
ಮಡಿಕೇರಿ ಏ.3 NEWS DESK : ಮುತ್ತಪ್ಪ ಸೇವಾ ಸಂಘ ಬ್ರಹ್ಮಗಿರಿಪುರ ಕಾನೂರು ವತಿಯಿಂದ ಶ್ರೀ ಮುತ್ತಪ್ಪ ದೇವರ ಜಾತ್ರಾ ಮಹೋತ್ಸವ ಏ.5, 6 ರಂದು ದೇವಾಲಯ ಆವರಣದಲ್ಲಿ ನಡೆಯಲಿದೆ ಎಂದು ದೇವಾಲಯ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. ಏ.5ರ ಸೋಮವಾರದಂದು ಸಂಜೆ 5.30 ಗಂಟೆಗೆ ಮುತ್ತಪ್ಪ ದೇವರ ಮಲೆ ಇಳಿಸುವುದು, ಸಂಜೆ 6 ಗಂಟೆಗೆ ಮುತ್ತಪ್ಪನ್ ಬೆಳ್ಳಾಟ್, ಸಂಜೆ 7.30 ಗಂಟೆಗೆ ಕುಟ್ಟಿಚಾತನ್ ಬೆಳ್ಳಾಟ್, ರಾತ್ರಿ 8 ಗಂಟೆಗೆ ಅನ್ನದಾನ, ರಾತ್ರಿ 9.30 ಗಂಟೆಗೆ ಕಂಡಕರ್ಣನ್ ಬೆಳ್ಳಾಟ್ ನಡೆಯಲಿದೆ. ಸೋಮವಾರ ಬೆಳಗ್ಗಿನ ಜಾವ 2 ಗಂಟೆಗೆ ಗುಳಿಗನ್ ತೆರೆ, 3 ಗಂಟೆಗೆ ಕಂಡಕರ್ಣನ್ ತೆರೆ, 6 ಗಂಟೆಗೆ ಮುತ್ತಪ್ಪನ್ ತೆರೆ ನಡೆಯಲಿದ್ದು, ಬೆಳಗ್ಗೆ 11.50 ಗಂಟೆಗೆ ದೇವರ ಉತ್ಸವ ಸಂಪನ್ನಗೊಳ್ಳಲಿದೆ. ಕಾರ್ಯಕ್ರಮಕ್ಕೆ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಾಲಯ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ಕೋರಿದೆ.









