
ಮಡಿಕೇರಿ ಮಾ.30 NEWS DESK : ಅಮ್ಮತ್ತಿ ಕೊಡವ ಸಮಾಜದ ಪ್ರಮುಖರು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಸನ್ಮಾನಿಸಿದರು. ತಾವು ಶಾಸಕರಾಗಿ ಆಯ್ಕೆಯಾದಲ್ಲಿನಿಂದ ಕೈಗೊಳ್ಳುತ್ತಿರುವ ಅಭಿವೃದ್ಧಿ ಕಾಮಗಾರಿಗಳು ಹಾಗೂ ನಿರಂತರ ಜನರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಹಗಲಿರಳು ಶ್ರಮಿಸುತ್ತಿರುವುದಕ್ಕೆ ಹಾಗೂ ವಿಶೇಷವಾಗಿ ಜಮ್ಮಾಬಾಣೆ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ, ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆ ಮತ್ತು ದಶಕಗಳಿಂದ ಕೊಡವ ಸಮುದಾಯದವರನ್ನು ಕೊಡಗರು ಎಂದು ಸಂಬೋಧಿಸುತ್ತಿರುವುದನ್ನು ಸರಕಾರಿ ದಾಖಲೆಗಳಲ್ಲಿ ಅಧಿಕೃತವಾಗಿ ಬದಲಾಯಿಸಿ, ಕೊಡವರು ಎಂದು ನಮೂದಿಸುವಂತೆ ತಿದ್ದುಪಡಿ ಮಾಡಿದ ವಿಶೇಷ ಪ್ರಯತ್ನಕ್ಕೆ ಅಮ್ಮತ್ತಿ ಕೊಡವ ಸಮಾಜದ ಪ್ರಮುಖರು ಶಾಸಕರನ್ನು ಸನ್ಮಾನಿ, ಗೌರವಿಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಪ್ರಕಾಶ್, ಸದಸ್ಯರಾದ ಧನು ಉತ್ತಯ್ಯ, ಭೀಮಯ್ಯ, ಧನ್ಯ ದೇವಯ್ಯ, ಅಪ್ಪಣ್ಣ, ಶ್ಯಾಮ್ ಬೋಪಣ್ಣ, ಸಮಾಜ ಸೇವಕರು ಚೊಕ್ಕಂಡ ಸಂಜು ಸುಬ್ಬಯ್ಯ ಹಾಗೂ ಪ್ರಮುಖರು ಉಪಸ್ಥಿತರಿದ್ದರು.









