
ಮಡಿಕೇರಿ ಮೇ 4 NEWS DESK : ವಿದ್ಯುತ್ ವಿತರಣಾ 66/11 ಕೆ.ವಿ ಉಪಕೇಂದ್ರ ಪೊನ್ನಂಪೇಟೆಯಿಂದ ಹೊರಹೊಮ್ಮುವ ದೇವನೂರು, ಬಾಳೆಲೆ ಹಾಗೂ ನಲ್ಲೂರು ಫೀಡರ್‍ನಲ್ಲಿ ಮೇ, 05 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ತುರ್ತು ನಿರ್ವಹಣೆ ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ ಈ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ ದೇವನೂರು, ರಾಜಾಪುರ, ಕಿಸ್ತೂರು, ಬಾಳೆಲೆ, ಮಲ್ಲೂರು, ನಿಟ್ಟೂರು, ಕಾರ್ಮಾಡು, ಸುಳುಗೋಡು, ಪೊನ್ನಪ್ಪಸಂತೆ, ಕಿರಗೂರು, ಮತ್ತೂರು, ಕೊಟ್ಟಗೇರಿ, ಕೋಣನಕಟ್ಟೆ, ನಲ್ಲೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.








