
ಸುಂಟಿಕೊಪ್ಪ ಏ.2 NEWS DESK : ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದಲ್ಲಿ ಪವಿತ್ರ ಗುರುವಾರದ ಸಂಜೆ ಕಡೆಯ ಭೋಜನ ವಿಶೇಷ ಬಲಿಪೂಜೆಯನ್ನು ಸಂತ ಮೇರಿ ಶಾಲಾವರಣದಲ್ಲಿ ಪ್ರಾರ್ಥನಾ ಕೂಟವನ್ನು ಬೆಂಗಳೂರಿನ ಧರ್ಮಕೇಂದ್ರ ಪ್ರೇಮ್ಕುಮಾರ್ ಹಾಗೂ ದೇವಾಲಯದ ಧರ್ಮಗುರುಗಳಾದ ಫಾಧರ್ ವಿಜಯಕುಮಾರ್ ಅವರು ನೇರವೇರಿಸಿದರು. ಈ ದಿನವು ಕ್ರೈಸ್ತರಿಗೆ ಪ್ರಥಮ ಬಲಿಪೂಜೆಯ ಸಂಸ್ಕಾರ ಸ್ಥಾಪನೆಯ ದಿನವಾಗಿದೆ, ಕ್ರೈಸ್ತ ಬಾಂಧದವರಿಗೆ ಗುರು ದೀಕ್ಷೆಯ ಸ್ಥಾಪಿತವಾದ ಸ್ಮರಣೆಯ ದಿನವಾಗಿದೆ, ಕ್ರೈಸ್ತ ಧರ್ಮ ಸಭೆಯು ಸೇವೆಯನ್ನು ಸ್ಮರಿಸಿಕೊಳ್ಳುವ ಸೇವಾ ಕಾರ್ಯವನ್ನು ವೃದ್ಧಿಸುವ ದಿನವಾಗಿದೆ. ನಾನು ನಿಮ್ಮನು ಪ್ರೀತಿಸಿದಂತೆ ಪರರನ್ನು ಪ್ರೀತಿಸಿ ಎಂಬ ಹೊಸ ಆಜ್ಞೆಯನ್ನು ಪ್ರಭು ಕ್ರಿಸ್ತರು ನೇರವೇರಿಸಿದ ದಿನವಾಗಿದೆ. ಪವಿತ್ರ ಗುರುವಾರ ಕಡೆಯ ಭೋಜನದ ಅಂಗವಾಗಿ ದೇವಾಲಯದಲ್ಲಿ ದಿವ್ಯ ಬಲಿಪೂಜೆ ಹಾಗೂ ಪ್ರಭುಕ್ರಿಸ್ತರು ತಾವು ಮರಣಹೊಂದುವ ಮುನ್ನದಿನ ತಮ್ಮ ಶಿಷ್ಯರೊಂದಿಗೆ ಕಡೆಯ ಬೋಜನಕ್ಕೂ ಮುನ್ನ ಶಿಷ್ಯರ ಪಾದಗಳನ್ನು ತೊಳೆದು ಕಡೆಯ ಭೋಜನವನ್ನು ಸವಿದಿದ್ದ ಸ್ಮರಣೆಯ ಅಂಗವಾಗಿ ದೇವಾಲಯದಲ್ಲಿ ಬೆಂಗಳೂರಿನ ಧರ್ಮಕೇಂದ್ರದ ಪ್ರೇಮ್ಕುಮಾರ್ ಹಾಗೂ ಧರ್ಮಗುರುಗಳಾದ ರೇ.ಫಾ.ವಿಜಯಕುಮಾರ್ ಅವರು ದೇವಾಲಯದಲ್ಲಿರುವ ಹಿರಿಯರ ಕ್ರೈಸ್ತಭಾಂದವರ ಪಾದಗಳನ್ನು ತೊಳೆಯುವ ಮೂಲಕ ಆಚರಣೆಯನ್ನು ನೇರವೇರಿಸುವ ಮೂಲಕ ಪ್ರಭು ಕ್ರಿಸ್ತರ ನಡೆಸಿದ ಮಹತ್ಕಾರ್ಯವನ್ನು ನೆನಪಿಸಿದರು. ನಂತರ ಕ್ರೈಸ್ತ ಬಾಂಧವರು ಮಧ್ಯರಾತ್ರಿಯವರೆಗೆ ವಿಶೇಷ ಪ್ರಾರ್ಥನೆ ದ್ಯಾನಗಳಲ್ಲಿ ಕ್ರೈಸ್ತಭಾಂದವರು ತೊಡಗಿಸಿಕೊಂಡಿದ್ದರು. ನೂರಾರು ಸಂಖ್ಯೆಯಲ್ಲಿ ಕ್ರೈಸ್ತ ಕ್ರೈಸ್ತ ಬಾಂಧವರು ಶ್ರದ್ಧಾಭಕ್ತಿಯಿಂದ ಪ್ರಾರ್ಥನಾಕೂಟದಲ್ಲಿ ಪಾಲ್ಗೊಂಡಿದ್ದರು.









