲ್ಲಿಕೆ*

ಮಾರ್ಚ್ 28, 2026

*ಸೋಮವಾರಪೇಟೆಯಲ್ಲಿ ಸಂಭ್ರಮದ ರಾಮೋತ್ಸವ*

ಮಾರ್ಚ್ 28, 2026

*ಮೂರ್ನಾಡು : ಮಾ.29 ರಂದು ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ*

ಮಾರ್ಚ್ 28, 2026

*ಗೋಣಿಕೊಪ್ಪ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸಮಿತಿಗಳ ರಚನೆ ಮತ್ತು ನಿರ್ವಹಣೆ ತರಬೇತಿ*

ಮಾರ್ಚ್ 28, 2026

*ಕೂಡಿಗೆ : ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ವೃತ್ತಿ ಮೇಳ ಸಹಕಾರಿ : ಸಿಇಓ ಆನಂದ್ ಪ್ರಕಾಶ್ ಮೀನ*

ಮಾರ್ಚ್ 28, 2026

*ಕೊಡಗು ವಿಶ್ವವಿದ್ಯಾಲಯದ ಮೂರನೇ ಸಂಸ್ಥಾಪನಾ ದಿನಾಚರಣೆ : ಭಾರತದ ಐತಿಹಾಸಿಕ ಶಿಕ್ಷಣ ಪದ್ಧತಿ ಇಂದಿನ ಅಗತ್ಯ : ನ್ಯಾಯಮೂರ್ತಿ ಇ.ಎಸ್.ಇಂದಿರೇಶ್ ಅಭಿಮತ*

ಮಾರ್ಚ್ 28, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.