Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಸೋಮವಾರಪೇಟೆ:- ತಪೋಕ್ಷೇತ್ರ ಮನೆಹಳ್ಳಿ ಮಠದ ಜಾತ್ರೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು*
  • *‘ಕೊಡವ ಅಭಿವೃದ್ಧಿ ನಿಗಮ’ ಯುಕೊ ಸಂಕಲ್ಪ ಸಿದ್ಧಿ; ⁠ಇಗ್ಗುತ್ತಪ್ಪ ಸನ್ನಿಧಿಯಲ್ಲಿ ಹರಕೆ ಸಮರ್ಪಣೆ*
  • *ಕ್ರಿಯೇಟಿವ್ ಕಾಲೇಜಿನಲ್ಲಿ ‘ಡಿಟೆಕ್ಟಿವ್ ದಿವಾಕರ್’ ತುಳು ಚಲನಚಿತ್ರದ ಟೀಸರ್ ಮತ್ತು ಎರಡನೇ ಪೋಸ್ಟರ್ ಬಿಡುಗಡೆ*
  • *ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ : ಕಾಂಗ್ರೆಸ್ ಅಭ್ಯರ್ಥಿ ಪರ ಶಾಸಕ ಡಾ.ಮಂತರ್ ಗೌಡ ಬಿರುಸಿನ ಪ್ರಚಾರ*
  • *ಕೆ.ಬಿ.ರೀಮಾಗೆ ಪಿಹೆಚ್‍ಡಿ ಪದವಿ ಪ್ರದಾನ*
  • *ಗುಡ್ಡೆಹೊಸೂರು ಹಾಗೂ ಬಳ್ಳೂರು ವೀರಶೈವ ಸಮಾಜದಿಂದ ಶ್ರೀ ಶಿವಕುಮಾರ ಸ್ವಾಮಿಗಳ ಜಯಂತಿ ಆಚರಣೆ*
  • *ಬ್ಯಾರಿ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ : ಯಶಸ್ಸಿಗೆ ಕೈ ಜೋಡಿಸಲು ಮನವಿ*
  • *ದಾವಣಗೆರೆ ಉಪ ಚುನಾವಣೆ : ಚುನಾವಣಾ ಪ್ರಚಾರ ಕಚೇರಿಗೆ ಶಾಸಕ ಡಾ.ಮಂತರ್ ಗೌಡ ಭೇಟಿ*
  • *ದೈತ್ಯ ಬೆಟ್ಟ ತಡಿಯಂಡಮೋಳ್ ನ್ನು 100 ಬಾರಿ ಏರಿದ ಸಾಧಕ ಅರೆಯಡ ಗಿರೀಶ್*
  • *ವಿರಾಜಪೇಟೆಯಲ್ಲಿ ಮದ್ಯ ಮಾರಾಟ ನಿಷೇಧ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*‘ಕೊಡವ ಅಭಿವೃದ್ಧಿ ನಿಗಮ’ ಯುಕೊ ಸಂಕಲ್ಪ ಸಿದ್ಧಿ; ⁠ಇಗ್ಗುತ್ತಪ್ಪ ಸನ್ನಿಧಿಯಲ್ಲಿ ಹರಕೆ ಸಮರ್ಪಣೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*‘ಕೊಡವ ಅಭಿವೃದ್ಧಿ ನಿಗಮ’ ಯುಕೊ ಸಂಕಲ್ಪ ಸಿದ್ಧಿ; ⁠ಇಗ್ಗುತ್ತಪ್ಪ ಸನ್ನಿಧಿಯಲ್ಲಿ ಹರಕೆ ಸಮರ್ಪಣೆ*

ಏಪ್ರಿಲ್ 2, 20263 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

‘ಕೊಡವ ಅಭಿವೃದ್ಧಿ ನಿಗಮ’ ಸ್ಥಾಪನೆಯ ಸಂಕಲ್ಪ ಈಡೇರಿದ ಹಿನ್ನಲೆಯಲ್ಲಿ ಯುನೈಟೆಡ್ ಕೊಡವ ಆರ್ಗನೈಸೇಷನ್ – ಯುಕೊ ಸಂಘಟನೆಯ ಸದಸ್ಯರು ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ನೇತೃತ್ವದಲ್ಲಿ ಇಂದು ಪಾಡಿ ಶ್ರೀ ಇಗ್ಗುತ್ತಪ್ಪ ದೇವಸ್ಥಾನಕ್ಕೆ ಬೇಟಿ ನೀಡಿ ಪೂಜೆ ಸಲ್ಲಿಸಿ, ಅನ್ನದಾನಕ್ಕೆ ಅಕ್ಕಿ ಹಾಗು ದೀಪದ ಎಣ್ಣೆ ದಾನ ನೀಡಿ ಹರಕೆ ಸಲ್ಲಿಸಿದರು.

ಕರ್ನಾಟಕ ಸರ್ಕಾರದ 2026-27ನೇ ಸಾಲಿನ ಮುಂಗಡಪತ್ರದಲ್ಲಿ ನೂತನವಾಗಿ “ಕೊಡವ ಅಭಿವೃದ್ದಿ ನಿಗಮ”ವು ಘೋಷಣೆಯಾಗಿದ್ದು, ಈ ಒಂದು ಪರಿಕಲ್ಪನೆಯನ್ನು ಹುಟ್ಟುಹಾಕಿ, ಇದಕ್ಕಾಗಿ ಕಳೆದ ಒಂದು ದಶಕದಿಂದ ನಿರಂತರ ಪರಿಶ್ರಮಪಟ್ಟಿರುವ ಯುನೈಟೆಡ್ ಕೊಡವ ಆರ್ಗನೈಸೇಷನ್ – ಯುಕೊ ಸಂಘಟನೆಯ ಸಂಕಲ್ಪ ಈಡೇರಿದ ಹಿನ್ನಲೆಯಲ್ಲಿ ಸಂಘಟನೆಯ ಸದಸ್ಯರು ಹಾಗು ಹಿತೈಶಿಗಳು ಇಂದು ಪಾಡಿ ಶ್ರೀ ಇಗ್ಗುತ್ತಪ್ಪ ದೇವಳಕ್ಕೆ ಬೇಟಿನೀಡಿ ವಿಶೇಷ ಪೂಜೆ ಸಲ್ಲಿಸಿ, ಕೊಡವ ಅಭಿವೃದ್ಧಿ ನಿಗಮ ಘೋಷಣೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಶಾಸಕ ಹಾಗು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಮತ್ತು ಈ ಒಂದು ಪರಿಕಲ್ಪನೆಯನ್ನು ಯಶಸ್ಸಿನೆಡೆಗೆ ಮುನ್ನಡೆಸಿದ ಯುಕೊ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಹಾಗು ಸಂಘಟನೆಯ ಸರ್ವ ಸದಸ್ಯರು, ಹೋರಾಟಕ್ಕೆ ಸ್ಪಂದಿಸಿದ ಎಲ್ಲಾ ಮುಖಂಡರುಗಳು, ಮತ್ತು ಪ್ರತ್ಯಕ್ಷ ಹಾಗು ಪರೋಕ್ಷವಾಗಿ ಬೆಂಬಲಿಸಿದ ಎಲ್ಲರಿಗೂ ಒಳಿತಾಗುವಂತೆ ದೇಶ ತಕ್ಕರಾದ ಪರದಂಡ ವಿಠಲ ಕಾವೇರಪ್ಪ ಬೇಡಿಕೊಂಡರು.

ಈ ಸಂದರ್ಭ ಮಾತನಾಡಿದ ಯುಕೊ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಕೊಡವ ಜನಾಂಗದ ಸಮಗ್ರ ಅಭಿೃದ್ಧಿಗಾಗಿ ನೂತನವಾಗಿ ‘ಕೊಡವ ಅಭಿವೃದ್ಧಿ ನಿಗಮ’ ಸ್ಥಾಪಿಸಬೇಕೆಂಬ ಪರಿಕಲ್ಪನೆಯನ್ನು ಹುಟ್ಟುಹಾಕಿ ಯುಕೊ ಸಘಟನೆಯು ವ್ಯವಸ್ಥಿತವಾಗಿ ಬೇಡಿಕೆಯನ್ನು ಸರ್ಕಾರಕ್ಕೆ ಮುಟ್ಟಿಸಿ, ನಿರಂತರ ಹೋರಾಟವನ್ನು ಮಾಡುತ್ತಲೇ ಬಂದಿತ್ತು. ಈ ನಿಟ್ಟಿನಲ್ಲಿ ಹಿಂದಿನ ಸರ್ಕಾರ ಕೊಡವ ಜನಾಂಗದ ಸಮಗ್ರ ಶ್ರೇಯೋಭಿವೃದ್ದಿಗೆಂದು 10 ಕೋಟಿ ನೀಡಿತ್ತು. ಆದರೆ ಇದೀಗ ಶಾಸಕ ಎ. ಎಸ್. ಪೊನ್ನಣ್ಣನವರ ಪ್ರಭಾವದಿಂದ ನಮ್ಮ ಕೊಡವ ಅಭಿವೃದ್ಧಿ ನಿಗಮದ ಬೇಡಿಕೆ ಈಡೇರಿದೆ. ಕೊಡಗು ಕರ್ನಾಟಕದೊಂದಿಗೆ ವಿಲೀನದ ನಂತರದಲ್ಲಿ ಕೊಡವರ ಮಹತ್ವದ ಬೇಡಿಕೆಯೊಂದನ್ನು ಸರ್ಕಾರ ಈಡೇರಿಸಿರುವುದರ ಮೂಲಕ ಹೊಸ ಇತಿಹಾಸ ಸೃಷ್ಠಿಯಾಗಿದೆ ಎಂದು ಹೇಳಿದರು.

ಕೊಡವರು ‘ಕೊಡವ ಅಭಿವೃದ್ಧಿ ನಿಗಮ’ವನ್ನು ‘ಕೊಡವ ವ್ಯವಹಾರಗಳ ಮಂತ್ರಾಲಯ’ದಂತೆ ಪರಿಗಣಿಸಬೇಕಿದೆ. ಮುಖ್ಯ ಮಂತ್ರಿ ಸಿದ್ಧರಾಮಯ್ಯನವರ ನೇತೃತ್ವದ ಸರ್ಕಾರ ಅಷ್ಟೊಂದು ಮಹತ್ತರವಾದ ಕೊಡುಗೆಯನ್ನು ಕೊಡವರಿಗೆ ನೀಡಿದೆ. ಸೂಕ್ಮಾತಿ ಸೂಕ್ಷ್ಮ ಅಲ್ಪ ಸಂಖ್ಯಾತರಾಗಿರುವ ಕೊಡವರಿಗೆ ಇದನ್ನು ಪಡೆದುಕೊಳ್ಳುವುದು ಅಷ್ಟು ಸುಲಬದ ಮಾತಾಗಿರಲಿಲ್ಲ. ಆದರೆ ಅಚಲವಾದ ನಂಬಿಕೆಯಿಂದ ಯುಕೊ ಈ ಹೋರಾಟವನ್ನು ರೂಪಿಸಿ ಯಶಸ್ವೀಯಾಗಿ ಬೇಡಿಕೆಯನ್ನು ಸರ್ಕಾರಕ್ಕೆ ಮುಟ್ಟಿಸಲಾಗಿತ್ತು. ಆದರೆ ಈ ಬಜೆಟಿನಲ್ಲಿ ಘೋಷಣೆಮಾಡುವಲ್ಲಿ ಪೊನ್ನಣ್ಣನವರಜ ಕಾಳಜಿ ಮತ್ತು ಬದ್ಧತೆ ಹಾಗು ಸರ್ಕಾರದಲ್ಲಿ ಅವರಿಗಿರುವ ವರ್ಚಸ್ಸು ಕೆಲಸಮಾಡಿದೆ. ಹಾಗೆಯೇ
ನಮ್ಮ ಯುಕೊ ಸಂಘಟನೆಯ ನಿರಂತರ ಪರಿಶ್ರಮ, ಹಾಗು ತಂತ್ರಗಾರಿಕೆಯ ನಡೆಗೆ ದೊರೆತ ಗೆಲುವು ಇದಾಗಿದೆ. ಎಂದು ಅವರು ವಿಶ್ಲೇಷಿದರು.
ಇದೇ ಸಂದರ್ಭಲ್ಲಿ ಹಿಂದಿನ ಸರ್ಕಾರ ಹಾಗು ಮುಖಂಡರುಗಳು ನೀಡಿದ ಸಹಕಾರವನ್ನೂ ಮರೆಯದೆ ಸ್ಮರಿಸುವುದಾಗಿ ಅವರು ತಿಳಿಸಿದರು.

ಕ್ರೆಡಿಟ್ ವಾರ್ ಬಗ್ಗೆ ಪ್ರತಿಕ್ರೀಯಿಸಿ ಮಾತನಾಡಿದ ಅವರು, ನಿಜವಾದ ಕ್ರೆಡಿಟ್ ದೊರಕಿರುವುದು ಸಮಸ್ತ ಕೊಡವ ಜನಾಂಗಕ್ಕೆ. 2 ಲಕ್ಷ ಕೊಡವರು ಇದರ ನೇರ ಫಲಾನುಭವಿಗಳು, ಹೀಗಿರುವಾಗ ಕ್ಷುಲ್ಲಕ ನಡವಳಿಕೆಯನ್ನು ಬಿಟ್ಟು ನಿಗಮವನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಅವರು ಹೇಳಿದರು. ಹಾಗೆಯೇ ಎಲ್ಲರಿಗೂ ಈ ನಿಗಮದ ಹಿಂದಿನ ಪಾತ್ರಗಳ ಕುರಿತು ಅರಿವಿದೆ, ಆದರೂ ಈ ಯಶಸ್ಸನ್ನು ಅರಗಿಸಿಕೊಳ್ಳಲಾಗದೆ ಕೆಲವರು ಗೊಂದಲ ಸೃಷ್ಠಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ಇದೀಗ ಕೊಡವರಿಗಾಗಿಯೇ ಪ್ರತ್ಯೇಕ ನಿಗಮ ಘೋಷಣೆಯಾಗಿದ್ದು, ಕನಿಷ್ಠ 50 ರಿಂದ 100 ಕೋಟಿ ರುಪಾಯಿಗಳ ಅನುದಾನ ದೊರಕುವ ನಿರೀಕ್ಷೆಯಿದೆ. ಇಂತಹ ಸಂದರ್ಭದಲ್ಲಿ, ಕ್ರೆಡಿಟ್ ವಿಚಾರವನ್ನು ಮುನ್ನೆಲೆಗೆ ತಂದು ರಾಜಕೀಯ ಮಾಡುವುದನ್ನು ಬಿಟ್ಟು, ಜನಾಂಗದ ಶ್ರೇಯೋಭಿವೃದ್ದಿಗೆ ನಿಗಮವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಕೊಡವರು ಗಮನ ಹರಿಸುವುದೊಳಿತು ಎಂದು ಕಿವಿಮಾತು ಹೇಳಿದರು.

ಇದೇ ಸಂದರ್ಭ ದೇಶ ತಕ್ಕರಾದ ಪರದಂಡ ವಿಠಲಕಾವೇರಪ್ಪ ಮಂಜು ಚಿಣ್ಣಪ್ಪಗೆ ಸ್ಮರಣಿಕೆ ನೀಡಿ ಗೌರವಿಸಿದರು.

ಯುಕೊ ಸದಸ್ಯರಾದ, ಚೆಪ್ಪುಡಿರ ಸುಜು ಕರುಂಬಯ್ಯ, ನೆಲ್ಲಮಕ್ಕಡ ಜೆಫ್ರಿ ಮಾದಯ್ಯ, ಕಳ್ಳಿಚಂಡ ರಾಬಿನ್ ಸುಬ್ಬಯ್ಯ, ಅಪ್ಪಾರಂಡ ವೇಣು ಪೊನ್ನಪ್ಪ, ಮಚ್ಚಾಮಾಡ ರಮೇಶ್,ಕಾವಡಿಚಂಡ ದೀಪಕ್ ಉತ್ತಯ್ಯ, ತೀತಿಮಾಡ ಬೋಸ್ ಅಯ್ಯಪ್ಪ, ಪಳಂಗಿಯಂಡ ದರ್ಶನ್, ಮುಕ್ಕಾಟಿರ ರಾಬಿನ್,
ಚೆಪ್ಪುಡಿರ ಪ್ರತಿಮಾ ಕರುಂಬಯ್ಯ, ಬೊಳ್ಳಚೆಟ್ಟಿರ ಮೈನಾ ಕಾಳಪ್ಪ, ಕುಂಜಿಲಂಡ ಗ್ರೇಸಿ ಪೂಣಚ್ಚ, ಪಾಂಡಂಡ ಸ್ವಾತಿ ಗಣೇಶ್, ಕಾವಡಿಚಂಡ ಪವಿತ್ರ ಉತ್ತಯ್ಯ, ಮಚ್ಚಾಮಾಡ ರೇಶ್ಮಾ ರಮೇಶ್, ಶ್ರಾವ್ಯ ಗಂಗಮ್ಮ ಉಪಸ್ಥಿತರಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಸೋಮವಾರಪೇಟೆ:- ತಪೋಕ್ಷೇತ್ರ ಮನೆಹಳ್ಳಿ ಮಠದ ಜಾತ್ರೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು*

ಏಪ್ರಿಲ್ 2, 2026

*ಕ್ರಿಯೇಟಿವ್ ಕಾಲೇಜಿನಲ್ಲಿ ‘ಡಿಟೆಕ್ಟಿವ್ ದಿವಾಕರ್’ ತುಳು ಚಲನಚಿತ್ರದ ಟೀಸರ್ ಮತ್ತು ಎರಡನೇ ಪೋಸ್ಟರ್ ಬಿಡುಗಡೆ*

ಏಪ್ರಿಲ್ 1, 2026

*ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ : ಕಾಂಗ್ರೆಸ್ ಅಭ್ಯರ್ಥಿ ಪರ ಶಾಸಕ ಡಾ.ಮಂತರ್ ಗೌಡ ಬಿರುಸಿನ ಪ್ರಚಾರ*

ಏಪ್ರಿಲ್ 1, 2026

*‘ಕೊಡವ ಅಭಿವೃದ್ಧಿ ನಿಗಮ’ ಯುಕೊ ಸಂಕಲ್ಪ ಸಿದ್ಧಿ; ⁠ಇಗ್ಗುತ್ತಪ್ಪ ಸನ್ನಿಧಿಯಲ್ಲಿ ಹರಕೆ ಸಮರ್ಪಣೆ*

ಏಪ್ರಿಲ್ 2, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

‘ಕೊಡವ ಅಭಿವೃದ್ಧಿ ನಿಗಮ’ ಸ್ಥಾಪನೆಯ ಸಂಕಲ್ಪ ಈಡೇರಿದ ಹಿನ್ನಲೆಯಲ್ಲಿ ಯುನೈಟೆಡ್ ಕೊಡವ ಆರ್ಗನೈಸೇಷನ್ – ಯುಕೊ ಸಂಘಟನೆಯ ಸದಸ್ಯರು ಕೊಕ್ಕಲೆಮಾಡ…

*ಕ್ರಿಯೇಟಿವ್ ಕಾಲೇಜಿನಲ್ಲಿ ‘ಡಿಟೆಕ್ಟಿವ್ ದಿವಾಕರ್’ ತುಳು ಚಲನಚಿತ್ರದ ಟೀಸರ್ ಮತ್ತು ಎರಡನೇ ಪೋಸ್ಟರ್ ಬಿಡುಗಡೆ*

ಏಪ್ರಿಲ್ 1, 2026

*ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ : ಕಾಂಗ್ರೆಸ್ ಅಭ್ಯರ್ಥಿ ಪರ ಶಾಸಕ ಡಾ.ಮಂತರ್ ಗೌಡ ಬಿರುಸಿನ ಪ್ರಚಾರ*

ಏಪ್ರಿಲ್ 1, 2026

*ಕೆ.ಬಿ.ರೀಮಾಗೆ ಪಿಹೆಚ್‍ಡಿ ಪದವಿ ಪ್ರದಾನ*

ಏಪ್ರಿಲ್ 1, 2026

*ಗುಡ್ಡೆಹೊಸೂರು ಹಾಗೂ ಬಳ್ಳೂರು ವೀರಶೈವ ಸಮಾಜದಿಂದ ಶ್ರೀ ಶಿವಕುಮಾರ ಸ್ವಾಮಿಗಳ ಜಯಂತಿ ಆಚರಣೆ*

ಏಪ್ರಿಲ್ 1, 2026

*ಬ್ಯಾರಿ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ : ಯಶಸ್ಸಿಗೆ ಕೈ ಜೋಡಿಸಲು ಮನವಿ*

ಏಪ್ರಿಲ್ 1, 2026

*ದಾವಣಗೆರೆ ಉಪ ಚುನಾವಣೆ : ಚುನಾವಣಾ ಪ್ರಚಾರ ಕಚೇರಿಗೆ ಶಾಸಕ ಡಾ.ಮಂತರ್ ಗೌಡ ಭೇಟಿ*

ಏಪ್ರಿಲ್ 1, 2026

*ದೈತ್ಯ ಬೆಟ್ಟ ತಡಿಯಂಡಮೋಳ್ ನ್ನು 100 ಬಾರಿ ಏರಿದ ಸಾಧಕ ಅರೆಯಡ ಗಿರೀಶ್*

ಏಪ್ರಿಲ್ 1, 2026

*ವಿರಾಜಪೇಟೆಯಲ್ಲಿ ಮದ್ಯ ಮಾರಾಟ ನಿಷೇಧ*

ಏಪ್ರಿಲ್ 1, 2026

*ಏ.6 ಮತ್ತು 7 ರಂದು ಕೊಡಗು ಕ್ರಿಕೆಟ್ ತಂಡಗಳ ರಚನೆಗೆ ಆಟಗಾರರ ಆಯ್ಕೆ ಪ್ರಕ್ರಿಯೆ*

ಏಪ್ರಿಲ್ 1, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.