
ಗೋಣಿಕೊಪ್ಪ ಏ.10 NEWS DESK : ಕೆದಮುಳ್ಳೂರು ಗ್ರಾಮದ ಕುಲ್ಲಚೆಟ್ಟಿ ಕುಟುಂಬಸ್ಥರು ಮೂರು ವರ್ಷಗಳಿಗೊಮ್ಮೆ ನಡೆಸುವ ಹರಿಸೇವೆ ಹಾಗೂ 101 ಕೋಲಗಳು ಏ.15 ರಿಂದ 17ರ ವರೆಗೆ ನಡೆಯಲಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಏ.15 ರಂದು ಕುಲ್ಲಚೆಟ್ಟಿ ಐನ್‍ಮನೆಯಲ್ಲಿ ಬೆಳಗ್ಗೆ ವೆಂಕಟರಮಣ ದೇವರ ಹರಿಸೇವೆ, ಪೂಜಾ ಕಾರ್ಯಗಳು ನಡೆಯಲಿದೆ. ಸಂಜೆ, ಅರೆಭಾಷೆಗೌಡ ಜನರ ಪ್ರಮುಖ ದೈವವಾದ ಬಚ್ಚನಾಯಕ ಆರಾಧನೆ ಮತ್ತು ಕೋಲ, ಜತೆಗೆ ಹುಲಿ ಚಾಮುಂಡಿ, ಇತರೆ ಶ್ರೀ ಧರ್ಮ ದೇವತೆಗಳು, ಕೋಲಗಳು ನಡೆಯಲಿದೆ. ಏ.16 ರಂದು ಬೆಳಗೆ 10ಕ್ಕೆ ಧರ್ಮದೇವತೆ, ಸೀರಾಡಿ ದೈವದ ಕೋಲ ನಡೆಯಲಿದೆ.17 ರಂದು, ಪಾಷಣಮೂರ್ತಿ, ಪಂಜುರ್ಲಿಸೇರಿದಂತೆ ಹಲವು ಕೋಲಗಳು ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.









