
ಮಡಿಕೇರಿ NEWS DESK ಏ.15 : ಕೊಡವರ ಹೊಸ ವರ್ಷಾಚರಣೆ ಎಡ್ಮಾö್ಯರ್ 1 ರ ಪ್ರಯುಕ್ತ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಗೋಣಿಕೊಪ್ಪಲಿನಲ್ಲಿ ಪಂಜಿನ ಮೆರವಣಿಗೆ ಮತ್ತು ಮಾನವ ಸರಪಳಿ ನಡೆಯಿತು. ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಕೊಡವರ ಹಕ್ಕುಗಳನ್ನು ಪ್ರತಿಪಾದಿಸಿದರು. 32ನೇ ವರ್ಷದ ಎಡ್ಮ್ಯಾರ್ 1 ರ ಪ್ರಯುಕ್ತ ಸಿಎನ್‌ಸಿಯಿಂದ ಗೋಣಿಕೊಪ್ಪಲಿನಲ್ಲಿ ಪಂಜಿನ ಮೆರವಣಿಗೆ ಮತ್ತು ಮಾನವ ಸರಪಳಿ 1 ನ್ನು ಆಚರಿಸಿದ ಸಿಎನ್‌ಸಿ ಸಂಘಟನೆಯ ಪ್ರಮುಖರು ಹಾಗೂ ಕೊಡವ, ಕೊಡವತಿಯರು ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ದುಡಿಕೊಟ್ಟ್ ಪಾಟ್ ನೊಂದಿಗೆ ಗೋಣಿಕೊಪ್ಪಲಿನ ಆರ್‌ಎಂಸಿ ಯಾರ್ಡ್ ಬಳಿಯಿಂದ ಮುಖ್ಯ ಬೀದಿಯಲ್ಲಿ ಪೊಂಬೊಳ್ಕ್ ಮೆರವಣಿಗೆ ನಡೆಸಿದರು. ಮಾನವ ಸರಪಳಿ ರಚಿಸಿದ ನಂತರ ರಾಜ್ಯಾಂಗದತ್ತ ಹಕ್ಕೊತ್ತಾಯಗಳನ್ನು ಮಂಡಿಸಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಈ ಸಂದರ್ಭ ಮಾತನಾಡಿದ ಎನ್.ಯು.ನಾಚಪ್ಪ ಅವರು ಕೊಡವರು ಪ್ರತ್ಯೇಕ ಮೂಲವಂಶಸ್ಥ ಜನಾಂಗವಾಗಿದ್ದು, ಸಂವಿಧಾನದ ಮೂಲಭೂತ ಹಕ್ಕುಗಳ 32ನೇ ವಿಧಿ ಪ್ರಕಾರ ಭಾರತ ಸರ್ಕಾರ ಸಂವಿಧಾನಿಕ ಪರಿಹಾರವಾಗಿ ಕೊಡವರ ಈ ಕೆಳಗಿನ ಹಕ್ಕುಗಳನ್ನು ಮಾನ್ಯ ಮಾಡಬೇಕೆಂದು ಒತ್ತಾಯಿಸಿದರು. ಸಂವಿಧಾನದ ಆರ್ಟಿಕಲ್ 244 ಮತ್ತು 371 ವಿಧಿ & 6ನೇ ಶೆಡ್ಯೂಲ್ ರಡಿಯಲ್ಲಿ ಕೊಡವ ಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ ಮತ್ತು ಸ್ವಯಂ ನಿರ್ಣಯದ ಹಕ್ಕು ನೀಡಬೇಕು. ಸಂವಿಧಾನದ 340 ಮತ್ತು 342ನೇ ವಿಧಿಯಡಿಯಲ್ಲಿ ವರ್ಗೀಕರಿಸಿ ಅತಿಸೂಕ್ಷö್ಮ ಕೊಡವ ಜನಾಂಗದ ರಕ್ಷಣೆಯಾಗಬೇಕು. ಸಂವಿಧಾನದ 25, 26 ರ ವಿಧಿಯಡಿ ಕೊಡವರ ಧಾರ್ಮಿಕ ಸಂಸ್ಕಾರ ತೋಕ್ -ಗನ್ ನ್ನು ಸೇರ್ಪಡೆಗೊಳಿಸಿ ದೈನಂದಿನ, ಧಾರ್ಮಿಕ ಕ್ರಿಯೆಯಾಗಿ ಕೋವಿ ಹೊಂದುವ ಹಕ್ಕನ್ನು ಆಭಾದಿತಗೊಳಿಸಬೇಕು. ಕೊಡವ ಭಾಷೆಯನ್ನು ಸಂವಿಧಾನದ 8ನೇ ಶೆಡ್ಯೂಲ್ ಗೆ ಸೇರಿಸಬೇಕು ಮತ್ತು ಆದಿಮಸಂಜಾತ ಕೊಡವ ಜನಾಂಗೀಯ ಸಮುದಾಯಕ್ಕೆ “ಪ್ರಾಚೀನ ಆದಿಮಸಂಜಾತ ಏಕಜನಾಂಗೀಯ ಬುಡಕಟ್ಟು ಕುಲ” ಎಂದು ವರ್ಗಿಕರಿಸಬೇಕು. ವಿಶ್ವ ರಾಷ್ಟç ಸಂಸ್ಥೆಯ ಇಂಡಿಜಿನಸ್ ರೈಟ್ಸ್ ಪ್ರಕಾರ ಅಂತರಾಷ್ಟಿçÃಯ ಕಾನೂನಿನಡಿ ರಕ್ಷಣೆ ದೊರಕಬೇಕು. ಆದಿಮಸಂಜಾತ ಕೊಡವರು ಕಳೆದುಕೊಂಡ ಪೂರ್ವಾರ್ಜಿತ ಆಸ್ತಿಗಳನ್ನು ವಿಶ್ವ ರಾಷ್ಟç ಸಂಸ್ಥೆಯ ಇಂಡಿಜಿನಸ್ ಲ್ಯಾಂಡ್ ರಿಕ್ಲೆಮಿಂಗ್ ಕಾನೂನಿನಡಿ ಮರು ಪಡೆಯವಂತಾಗಬೇಕು. ಪಾರ್ಲಿಮೆಂಟ್ ಮತ್ತು ಅಸೆಂಬ್ಲಿಯಲ್ಲಿ ಕೊಡವ ಸಮುದಾಯಕ್ಕೆ ಸಿಕ್ಕಿಂನ ಬೌದ್ಧ ಬಿಕ್ಷುಗಳಿಗಾಗಿ “ಸಂಘ” ಮತಕ್ಷೇತ್ರವನ್ನ ಮೀಸಲಿಟ್ಟಂತೆ ಕೊಡವ ಸಮುದಾಯಕ್ಕೆ ವಿಶೇಷವಾದ ಅಮೂರ್ತ-ಅಗೋಚರ ಮತ ಕ್ಷೇತ್ರಗಳನ್ನು ರಚಿಸಬೇಕು.
ಯುನೆಸ್ಕೋದ ಇಂಟ್ಯಾoಜಿಬಲ್ ಕಲ್ಚರಲ್ ಹೆರಿಟೇಜ್ ಪಟ್ಟಿಯಲ್ಲಿ ಕೊಡವ ಜನಪದ ಸಂಸ್ಕೃತಿಯನ್ನು ಸೇರಿಸಬೇಕು. 1871-72 ರಿಂದ 1931 ರ ವರೆಗೆ ನಡೆಸಲಾದ ಜನಗಣತಿಯಲ್ಲಿ ಕೊಡವರನ್ನು ಪ್ರತ್ಯೇಕ ಮೂಲ ವಂಶಸ್ಥ ಜನಾಂಗವೆoದು ವೈಜ್ಞಾನಿಕವಾಗಿ ದಾಖಲಿಸಲಾಗಿದ್ದು, ಆದರೆ 1941 ರಿಂದ 2011ರ ವರೆಗೆ ನಡೆಸಿದ ಜನಗಣತಿಯಲ್ಲಿ ಅವೈಜ್ಞಾನಿಕವಾಗಿ-ಅಸಂವಿಧಾನಿಕವಾಗಿ ಕೊಡವರನ್ನು ಇತರ ಬಲಾಡ್ಯ ಸಮುದಾಯದೊಂದಿಗೆ ವಿಲೀನಗೊಳಿಸಿ ಕೊಡವರ ಸ್ವತಂತ್ರ ವ್ಯಕ್ತಿತ್ವ ಮತ್ತು ಅಸ್ತಿತ್ವವನ್ನು ನಾಶಪಡಿಸಲಾಗಿದೆ. ಈಗ ಅದನ್ನು 1871-72 ರಿಂದ 1931ರ ವರೆಗೆ ನಡೆಸಲಾಗಿದ್ದ ವೈಜ್ಞಾನಿಕ ಜನಗಣತಿಯ ಆಧಾರದಲ್ಲಿ ಪುನರ್ ಜನಗಣತಿ ನಡೆಸಿ, ಕೊಡವ ಹೆಗ್ಗುರುತು ಮತ್ತು ಅನನ್ಯತೆಯನ್ನು ಉಳಿಸಬೇಕೆಂದು ಒತ್ತಾಯಿಸಿದರು.
ಎಡ್ಮ್ಯಾರ್ 1 ರ ಪ್ರಯುಕ್ತ ಸಿಎನ್‌ಸಿಯಿಂದ ಗೋಣಿಕೊಪ್ಪಲಿನಲ್ಲಿ ಪಂಜಿನ ಮೆರವಣಿಗೆ ಮತ್ತು ಮಾನವ ಸರಪಳಿ ನಮ್ಮೆಯು ವಸಂತ ಋತು ಫೆ.15 ರಿಂದ ಆರಂಭವಾಗಿ ಏ.14 ರಂದು ಮುಕ್ತಾಯವಾಗುವ ಹಂತವಾಗಿದೆ ಮತ್ತು ಸೂರ್ಯನು ಮೇಷ ನಕ್ಷತ್ರ ಪುಂಜಗಳತ್ತ ಸಾಗುವ ಪ್ರಕ್ರಿಯೆಯಾಗಿದೆ. ಎಲ್ಲಾ ಋತುಗಳಲ್ಲಿ ಈ ಋತು ಅತ್ಯಂತ ವರ್ಣರಂಜಿತವಾಗಿದೆ. ಕೃಷಿ ಚಟುವಟಿಕೆಯ ಮೂಲಕ ಪ್ರಕೃತಿಯೊಂದಿಗೆ ಬೆರೆತು ಹೋಗಿರುವ ಬುಡಕಟ್ಟು ಜನಾಂಗ ಕೊಡವರು ಕೊಡವ ಜನಾಂಗೀಯ ಪಂಚಾoಗದ ಪ್ರಕಾರ ಸೌರಮಾನ ಹೊಸ ವರ್ಷವನ್ನು ಪ್ರಕೃತಿಯ ವಾರ್ಷಿಕ ಚಕ್ರದಲ್ಲಿ ಮೊದಲ ಹಬ್ಬವೆಂದು ಪರಿಗಣಿಸುತ್ತಾರೆ. ಕೊಡವ ಬುಡಕಟ್ಟಿನ ಹೊಸ ವರ್ಷ ಎಂದರೆ ಸೌರಮಾನ ಕ್ಯಾಲೆಂಡರ್ ಮೂಲಭೂತವಾಗಿ ಎಡ್ಮ್ಯಾರ್ 1 ರ ಪ್ರಯುಕ್ತ ಸಿಎನ್‌ಸಿಯಿಂದ ಗೋಣಿಕೊಪ್ಪಲಿನಲ್ಲಿ ಪಂಜಿನ ಮೆರವಣಿಗೆ ಮತ್ತು ಮಾನವ ಸರಪಳಿ 1 ಗ್ರೆಗೋರಿಯನ್ ಕ್ಯಾಲೆಂಡರ್ ನೊಂದಿಗೆ ಹೊಂದಿಕೆಯಾಗುತ್ತದೆ. ಇದು ಕೊಡವ ಬುಡಕಟ್ಟು ಜನಾಂಗದವರ ಕೃಷಿ ಚಟುವಟಿಕೆಗಳ ಆರಂಭವನ್ನು ಸೂಚಿಸುತ್ತದೆ. ಆದ್ದರಿಂದ ಪ್ರಕೃತಿಯನ್ನು ಆರಾಧಿಸುವ ಕೊಡವರು ಎಡ್ಮ್ಯಾರ್ 1 ರ ಪ್ರಯುಕ್ತ ಸಿಎನ್‌ಸಿಯಿಂದ ಗೋಣಿಕೊಪ್ಪಲಿನಲ್ಲಿ ಪಂಜಿನ ಮೆರವಣಿಗೆ ಮತ್ತು ಮಾನವ ಸರಪಳಿ -1” ನ್ನು ಅತಿ ಉತ್ಸಾಹದಿಂದ ಆಚರಿಸಿ ಭೂದೇವಿಗೆ ನಮಿಸುತ್ತಾರೆ. ಈ ಜನಪದೀಯ ಬುಡಕಟ್ಟು ಆಚರಣೆ ಇಡೀ ವಿಶ್ವಕ್ಕೆ ಪರಿಚಯವಾಗಬೇಕೆನ್ನುವ ಉದ್ದೇಶದಿಂದ ಸಿಎನ್‌ಸಿ ಸಂಘಟನೆ ಪ್ರತಿವರ್ಷ ಸಾರ್ವಜನಿಕವಾಗಿ `ಎಡ್ಮ್ಯಾರ್ 1 ರ ಪ್ರಯುಕ್ತ ಸಿಎನ್‌ಸಿಯಿಂದ ಗೋಣಿಕೊಪ್ಪಲಿನಲ್ಲಿ ಪಂಜಿನ ಮೆರವಣಿಗೆ ಮತ್ತು ಮಾನವ ಸರಪಳಿ”ನ್ನು ಆಚರಿಸುತ್ತಿದೆ ಎಂದು ಎನ್.ಯು.ನಾಚಪ್ಪ ತಿಳಿಸಿದರು. ಕಾರ್ಯಕ್ರಮದಲ್ಲಿ ಪಟ್ಟಮಾಡ ಲಲಿತಾ ಗಣಪತಿ, ಲೆಫ್ಟಿನೆಂಟ್ ಕರ್ನಲ್ ಬಿ.ಎಂ.ಪಾರ್ವತಿ, ಅರೆಯಡ ಸವಿತಾ ತಿಮ್ಮಯ್ಯ, ಬೊಟ್ಟಂಗಡ ಸವಿತಾ ಗಿರೀಶ್, ಚೋಳಪಂಡ ಜ್ಯೋತಿ ನಾಣಯ್ಯ, ಅಜ್ಜಮಾಡ ಸಾವಿತ್ರಿ, ನಂದಿನೆರವoಡ ನಿಶಾ ಅಚ್ಚಯ್ಯ, ಮುದ್ದಿಯಡ ಲೀಲಾವತಿ, ಆದೆಂಗಡ ರೂಪಾ ರಮೇಶ್, ಕಲಿಯಂಡ ಪ್ರಕಾಶ್, ಅಳ್ಮಂಡ ಜೈ ಗಣಪತಿ, ಬಾಚರಣಿಯಂಡ ಚಿಪ್ಪಣ್ಣ, ಅರೆಯಡ ಗಿರೀಶ್ ತಿಮ್ಮಯ್ಯ, ಕೊಲ್ಲೀರಾ ಗಯಾ, ಜಮ್ಮಡ ಮೋಹನ್, ಅಜ್ಜಿಕುಟ್ಟಿರ ಲೋಕೇಶ್, ಬೊಟ್ಟಂಗಡ ಗಿರೀಶ್ ಪೆಮ್ಮಯ್ಯ, ಬಾಚರಣಿಯಂಡ ಹ್ಯಾರಿ ತಮ್ಮಯ್ಯ, ಮಂದಪoಡ ಮನೋಜ್ ಮಂದಣ್ಣ, ನಂದೇಟಿರ ರವಿ ಸುಬ್ಬಯ್ಯ, ಕಿರಿಯಮಾಡ ಶೆರಿನ್, ಬೇಪಡಿಯಂಡ ದಿನು ಅಚ್ಚಪ್ಪ, ಚಂಬoಡ ಜನತ್, ಬೇಪಡಿಯಂಡ ಬಿದ್ದಪ್ಪ, ಪುಟ್ಟಿಚಂಡ ಡಾನ್ ದೇವಯ್ಯ, ನೆಲ್ಲಮಕ್ಕಡ ವಿವೇಕ್, ಕುಲ್ಲೆಟಿರ ಅರುಣ ಬೇಬ, ನೆಲ್ಲಿರ ಮಧು, ಚಂಗoಡ ಚಾಮಿ ಪಳಂಗಪ್ಪ, ಮದ್ರೀರ ಕರುಂಬಯ್ಯ, ಕಾಂಡೇರ ಸುರೇಶ್, ಡಾ.ಕಾಳಿಮಾಡ ಶಿವಪ್ಪ, ಮಣವಟ್ಟಿರ ಶಿವಣಿ, ಅಜ್ಜಮಾಡ ಮೋಹನ್, ನಂದಿನೆರವoಡ ವಿಜು, ಅಜ್ಜಮಾಡ ಚಿಮ್ಮ, ಅಪ್ಪಾರಂಡ ಪ್ರಸಾದ್, ಕೊಣಿಯಂಡ ಸಂಜು ಸೋಮಯ್ಯ, ಮಾಣಿರ ಪ್ರವೀಣ್, ಅಪ್ಪೆಯಿಂಗಡ ಮಾಲೆ ಪೂಣಚ್ಚ, ಬಲ್ಲಚಂಡ ಸುನಿಲ್, ಬಲ್ಲಟಿಕಾಳಂಡ ರಾಯ್, ನೆರ್ಪಂಡ ಜಿಮ್ಮಿ, ನೆರ್ಪಂಡ ಪೊನ್ನಣ್ಣ, ಚೋಪಂಡ ನಾಣಯ್ಯ, ಪಾಲೇಕಂಡ ಪ್ರಧಾನ್, ಆದೇಂಗಡ ವಚನ್, ಆದೇಂಗಡ ರಮೇಶ್, ಪೊನ್ನೋಲ್ತಂಡ ಕಿರಣ್, ಜಮ್ಮಡ ಗಿಲ್, ಚಂಗುಲoಡ ರಾಜಪ್ಪ, ಪಾರ್ವಂಗಡ ನವೀನ್, ಕಿರಿಯಮಾಡ ಸಾವನ್, ಚೊಕ್ಕಂಡ ಕಟ್ಟಿ,ಸಾದೇರ ರಮೇಶ್, ಚಂಗಣಮಕ್ಕಡ ವಿನು, ಚಿಮ್ಮಣಮಾಡ ರಾಜ, ಮುದ್ದಿಯಡ ಧೀರಜ್, ತಡಿಯಂಗಡ ಬಾಬು ಶಂಕರ್, ಮಾಣಿರ ಮನು, ಚೀಯಬೆರ ಸತೀಶ್, ಅಜ್ಜಿನಕಂಡ ಸನ್ನಿ ಮಾಚಯ್ಯ, ಮಂದಪoಡ ದೀಪಕ್, ಬಲ್ಲಟಿಕಾಳಂಡ ಮಂಜು, ಮೀದೇರಿರ ತಿಮ್ಮಯ್ಯ, ಅರೆಯಡ ಚೆಂಗಪ್ಪ, ಉಳುವಂಗಡ ಶಿವು, ಕಾಡ್ಯಮಾಡ ಅಪ್ಪಯ್ಯ, ಮಾರಮಾಡ ಜಿತಿನ್, ನಂದೇಟಿರ ನಿಶು, ಅಚ್ಚಕಾಳೆರ ಸಂತು ಮತ್ತಿತರರು ಪಾಲ್ಗೊಂಡಿದ್ದರು.









